• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

48 ಗಂಟೆಯಲ್ಲಿ 300 ತಾಲಿಬಾನ್ ಉಗ್ರರ ರುಂಡ ಚೆಂಡಾಡಿದ ಅಫ್ಘಾನ್ ಸೇನೆ!

|
Google Oneindia Kannada News

ಬರೋಬ್ಬರಿ 2 ದಶಕಗಳ ಬಳಿಕ ಅಫ್ಘಾನಿಸ್ತಾನ ಮತ್ತೆ ಕೊತಕೊತ ಕುದಿಯುತ್ತಿದೆ. ದೇಶ ಯಾವಾಗ ಬೇಕಾದ್ರೂ ತಾಲಿಬಾನ್ ಉಗ್ರರ ವಶವಾಗುವ ಆತಂಕ ಸೃಷ್ಟಿಯಾಗಿದೆ. ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದ್ದು ಅಮೆರಿಕದ ಅದೊಂದು ತಪ್ಪು ನಿರ್ಧಾರ. ದಿಢೀರ್ ಅಫ್ಘಾನ್‌ನಿಂದ ತನ್ನ ಮಿಲಿಟರಿಯನ್ನು ಹಿಂದೆ ಕರೆಸಿಕೊಳ್ಳಲು ಅಮೆರಿಕ ಮುಂದಾಗಿದ್ದೇ ಇಷ್ಟೆಲ್ಲಾ ಸಮಸ್ಯೆ ಸೃಷ್ಟಿಸಿದೆ. ಅಮೆರಿಕದ ಈ ನಿರ್ಧಾರ ಹೊರಬಿದ್ದ ಬಳಿಕ, ಅಂದ್ರೆ ಕಳೆದ 2-3 ತಿಂಗಳಿಂದಲೂ ಅಫ್ಘಾನಿಸ್ತಾನ ಬೂದಿ ಮುಚ್ಚಿದ ಕೆಂಡವಾಗಿದೆ.

ತಾಲಿಬಾನ್ ಉಗ್ರ ಪಡೆ 20 ವರ್ಷಗಳ ನಂತರ ಮತ್ತೊಮ್ಮೆ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದ್ದು, ಇನ್ನೇನು ದೇಶ ತಾಲಿಬಾನಿ ಕೈಗೆ ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಅಲ್ಲಿನ ಸೇನೆ ಮತ್ತೆ ಪುಟಿದೆದ್ದಿದೆ. ಅಮೆರಿಕ ವಾಪಸ್ ಕರೆಸಿಕೊಂಡಿದ್ದ ಸೈನಿಕರಲ್ಲಿ ಒಂದಷ್ಟು ಬೆಟಾಲಿಯನ್‌ನ ವಾಪಸ್ ಅಫ್ಘಾನಿಸ್ತಾನಕ್ಕೆ ಕಳುಹಿಸಿ, ವಾಯುದಾಳಿ ಆರಂಭಿಸಿದೆ.

ಹೀಗೆ ಅಮೆರಿಕ ಮತ್ತು ಅಫ್ಘಾನ್ ಪಡೆಗಳು ಒಗ್ಗಟ್ಟಿನಿಂದ ತಾಲಿಬಾನ್ ಉಗ್ರರ ವಿರುದ್ಧ ತಿರುಗಿಬಿದ್ದಿವೆ. ದಾಳಿ, ಪ್ರತಿದಾಳಿ ಮಧ್ಯೆ ಸುಮಾರು 300 ತಾಲಿಬಾನ್ ಉಗ್ರರ ರುಂಡ ಚೆಂಡಾಡಿದ್ದಾರೆ ಸೈನಿಕರು. 48 ಗಂಟೆಗಳಲ್ಲಿ 300 ಉಗ್ರರ ಜೀವ ತೆಗೆಯಲಾಗಿದ್ದು, ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲು ಅಫ್ಘಾನ್ ಸರ್ಕಾರ ಮುಂದಾಗಿದೆ.

