ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದಲ್ಲಿ 4.8 ತೀವ್ರತೆಯ ಭೂಕಂಪ: ಮೂವರು ಸಾವು

|
Google Oneindia Kannada News

ಜಕಾರ್ತ, ಅಕ್ಟೋಬರ್ 16: ಇಂಡೋನೇಷ್ಯಾದ ರೆಸಾರ್ಟ್ ದ್ವೀಪದಲ್ಲಿ ಶನಿವಾರ 4.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ವಿಪತ್ತು ನಿರ್ವಹಣ ಪಡೆ ಹಾಗೂ ರಕ್ಷಣ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯಪುರ; ಮತ್ತೆ ಕಂಪಿಸಿದ ಭೂಮಿ, 3.2 ತೀವ್ರತೆ ದಾಖಲು ವಿಜಯಪುರ; ಮತ್ತೆ ಕಂಪಿಸಿದ ಭೂಮಿ, 3.2 ತೀವ್ರತೆ ದಾಖಲು

ಭೂಕಂಪನದ ತೀವ್ರತೆಗೆ ಹಲವಾರು ಮನೆಗಳು ನೆಲಕ್ಕುರುಳಿದ್ದು, ಬಾಂಗ್ಲಿ ಜಿಲ್ಲೆಯಲ್ಲಿ ಭೂಕಂಪನದಿಂದ ಹೆಚ್ಚಿನ ಹಾನಿಯಾಗಿದೆ ಎಂದು ಏಜೆನ್ಸಿ ತಿಳಿಸಿದೆ.

3 Killed, 7 Injured As Moderate Earthquake Rocks Indonesia’s Bali

ಮುಂಜಾನೆ ಸುಮಾರು 3:18ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, 10 ಕಿ.ಮೀ ಆಳದಲ್ಲಿ ಹಾಗೂ ಕರಂಗಾಸೆಮ್ ಜಿಲ್ಲೆಯಿಂದ ವಾಯುವ್ಯ ಭಾಗದ 8 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. 7 ಮಂದಿ ಗಾಯಗೊಂಡಿದ್ದಾರೆ., ಭೂಕಂಪನದಿಂದ ಸುನಾಮಿಯ ಯಾವುದೇ ಆತಂಕವಿಲ್ಲ ಎಂದು ಹವಾಮಾನ ಮತ್ತು ಭೂಶಾಸ್ತ್ರ ಏಜೆನ್ಸಿ ತಿಳಿಸಿದೆ.

ಕಟ್ಟಡದ ಅವಶೇಷಗಳು ಮೈಮೇಲೆ ಬಿದ್ದ ಕಾರಣ 7 ಮಂದಿ ಎಲುಬುಗಳು ಮುರಿದಿವೆ,ಅವರನ್ನು ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹಾಗೆಯೇ ಮತ್ತಷ್ಟು ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜನವರಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ 42 ಮಂದಿ ಮೃತಪಟ್ಟಿದ್ದರು: ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಭೀಕರ ಭೂಕಂಪ ಸಂಭವಿಸಿತ್ತು.

ಭೂಕಂಪದ ಕರಾಳತೆಗೆ ಬರೋಬ್ಬರಿ 42 ಮಂದಿ ಸಾವನಪ್ಪಿದ್ದರು. ಇನ್ನು 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಕಂಪನ ದಾಖಲಾಗಿತ್ತು. ಭಾರೀ ಪ್ರಮಾಣದ ಭೂಕಂಪನದಿಂದ ಆಸ್ಪತ್ರೆ, ಕಟ್ಟಡಗಳು ಕುಸಿದು ಬಿದ್ದ ಪರಿಣಾಮ ನೂರಾರು ಮಂದಿ ಅವಶೇಷಗಳಡಿ ಸಿಲುಕುವಂತಾಯಿತು.

ಘಟನೆಯಲ್ಲಿ ಹಲವರ ಪ್ರಾಣ ಪಕ್ಷಿ ಹಾರಿ ಹೋದರೆ, ಇನ್ನು ಹಲವರು ಅವಶೇಷಗಳಡಿ ಸಿಲುಕಿ ಜೀವಕ್ಕಾಗಿ ಒದ್ದಾಡುತ್ತಿರುವ ದೃಶ್ಯ ಕೂಡ ಕಂಡು ಬಂದಿತ್ತು.

English summary
Three people were killed and another seven were injured when a moderately strong earthquake and an aftershock hit Indonesia’s resort island of Bali early Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X