• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳನ ಅಂಗಳಕ್ಕೆ ಹಾರಲಿದ್ದಾರೆ ಮೂವರು ಭಾರತೀಯರು

|

ನವದೆಹಲಿ, ಫೆ, 16: ಮಂಗಳನ ಅಂಗಳಕ್ಕೆ ತೆರಳಲು ಮೂವರು ಭಾರತೀಯರಿಗೆ ಅವಕಾಶ ಒದಗಿ ಬಂದಿದೆ. 2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಸ್ಥಾನ ಸಿಕ್ಕಿದೆ.

ಕೇರಳದ ಪಾಲಕ್ಕಾಡ್ ನಿವಾಸಿ ಶ್ರದ್ಧಾ ಪ್ರಸಾದ್ , ಫ್ಲೋರಿಡಾದಲ್ಲಿರುವ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದ ಡಾಕ್ಟರೇಟ್ ಪಡೆದಿರುವ ತರಣಜಿತ್ ಸಿಂಗ್ ಭುಟಿಯಾ, ದುಬೈನಲ್ಲಿ ನೆಲೆಸಿರುವ ರಿತಿಕಾ ಸಿಂಗ್ ಮಂಗಳನಲ್ಲಿಗೆ ತೆರಳಲಿದ್ದಾರೆ.[ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]

ಶ್ರದ್ಧಾ ಕೊಯಂಬತ್ತೂರ್ ಮೆಕಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದಾರೆ. ಎರಡನೇ ಪಟ್ಟಿಯಲ್ಲಿ 3 ಮಲಯಾಳಿಗಳು ಸೇರಿದಂತೆ 44 ಭಾರತೀಯರು ಇದ್ದರು. ಕೊನೆಯ 100 ಜನರ ಪಟ್ಟಿ ತಯಾರಿಸಲಾಗಿದ್ದು ಅದರಲ್ಲಿ ಮೂವರು ಭಾರತೀಯರಿಗೆ ಮಾತ್ರ ಸ್ಥಾನ ದೊರೆತಿದೆ.[ಮಂಗಳನಿಂದ ಬಂದ ವಿಡಿಯೋ ನೋಡಿದ್ದೀರಾ?]

ಈ ಯಾತ್ರೆಗೆ ಆನ್ ಲೈನ್ ಮೂಲಕ 202, 586 ಅರ್ಜಿಗಳು ಬಂದಿದ್ದವು. ಇದರಲ್ಲಿ ಆಯ್ಕೆ ಮಾಡಿ, 100 ಜನರ ಪಟ್ಟಿ ತಯಾರಿಸಲಾಗಿತ್ತು. 50 ಗಂಡಸರು ಮತ್ತು 50 ಮಹಿಳೆಯರನ್ನು ಅಂತಿಮ ಪಟ್ಟಿಯಲ್ಲಿರಿಸಿಕೊಳ್ಳಲಾಗಿದೆ. ಯುಎಸ್ ನ 39, ಯುರೋಪ್ ನ 31, ಏಷ್ಯಾದ 16, ಆಫ್ರಿಕಾದ 7 ಹಾಗೂ ಒಷೇನಿಯಾದ 7 ಜನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.[ಗಗನಕ್ಕೆ ಹಾರಲಿದ್ದಾನೆ ಭಾರತದ ಮಾನವ]

ಮೊದಲ ಹಂತದಲ್ಲಿ ನಾಲ್ಕು ಜನರನ್ನು ಮಂಗಳನಲ್ಲಿಗೆ ಕಳುಹಿಸಿ ಅಲ್ಲಿನ ಪರಿಸರ ಅರಿಯಲಾಗುವುದು. ನಂತರ 40 ಜನರನ್ನು ಕಳಿಸಿ ಕಾಲನಿ ನಿರ್ಮಿಸಲಾಗುವುದು ಎಂದು ಯೋಜನೆ ಹಮ್ಮಿಕೊಂಡಿರುವ ಹಾಲೆಂಡ್ ಮೂಲದ ಸಂಸ್ಥೆ ತಿಳಿಸಿದೆ.

English summary
Three Indians, two women and one man, have made it to the list of 100 applicants who will move on to the next round of an ambitious private mission that aims to send four people on a one-way trip to Mars in 2024.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X