 ‘ಅಮೆರಿಕದಿಂದ ನೆಮ್ಮದಿ ಹಾಳಾಯ್ತು’

‘ಅಮೆರಿಕದಿಂದ ನೆಮ್ಮದಿ ಹಾಳಾಯ್ತು’

ಅಫ್ಘಾನ್ ಪರಿಸ್ಥಿತಿ ಸರಿಹೋಗುತ್ತಿತ್ತು, ಜನ ಈಗೀಗ ನೆಮ್ಮದಿಯಾಗಿದ್ದರು. ಆದ್ರೆ ಅಮೆರಿಕ ಕೈಗೊಂಡ ನಿರ್ಧಾರ ಎಲ್ಲವನ್ನೂ ಹಾಳು ಮಾಡಿದೆ ಅಂತಾ ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ಮತ್ತೊಮ್ಮೆ ಗುಡುಗಿದ್ದಾರೆ. ತಕ್ಷಣ ಸೇನೆ ವಾಪಸ್ ಕರೆಸಿಕೊಳ್ಳಲು ಅಮೆರಿಕ ಮುಂದಾಗಿದ್ದೇ ಅವಾಂತರಕ್ಕೆ ಕಾರಣವೆಂದು ಘನಿ ಆರೋಪಿಸಿದ್ದಾರೆ. ಅದರಲ್ಲೂ ಸೂಕ್ಷ್ಮ ಪ್ರದೇಶಗಳಿಂದ ತನ್ನ ಸೇನೆಯನ್ನ ಮತ್ತು ಯುದ್ಧ ವಿಮಾನಗಳನ್ನು ವಾಪಸ್ ಕರೆಸಿಕೊಳ್ಳುವ ಮೊದಲು ಅಫ್ಘಾನ್ ಪಡೆಗಳಿಗೆ ಕನಿಷ್ಠ ಮಾಹಿತಿಯನ್ನೂ ನೀಡಿರಲಿಲ್ಲ ಎಂಬ ಆರೋಪವಿದೆ. ಇದೇ ಕಾರಣಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ತಾಲಿಬಾನ್ ಉಗ್ರರು ಗಡಿ ಪ್ರದೇಶ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ನಿಯಂತ್ರಣ ಸಾಧಿಸುತ್ತಿದ್ದಾರೆ ಎನ್ನಲಾಗಿದೆ.

ಬಿಲದಲ್ಲಿ ಅಡಗಿದ್ದವರು ಮೇಲೆದ್ದರು..!

ಬಿಲದಲ್ಲಿ ಅಡಗಿದ್ದವರು ಮೇಲೆದ್ದರು..!

ಅಮೆರಿಕ ಮಾಡಿಕೊಂಡಿರುವ ಮಹಾ ಎಡವಟ್ಟು ಅಫ್ಘಾನ್‌ನ ಮತ್ತೆ ರಕ್ತದ ಮಡುವಿಗೆ ತಳ್ಳಿದಂತೆ ಕಾಣುತ್ತಿದೆ. ಏಕೆಂದರೆ ಇಷ್ಟು ದಿನ ಅಮೆರಿಕ ಸೇನೆ ಇದೆ ಅಂತಾ ತಾಲಿಬಾನ್ ಉಗ್ರರು ಒಂದಷ್ಟು ಬಾಲ ಮುದುರಿಕೊಂಡು ಬೆಟ್ಟ, ಗುಡ್ಡದಲ್ಲಿ ಅಡಗಿದ್ದರು. ಆದರೆ ಯಾವಾಗ ಅಮೆರಿಕ ಸೇನೆ ಸಮೇತ ಅಲ್ಲಿಂದ ಜಾಗ ಖಾಲಿ ಮಾಡೋಕೆ ಮುಂದಾಯ್ತೋ, ಅಂದಿನಿಂದ ಪಾಪಿ ಉಗ್ರರು ಬಾಲ ಬಿಚ್ಚುತ್ತಿದ್ದಾರೆ. ಒಂದೊಂದೇ ಊರುಗಳು ತಾಲಿಬಾನಿಗಳ ವಶವಾಗುತ್ತಿವೆ. ಉಗ್ರರ ಅಟ್ಟಹಾಸ ಎಷ್ಟಿದೆ ಎಂದರೆ, ಕೆಲವು ವಾರಗಳಿಂದ ಹಿಂಸಾಚಾರ 3-4 ಪಟ್ಟು ಹೆಚ್ಚಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅಮೆರಿಕ ಒಂದಷ್ಟು ಬೆಟಾಲಿಯನ್‌ನ ವಾಪಸ್ ಕಳುಹಿಸಿದ್ದರೂ ಪ್ರಯೋಜನವೇ ಆಗುತ್ತಿಲ್ಲ. ಭವಿಷ್ಯದಲ್ಲಿ ಈ ನಿರ್ಧಾರ ಅಫ್ಘಾನ್ ಜೊತೆಗೆ ಅಮೆರಿಕಗೂ ಮುಳುವಾಗುವ ಸಾಧ್ಯತೆ ಇದೆ.

ಒಂದೊಂದೇ ಹಳ್ಳಿ ಸ್ವಾಹ..!

ಒಂದೊಂದೇ ಹಳ್ಳಿ ಸ್ವಾಹ..!

