ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಕಾಬೂಲ್; ಶಾಲೆಗಳಲ್ಲಿ 3 ಸ್ಪೋಟ, ಹಲವರ ಸಾವು

|
Google Oneindia Kannada News

ಕಾಬೂಲ್, ಏಪ್ರಿಲ್ 19; ಅಫ್ಘಾನಿಸ್ತಾನದ ಕಾಬೂಲ್‌ನ ಶಾಲೆಯಲ್ಲಿ ಮೂರು ಸ್ಫೋಟ ಸಂಭವಿಸಿದೆ. ಪಶ್ಚಿಮ ಕಾಬೂಲ್‌ನ ಪ್ರೌಢಶಾಲೆಯಲ್ಲಿ ಘಟನೆ ನಡೆದಿದ್ದು, ಹಲವಾರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಮಂಗಳವಾರ ಶಾಲೆ ಮತ್ತು ಅದರ ಅಕ್ಕಪಕ್ಕದಲ್ಲಿರುವ ಅಲ್ಪಸಂಖ್ಯಾತ ಶಿಯಾ ಹಜಾರಾ ಸಮುದಾಯದವರನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿದೆ. ಘಟನೆಯಲ್ಲಿ ಹಲವಾರು ಜನರು ಮೃತಪಟ್ಟಿದ್ದಾರೆ ಎಂದು ಕಾಬೂಲ್ ಆರೋಗ್ಯ ಸಚಿವಾಲಯ ಹೇಳಿದೆ.

ಕಾಬೂಲ್: ಹಜಾರಾ ಶಿಯಾರಿರುವ ಪ್ರದೇಶದಲ್ಲಿ ಭಾರಿ ಬಾಂಬ್ ಸ್ಫೋಟಕಾಬೂಲ್: ಹಜಾರಾ ಶಿಯಾರಿರುವ ಪ್ರದೇಶದಲ್ಲಿ ಭಾರಿ ಬಾಂಬ್ ಸ್ಫೋಟ

3 Explosions In Kabul School Several Killed

ಇದುವರೆಗೂ ನಾಲ್ವರು ಮೃತಪಟ್ಟಿದ್ದಾರೆ. 14 ಜನರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪ್ರೌಢಶಾಲೆಯಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಪಶ್ಚಿಮ ಕಾಬೂಲ್‌ನ ಮುಮ್ತಾಝ್ ಪ್ರೌಢಶಾಲೆ ಆವರಣದಲ್ಲಿ ಮೊದಲ ಸ್ಫೋಟದ ವರದಿಯಾಗಿದೆ.

ಕಾಬೂಲ್ ಮಿಲಿಟರಿ ಆಸ್ಪತ್ರೆ ಮೇಲೆ ಉಗ್ರರ ದಾಳಿ: 19 ಜನ ಬಲಿ, 50 ಮಂದಿಗೆ ಗಾಯಕಾಬೂಲ್ ಮಿಲಿಟರಿ ಆಸ್ಪತ್ರೆ ಮೇಲೆ ಉಗ್ರರ ದಾಳಿ: 19 ಜನ ಬಲಿ, 50 ಮಂದಿಗೆ ಗಾಯ

ಕಾಬೂಲ್‌ನ ಕಮಾಂಡರ್‌ನ ವಕ್ತಾರ ಖಲೀದ್ ಝರ್ಡನ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, "ಶಿಯಾ ಸಮುದಾಯದವರನ್ನು ಗುರಿಯಾಗಿಸಿಕೊಂಡು ಮೂರು ಸ್ಪೋಟ ನಡೆಸಲಾಗಿದೆ. ಪ್ರೌಢಶಾಲೆಯಲ್ಲಿ ಹಲವರು ಗಾಯಗೊಂಡಿರುವ ಸಾಧ್ಯತೆ ಇದೆ" ಎಂದು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಅಫ್ಘಾನಿಸ್ತಾನಲ್ಲಿ ಅಫೀಮು ಕೃಷಿ ನಿಷೇಧಿಸಿದ ತಾಲಿಬಾನ್ಅಫ್ಘಾನಿಸ್ತಾನಲ್ಲಿ ಅಫೀಮು ಕೃಷಿ ನಿಷೇಧಿಸಿದ ತಾಲಿಬಾನ್

ಇದುವರೆಗೂ ದಾಳಿಯ ಹೊಣೆಯನ್ನು ಯಾವ ಸಂಘಟನೆ ಸಹ ಹೊತ್ತುಕೊಂಡಿಲ್ಲ. ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳು ವಾಪಸ್ ಆದ ಬಳಿಕ ದೇಶದಲ್ಲಿ ಹಲವಾರು ದಾಳಿಗಳು ನಡೆಯುತ್ತಿವೆ. ಕಾಬೂಲ್‌ ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ.

ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ದೇಶವನ್ನು ಸುರಕ್ಷಿತಗೊಳಿಸಲಾಗಿದೆ ಎಂದು ತಾಲಿಬಾನಿಗಳು ಹೇಳಿದ್ದಾರೆ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಪರಿಸ್ಥಿತಿಯನ್ನು ಬೇರೆ ರೀತಿಯಲ್ಲೇ ವಿಶ್ಲೇಷಣೆ ಮಾಡಲಾಗುತ್ತಿದೆ. ಇನ್ನೂ ಉಗ್ರರ ಚಟುವಟಿಕೆಗಳು ನಡೆಯುತ್ತಿವೆ ಎಂದು ಉಲ್ಲೇಖಿಸಲಾಗುತ್ತಿದೆ.

ಶಿಯಾ ಹಜಾರಾ ಸಮುದಾಯದವರೇ ಹೆಚ್ಚಾಗಿ ವಾಸಿಸುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಹಿಂದೆಯೂ ಸಹ ದಾಳಿ ನಡೆಸಲಾಗಿತ್ತು.

English summary
3 explosions in Kabul school, Afghanistan. Several killed said news agency Reuter report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X