ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್‌ನಲ್ಲಿ ಹಿಜಾಬ್ ವಿರೋಧಿ ಹೋರಾಟ; 31 ನಾಗರಿಕರ ಹತ್ಯೆ!

|
Google Oneindia Kannada News

ತೆಹ್ರಾನ್, ಸೆಪ್ಟೆಂಬರ್ 23: ಇರಾನ್ ನೆಲದಲ್ಲಿ ಹಿಜಾಬ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು, ಇದುವರೆಗೂ 31ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಓಸ್ಲೋ ಮೂಲದ ಎನ್‌ಜಿಒ ಗುರುವಾರ ತಿಳಿಸಿದೆ.
ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ ನಡೆಸುತ್ತಿದ್ದ ಮಾಹ್ಸಾ ಅಮಿನಿ ಅನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದರು. ಆದರೆ ಪೊಲೀಸ್ ಕಸ್ಟಡಿಯಲ್ಲಿ ಮಾಹ್ಸಾ ಅಮಿನಿ ನಿಗೂಢ ಸಾವಿನಿಂದ ಪ್ರತಿಭಟನೆ ಭುಗಿಲೆದ್ದಿದೆ. ವಾಸ್ತವದಲ್ಲಿ ಪ್ರತಿಭಟನೆಯನ್ನು ಇರಾನ್ ಭದ್ರತಾ ಸಿಬ್ಬಂದಿಯು ಕೊಂಚ ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಇರಾನ್‌ನಲ್ಲಿ ಷರಿಯಾ ಕಾನೂನು: ಬ್ಲೂ ಗರ್ಲ್ ಸಹರ್ ಸ್ವಯಂ ದಹನ ಮಾಡಿಕೊಂಡಿದ್ದು ಯಾಕೆ?ಇರಾನ್‌ನಲ್ಲಿ ಷರಿಯಾ ಕಾನೂನು: ಬ್ಲೂ ಗರ್ಲ್ ಸಹರ್ ಸ್ವಯಂ ದಹನ ಮಾಡಿಕೊಂಡಿದ್ದು ಯಾಕೆ?

ತಮ್ಮ ಮೂಲಭೂತ ಹಕ್ಕುಗಳು ಮತ್ತು ಘನತೆಯನ್ನು ಸಾಧಿಸಲು ಇರಾನ್ ಪ್ರಜೆಗಳು ಬೀದಿಗೆ ಇಳಿದಿದ್ದಾರೆ. ಅವರ ಶಾಂತಿಯುತ ಪ್ರತಿಭಟನೆಗೆ ಸರ್ಕಾರವು ಫೈರಿಂಗ್ ಮೂಲಕ ಪ್ರತಿಕ್ರಿಯಿಸುತ್ತಿದೆ ಎಂದು ಇರಾನ್ ಮಾನವ ಹಕ್ಕುಗಳ (IHR) ನಿರ್ದೇಶಕ ಮಹಮೂದ್ ಅಮಿರಿ-ಮೊಗದ್ದಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕುರ್ದಿಸ್ತಾನ್ ಪ್ರತಿಭಟನೆಗೆ ತೀವ್ರ ಸ್ವರೂಪ

ಕುರ್ದಿಸ್ತಾನ್ ಪ್ರತಿಭಟನೆಗೆ ತೀವ್ರ ಸ್ವರೂಪ

30ಕ್ಕೂ ಹೆಚ್ಚು ನಗರಗಳು ಮತ್ತು ಇತರ ಕೇಂದ್ರಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ದೃಢಪಡಿಸಿದೆ ಎಂದು ಐಎಚ್ಆರ್ ಹೇಳಿದೆ. ಪ್ರತಿಭಟನಾಕಾರರು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರ ಸಾಮೂಹಿಕ ಬಂಧನಗಳಾಗುವ ಸಾಧ್ಯತೆಯೂ ಇದೆ. ಪೊಲೀಸ್ ಬಂಧನದಲ್ಲಿದ್ದ ಮಾಹ್ಸಾ ಅಮಿನಿ ಸಾವಿನ ನಂತರ ಪ್ರತಿಭಟನೆಗಳು ಮೊದಲು ವಾರಾಂತ್ಯದಲ್ಲಿ ಉತ್ತರ ಪ್ರಾಂತ್ಯದ ಕುರ್ದಿಸ್ತಾನ್‌ನಲ್ಲಿ ಭುಗಿಲೆದ್ದಿದ್ದು ಈಗ ಅದು ದೇಶಾದ್ಯಂತ ಹರಡಿದೆ.

