ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆನ್ಮಾರ್ಕ್ ನ ಶತಕೋಟ್ಯಧಿಪತಿಯ ಮೂವರು ಮಕ್ಕಳು ಶ್ರೀಲಂಕಾದಲ್ಲಿ ಸಾವು

|
Google Oneindia Kannada News

ಕೋಪನ್ ಹೇಗನ್, ಏಪ್ರಿಲ್ 22: ಡೆನ್ಮಾರ್ಕ್ ನ ಅತ್ಯಂತ ಶ್ರೀಮಂತ ವ್ಯಕ್ತಿ ಆಂಡರ್ಸ್ ಹೋಲ್ಚ್ ಪಾಸೆನ್ ಮತ್ತು ಅವರ ಪತ್ನಿ ತಮ್ಮ ನಾಲ್ವರು ಮಕ್ಕಳ ಪೈಕಿ ಮೂವರನ್ನು ಶ್ರೀಲಂಕಾದಲ್ಲಿ ಭಾನುವಾರ ನಡೆದ ದಾಳಿಯಲ್ಲಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪಾಸೆನ್ಸ್ ಫ್ಯಾಷನ್ ಸಂಸ್ಥೆಯ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ವಕ್ತಾರರು ನಿರಾಕರಿಸಿದ್ದಾರೆ. ಆದರೆ ಆಂಡರ್ಸ್ ಕುಟುಂಬವು ಶ್ರೀಲಂಕಾದಲ್ಲಿ ರಜಾ ದಿನ ಕಳೆಯಲು ತೆರಳಿತ್ತು. ಚರ್ಚ್ ಗಳು ಹಾಗೂ ಪಂಚತಾರಾ ಹೋಟೆಲ್ ಗಳಲ್ಲಿ ಬಾಂಬ್ ಸ್ಫೋಟವಾಗಿ, ಇನ್ನೂರಾ ತೊಂಬತ್ತು ಮಂದಿ ಮೃತಪಟ್ಟು, ಐನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಶ್ರೀಲಂಕಾದಲ್ಲಿ ಸರಣಿ ಆತ್ಮಾಹುತಿ ಬಾಂಬ್ ಸಿಡಿಸಿದ ಉಗ್ರರು ಎಲ್ಲಿಯವರು? ಶ್ರೀಲಂಕಾದಲ್ಲಿ ಸರಣಿ ಆತ್ಮಾಹುತಿ ಬಾಂಬ್ ಸಿಡಿಸಿದ ಉಗ್ರರು ಎಲ್ಲಿಯವರು?

ಈ ದಾಳಿಯಲ್ಲಿ ಏಳು ಆತ್ಮಾಹುತಿ ಬಾಂಬರ್ ಗಳು ಭಾಗಿ ಅಗಿದ್ದಾಗಿ ಹಿರಿಯ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪಾಸೆನ್ ಅವರು ಬೆಸ್ಟ್ ಸೆಲ್ಲರ್ ಫ್ಯಾಷನ್ ಸಂಸ್ಥೆಯ ಮಾಲೀಕರು. ವೆರೊ ಮೋಡಾ ಮತ್ತು ಜಾಕ್ ಅಂಡ್ ಜೋನ್ಸ್ ಬ್ರ್ಯಾಂಡ್ ಕೂಡ ಇದರಲ್ಲಿ ಒಳಗೊಂಡಿದೆ.

3 children of Danish billionaire killed in Sri Lanka attack on easter Sunday

ಶ್ರೀಲಂಕಾ ಸರಣಿ ಸ್ಫೋಟ ಹಿಂದಿರುವ ಸಂಘಟನೆಗೆ ತಮಿಳುನಾಡಿನ ಲಿಂಕ್? ಶ್ರೀಲಂಕಾ ಸರಣಿ ಸ್ಫೋಟ ಹಿಂದಿರುವ ಸಂಘಟನೆಗೆ ತಮಿಳುನಾಡಿನ ಲಿಂಕ್?

ಅಂದ ಹಾಗೆ, ಫೋರ್ಬ್ಸ್ ನ ಮಾಹಿತಿ ಪ್ರಕಾರ ಸ್ಕಾಟ್ಲೆಂಡ್ ದೇಶದ ಒಟ್ಟಾರೆ ಭೂಮಿಯ ಒಂದು ಪರ್ಸೆಂಟ್ ಗೂ ಹೆಚ್ಚಿನ ಒಡೆತನವನ್ನು ಪಾಸೆನ್ ಹೊಂದಿದ್ದಾರೆ.

English summary
Denmark's richest man Anders Holch Povlsen and his wife lost three of their four children in the Easter Sunday attacks in the Easter Sunday attacks in Sri Lanka, a spokesman for Povlsen's fashion firm said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X