ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲು ಕುಡಿಯದ 3 ವರ್ಷದ ಮಗುವನ್ನು ಮನೆಯಿಂದ ಹೊರಹಾಕಿದ ತಂದೆ!

|
Google Oneindia Kannada News

ಆಸ್ಟಿನ್(ಟೆಕ್ಸಾಸ್), ಅಕ್ಟೋಬರ್ 10: ಅಪ್ಪ ಅಂದ್ರೆ ತನ್ನ ಮಕ್ಕಳ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಮಾಂತ್ರಿಕ. ಆದರೆ ಮೂರು ವರ್ಷದ ಪುಟ್ಟ ಮಗುವನ್ನು ಹಾಲು ಕುಡಿಯಲಿಲ್ಲ ಎಂಬ ಒಂದೇ ಕಾರಣಕ್ಕೆ ಮಧ್ಯರಾತ್ರಿಯೇ ಮನೆಯಿಂದ ಹೊರಹಾಕಿದ ಅಪ್ಪನ ಬಗ್ಗೆ ಕೇಳಿದ್ದೀರಾ?

ಅಮೆರಿಕದ ಟೆಕ್ಸಾಸ್ ನ ಆಸ್ಟಿನ್ ಎಂಬಲ್ಲಿ ನಡೆದ ಘಟನೆ ಇದು. ಭಾರತೀಯ ಕಾಲಮಾನದ ಪ್ರಕಾರ ಶನಿವಾರ ರಾತ್ರಿ ಮಾಥ್ಯೂ ಎನ್ನುವವರ ದತ್ತುಪುತ್ರಿ ಶೆರಿನ್ ಹಾಲುಕುಡಿಯುವುದಿಲ್ಲ ಎಂದು ಹಟ ಮಾಡಿದ್ದಾಳೆ. ಪರಿ ಪರಿಯಾಗಿ ಕೇಳಿಕೊಂಡರೂ ಹಾಲು ಕುಡಿಯದ ಪುಟ್ಟ ಮಗುವಿಗೆ ಮನೆಯಾಚೆ ಇರುವ ದೊಡ್ಡ ಮರದ ಕೆಳಗೆ ತಾಸುಗಟ್ಟಲೆ ನಿಂತಿರುವ ಶಿಕ್ಷೆಯನ್ನು ತಂದೆ ದಯಪಾಲಿಸಿದ್ದಾನೆ.

3 year girl missing after sent outside home at night as punishment by dad!

ಕೆಲಹೊತ್ತು ಮಗು ಅಲ್ಲೇ ನಿಂತಿರುವುದನ್ನು ತಂದೆ ಕಿಟಕಿಯಿಂದ ನೋಡಿ ಸುಮ್ಮನಾಗಿದ್ದಾನೆ. ಆದರೆ ಒಂದೆರಡು ತಾಸು ಕಳೆದ ನಂತರ ಮಗು ಅಲ್ಲಿ ಕಾಣದಿದ್ದಾಗ ಸ್ಥಳಕ್ಕೆ ಹೋಗಿ ಹುಡುಕಾಡಿದರೆ ಮಗು ಸುತ್ತ ಮುತ್ತ ಎಲ್ಲೂ ಕಾಣಿಸದೆ, ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಗಾಬರಿಗೊಂಡ ಮ್ಯಾಥ್ಯೂ ಪೊಲೀಸರಿಗೆ ದೂರು ನೀಡಿದ್ದಾನೆ.

ಮಗು ಶೆರಿನ್ ಭಾರತೀಯ ಮೂಲದವಳಾಗಿದ್ದು, ಆಕೆಯನ್ನು ಮ್ಯಾಥ್ಯೂ ದಂಪತಿ ದತ್ತುಪಡೆದಿದ್ದರು. ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಶೆರಿನ್, ಮ್ಯಾಥ್ಯೂ ದಂಪತಿ ಆಕೆಯನ್ನು ದತ್ತುಪಡೆದ ಮೇಲೆ ಆರೋಗ್ಯದಲ್ಲಿ ಸುಧಾರಿಸಿಕೊಂಡಿದ್ದಳು. ಆದರೆ ಮುಗ್ಧ ಮಗು ಹಾಲು ಕುಡಿಯುವುದಿಲ್ಲ ಎಂದು ನಡುರಾತ್ರಿಯಲ್ಲಿ, ಆ ಮಗುವನ್ನು ನಿರ್ದಯವಾಗಿ ಮನೆಯಿಂದ ಆಚೆ ನಿಲ್ಲಿಸಿದ ತಂದೆಯ ವರ್ತನೆ ಕುರಿತು ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಾಪತ್ತೆಯಾಗಿರುವ ಮಗುವಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಮಗುವಿನ ಕುರಿತು ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

English summary
Shirin, a 3 year girl is missing after her father punished her for not drinking milk. Her father told her to stand near a large tree outside his home in midnight!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X