ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ಸಾಧಕಿ ಅಶ್ವಿನಿ ಅಂಗಡಿಗೆ ಬ್ರಿಟನ್ ರಾಣಿ ಪ್ರಶಸ್ತಿ

|
Google Oneindia Kannada News

ಲಂಡನ್‌, ಜೂ. 13: ಅಂಗವಿಕಲರ ಹಕ್ಕಿಗಾಗಿ ಜಗತ್ತಿನಾದ್ಯಂತ ಸಂಗೀತ, ಚಲನಚಿತ್ರ, ಸಂವಾದಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ಸಾಧಕಿ ಅಶ್ವಿನಿ ಅಂಗಡಿ ಅವರಿಗೆ ಬ್ರಿಟನ್‌ನ ರಾಣಿ ಹೆಸರಿನಲ್ಲಿ ಕೊಡಮಾಡುವ ಮೊಟ್ಟಮೊದಲ ಯುವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅಶ್ವಿನಿ ಸೇರಿದಂತೆ ಭಾರತದ ಮೂವರು ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ಜೂನ್‌ 22ರಂದು ಲಂಡನ್‌ನ ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ. ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡು ಸಮಾಜದ ಒಳಿತಿಗಾಗಿ ದುಡಿಯುತ್ತಿರುವ ಯುವ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕಾಮನ್‌ವೆಲ್ತ್‌ ರಾಷ್ಟ್ರದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಕನ್ನಡತಿ ಅಶ್ವಿನಿ ಅವರು ಗೌರವಕ್ಕೆ ಭಾಜನರಾಗಿದ್ದಾರೆ.[ಅಂಗವಿಕಲರ ಜಾಗೃತಿಗೆ ಅಶ್ವಿನಿ ಅಂಗಡಿ ಸಂವಾದ]

angadi

ಭಾರತದ ಮೂವರು ಸೇರಿದಂತೆ ವಿಶ್ವದ 60 ಯುವಕ-ಯುವತಿಯರನ್ನು ಪ್ರಶಸ್ತಿಯಾಗಿ ಆಯ್ಕೆ ಮಾಡಲಾಗಿದೆ. ಅಶ್ವಿ‌ನಿ ಅಂಗಡಿ, ಅಕ್ಷಯ್‌ ಜಾಧವ್‌ ಮತ್ತು ದೇವಿಕಾ ಮಲಿಕ್‌ ಭಾರತವನ್ನು ಪ್ರತಿನಿಧಿಸುತ್ತಿರುವ ಸಾಧಕರು.[ನಾಳೆಯನ್ನು ಇಂದೇ ನೋಡಬಲ್ಲ ಕನ್ನಡತಿ ಅಶ್ವಿನಿ]

ಬೆಂಗಳೂರಿನಲ್ಲಿ ಬೆಳಕು ಎಂಬ ಅಕಾಡೆಮಿ ಸ್ಥಾಪಿಸಿ ಅಂಧ ಮಕ್ಕಳ ಬಾಳಿಗೆ ಹೊಸ ಚೈತನ್ಯ ನೀಡುತ್ತಿರುವ ಅಶ್ವಿನಿ ಅಂಗಡಿ, ಪ್ಯಾರಾ ಅಥ್ಲೀಟ್‌ ಅಕ್ಷಯ್‌ ಜಾಧವ್‌ ಗ್ರಾಮೀಣ ಶಿಕ್ಷಣಕ್ಕೆ ಟೊಂಕ ಕಟ್ಟಿ ನಿಂತಿರುವ ದೇವಿಕಾ ಮಲಿಕ್‌ ದೇಶದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

English summary
Three Indians, including two women, have won an inaugural award set up by Queen Elizabeth II to recognise exceptional youths who are transforming the lives of others and making a difference in their communities from across the Commonwealth nations. The British monarch will present the awards to Ashwini Angadi, Akshay Jadhao and Devika Malik from India among 60 others at a gala ceremony in Buckingham Palace on June 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X