ತಾಲಿಬಾನ್ ಉಗ್ರರು ಅದೆಷ್ಟು ಕಿರಾತಕರು ಎಂಬುದನ್ನು ಬಿಡಿಸಿ ಹೇಳಬೇಕಾದ ಅಗತ್ಯತೆ ಇಲ್ಲ. ಒಂದು ಕಾಲದ ಸ್ವರ್ಗದಂತಹ ಜಾಗ ಅಫ್ಘಾನಿಸ್ತಾನ ಇಂದು ನರಕವಾಗಿ ಬದಲಾಗಲು ತಾಲಿಬಾನ್ ಗ್ಯಾಂಗ್ ಕಾರಣವಾಯಿತು. ಆದರೆ 20 ವರ್ಷಗಳ ಹಿಂದೆ ಅಮೆರಿಕ ಸೇನೆ ಭಾರಿ ಪ್ರಮಾಣದಲ್ಲಿ ತನ್ನ ಗ್ಯಾಂಗ್ ಕರೆದುಕೊಂಡು ಬಂದಿತ್ತು. ಆ ಬಳಿಕ ಪರಿಸ್ಥಿತಿ ಒಂದಷ್ಟು ಹಿಡಿತಕ್ಕೆ ಸಿಕ್ಕಿತ್ತು ಎನ್ನಬಹದಾದರೂ ಉಗ್ರರ ದಾಳಿ ನಿಂತಿರಲಿಲ್ಲ. ಈಗ ದಿಢೀರ್ ಅಮೆರಿಕ ಸೇನೆ ಜಾಗ ಖಾಲಿ ಮಾಡುತ್ತಿದ್ದು, ತಾಲಿಬಾನ್ ಕಿರಾತಕರು ಒಂದೊಂದೇ ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. ಜನರನ್ನ ಮನಸ್ಸಿಗೆ ಬಂದಂತೆ ಹಿಂಸಿಸುತ್ತಿದ್ದಾರೆ.

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಬ್ರಿಟಿಷರಿಂದ ಅಫ್ಘಾನ್‌ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತ ಮೊದಲಾದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯಕ್ಕೆ ಅಫ್ಘಾನ್‌ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ. ಅಫ್ಘಾನ್‌ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನ ರಕ್ತ ಪಿಪಾಸುಗಳ ದಾಳಿಗೆ ಬಲಿಯಾಗಿದ್ದಾರೆ. ತಾಲಿಬಾನಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಕಂಡ ಕಂಡಲ್ಲಿ ಪಟಾಕಿಗಳಂತೆ ಉಗ್ರರು ಬಾಂಬ್ ಉಡಾಯಿಸುತ್ತಿದ್ದಾರೆ.

ಹೊಟ್ಟೆಗೆ ಅನ್ನವಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ

ಅಫ್ಘಾನಿಸ್ತಾನದ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ, ಅಲ್ಲಿ ಬದುಕಬೇಕು ಎಂದರೆ ನರಕದರ್ಶನ ಗ್ಯಾರಂಟಿ. ಹೆಜ್ಜೆ ಹೆಜ್ಜೆಗೂ ಆವರಿಸುವ ಭಯ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕ. ನೆಮ್ಮದಿ, ಶಾಂತಿ ಎಂಬುದೇ ಅಫ್ಘಾನಿಸ್ತಾನದ ಜನರಿಗೆ ಮರೆತು ಹೋದಂತಿದೆ. ಇನ್ನು ಅಲ್ಲಿನ ಆರ್ಥಿಕ ಸ್ಥಿತಿ ಕೂಡ ತೀರಾ ಹದಗೆಟ್ಟು ಹೋಗಿದ್ದು, ಹೊಟ್ಟೆಗೆ ಅನ್ನವಿಲ್ಲದೆ ಕೋಟ್ಯಂತರ ಮಂದಿ ನರಳುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸವೂ ಸಿಗದ ಪರಿಸ್ಥಿತಿ ಅಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿದೆ. ಹೀಗೆ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆ ನೆಪ ಮಾಡಿ ಬಂದು ಸೇರಿಕೊಂಡ ಯಾವುದೇ ದೇಶ ಕೂಡ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲ ಸಕ್ಸಸ್ ಆಗಿಲ್ಲ. ಅದು ಬಿಡಿ ಪ್ರಾಮಾಣಿಕ ಪ್ರಯತ್ನಗಳನ್ನೂ ನಡೆಸುತ್ತಿಲ್ಲ ಎಂಬ ಆರೋಪವಿದೆ.

English summary
More than 300 Taliban Terrorists are killed by Afghan forces in 48 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X