ಹಿಜಾಬ್ ವಿರುದ್ಧ ಹೋರಾಟದ ಮಧ್ಯೆ 31 ನಾಗರಿಕರ ಕೊಲೆ

ಹಿಜಾಬ್ ವಿರುದ್ಧ ಹೋರಾಟದ ಮಧ್ಯೆ 31 ನಾಗರಿಕರ ಕೊಲೆ

ಬುಧವಾರ ರಾತ್ರಿ ವೇಳೆಗೆ 11 ಮಂದಿಯು ಕ್ಯಾಸ್ಪಿಯನ್ ಸಮುದ್ರದ ಉತ್ತರ ಮಜಂದರನ್ ಪ್ರಾಂತ್ಯದ ಅಮೋಲ್ ಪಟ್ಟಣದಲ್ಲಿ ಮೃತಪಟ್ಟಿದ್ದರೆ, ಅದೇ ಪ್ರಾಂತ್ಯದ ಬಾಬೋಲ್‌ನಲ್ಲಿ ಆರು ಮಂದಿ ಸಾವಿನ ಮನೆ ಸೇರಿದ್ದಾರೆ ಎಂದು ಐಎಚ್ಆರ್ ಹೇಳಿದೆ.
ಇದರ ಮಧ್ಯೆ ಪ್ರಮುಖ ಈಶಾನ್ಯ ನಗರವಾದ ತಬ್ರಿಜ್ ಪ್ರತಿಭಟನೆಯಲ್ಲಿ ತನ್ನ ಮೊದಲ ಸಾವಿನ ಪ್ರಕರಣವನ್ನು ವರದಿ ಮಾಡಿದೆ. ಅಂತರಾಷ್ಟ್ರೀಯ ಸಮುದಾಯದ ಖಂಡನೆ ಮತ್ತು ಕಾಳಜಿಯ ಅಭಿವ್ಯಕ್ತಿ ಇನ್ನು ಮುಂದೆ ಸಾಕಾಗುವುದಿಲ್ಲ," ಎಂದು ಅಮಿರಿ-ಮೊಗದ್ದಮ್ ಹೇಳಿದ್ದಾರೆ. ಬುಧವಾರ ರಾತ್ರಿ ಎಂಟು ಮಂದಿ ಸೇರಿದಂತೆ ಕುರ್ದಿಸ್ತಾನ್ ಪ್ರಾಂತ್ಯ ಮತ್ತು ಉತ್ತರ ಇರಾನ್‌ನ ಇತರ ಕುರ್ದಿಷ್ ಜನನಿಬಿಡ ಪ್ರದೇಶಗಳಲ್ಲಿ 15 ಜನರನ್ನು ಕೊಲ್ಲಲಾಗಿದೆ ಎಂದು ಕುರ್ದಿಶ್ ಹಕ್ಕುಗಳ ಗುಂಪು ಹೆಂಗಾವ್ ಉಲ್ಲೇಖಿಸಿದೆ.

ಕೆಲವು ಪ್ರದೇಶಗಳಲ್ಲಿ ಇಂಟರ್ ನೆಟ್ ಸೌಲಭ್ಯ ಕಟ್

ಕೆಲವು ಪ್ರದೇಶಗಳಲ್ಲಿ ಇಂಟರ್ ನೆಟ್ ಸೌಲಭ್ಯ ಕಟ್

ಇರಾನ್ ರಾಜಧಾನಿ ತೆಹ್ರಾನ್ ಮತ್ತು ಕುರ್ದಿಸ್ತಾನ್‌ನ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಯಾವುದೇ ರೀತಿ ಸುಳ್ಳು ಸುದ್ದಿಗಳು ಹರಡದಂತೆ ನೋಡಿಕೊಳ್ಳಲು Instagram ಮತ್ತು WhatsApp ನಂತಹ ವೇದಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಇರಾನ್ ನೆಲದಲ್ಲಿ ಶುರುವಾಗಿದ್ದು ಹೇಗೆ ಹಿಜಾಬ್ ಹೋರಾಟ?

ಇರಾನ್ ನೆಲದಲ್ಲಿ ಶುರುವಾಗಿದ್ದು ಹೇಗೆ ಹಿಜಾಬ್ ಹೋರಾಟ?

ಪೊಲೀಸ್ ಕಸ್ಟಡಿಯಲ್ಲಿ 22 ವರ್ಷದ ಕುರ್ದಿಷ್ ಮಹಿಳೆಯ ಸಾವಿನ ನಂತರ ಸೆಪ್ಟೆಂಬರ್ 16 ರಂದು ಭುಗಿಲೆದ್ದ ಪ್ರತಿಭಟನೆಗಳು ಗುರುವಾರ ಮತ್ತಷ್ಟು ತೀವ್ರವಾಯಿತು. ಹಲವು ನಗರಗಳಲ್ಲಿ ಪ್ರತಿಭಟನಾಕಾರರು ಪೊಲೀಸ್ ಠಾಣೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದರು. ಮಹಿಳೆಯರು ತಮ್ಮ ಹಿಜಾಬ್‌ಗಳನ್ನು ಸುಡುವ ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವು ಮಹಿಳೆಯರು #Mahsa_Amini ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ತಮ್ಮ ಕೂದಲನ್ನು ಕತ್ತರಿಸುವ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಸರಿಯಾದ ರೀತಿಯಲ್ಲಿ ಹಿಜಾಬ್ ಧರಿಸಿಲ್ಲ ಎಂದು ಸೆಪ್ಟೆಂಬರ್ 16 ರಂದು ಮಾಹ್ಸಾ ಅಮಿನಿಯನ್ನು ಬಂಧಿಸಲಾಗಿತ್ತು.

English summary
31 civilians have been killed in Anti-Hijab protest at iran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X