ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ ಲಸಿಕೆ: ಮನುಷ್ಯರ ಮೇಲೆಯೇ ವೈದ್ಯಕೀಯ ಪ್ರಯೋಗ!

|
Google Oneindia Kannada News

ಬೀಜಿಂಗ್, ಏಪ್ರಿಲ್.14: ಕೊರೊನಾ ವೈರಸ್ ಮಹಾಮಾರಿಗೆ ಮದ್ದು ಯಾವಾಗ ಸಿಗುತ್ತೋ ಎಂದು ಇಡೀ ವಿಶ್ವವೇ ಎದುರು ನೋಡುತ್ತಿದೆ. ಕೊವಿಡ್19 ಮೊದಲು ಕಾಣಿಸಿಕೊಂಡ ಚೀನಾದಲ್ಲೇ ಔಷಧಿ ಸಂಶೋಧನೆ ಎರಡನೇ ಹಂತಕ್ಕೆ ಕಾಲಿಟ್ಟಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಚೀನಾದಲ್ಲಿ ನಡೆಯುತ್ತಿರುವ ಎರಡನೇ ಹಂತದ ಔಷಧಿ ಸಂಶೋಧನಾ ಕಾರ್ಯ ನಡೆಯುತ್ತಿದ್ದು 500 ಮಂದಿ ಮೇಲೆ ವೈದ್ಯಕೀಯ ಪ್ರಯೋಗ ನಡೆಸಲಾಗುತ್ತದೆ. ಈ ಪೈಕಿ ಕೊರೊನಾ ವೈರಸ್ ಕೇಂದ್ರ ಸ್ಥಾನವಾಗಿರುವ ವುಹಾನ್ ನಗರದ 84 ವರ್ಷದ ನಿವಾಸಿಯೂ ಇದ್ದಾರೆ.

ಕೋವಿಡ್-19: ಎಲ್ಲಾ ವಿಜ್ಞಾನಿಗಳ ಕಣ್ಣು BCG ಲಸಿಕೆ ಮೇಲೆ.!ಕೋವಿಡ್-19: ಎಲ್ಲಾ ವಿಜ್ಞಾನಿಗಳ ಕಣ್ಣು BCG ಲಸಿಕೆ ಮೇಲೆ.!

ಅಕಾಡೆಮಿ ಆಫ್ ಮಿಲಿಟರಿ ಮೆಡಿಕಲ್ ಸೈನ್ಸ್ ಆಫ್ ಚೀನಾದ ಸಂಶೋಧನಾ ತಂಡದ ಮೇಜರ್ ಜನರಲ್ ಚೆನ್ ವ್ಯೂ ನೇತೃತ್ವದಲ್ಲಿ ಇನ್ಸ್ ಟಿಟ್ಯೂಟ್ ಆಫ್ ಬಯೋ ಟೆಕ್ನಾಲಜಿಯ ವಿಜ್ಞಾನಿಗಳು ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ಮೊದಲ ಪ್ರಯೋಗದಲ್ಲಿ ಅನುವಂಶೀಯ ವಿಧಾನ

ಮೊದಲ ಪ್ರಯೋಗದಲ್ಲಿ ಅನುವಂಶೀಯ ವಿಧಾನ

ಕೊರೊನಾ ವೈರಸ್ ವಿರುದ್ಧ ಲಸಿಕೆ ಪತ್ತೆ ಹಚ್ಚುವ ಸಂದರ್ಭ ಮೊದಲ ಹಂತದಲ್ಲಿ ಅನುವಂಶೀಯ ವಿಧಾನವನ್ನು ಹೆಚ್ಚು ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿಪಡಿಸಲಾಗಿತ್ತು. ಇದರ ಜೊತೆಗೆ ಮೊದಲ ಹಂತದಲ್ಲಿ ಸುರಕ್ಷತೆ ಮೇಲೆ ವಿಜ್ಞಾನಿಗಳು ಹೆಚ್ಚಿನ ನಿಗಾ ವಹಿಸಿದ್ದರು.

ಲಸಿಕೆ ಬೀರುವ ಪರಿಣಾಮದ ಮೇಲೆ ವಿಜ್ಞಾನಿಗಳ ಲಕ್ಷ್ಯ

ಲಸಿಕೆ ಬೀರುವ ಪರಿಣಾಮದ ಮೇಲೆ ವಿಜ್ಞಾನಿಗಳ ಲಕ್ಷ್ಯ

ಈ ಮೊದಲ ಹಂತದಲ್ಲಿ ಲಸಿಕೆಯನ್ನು ಸುರಕ್ಷತೆಯ ಮೇಲೆ ನಿಗಾವಹಿಸಿ ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಕೊರೊನಾ ವೈರಸ್ ವಿರುದ್ಧ ಲಸಿಕೆಯು ಎಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದರ ಮೇಲೆ ಲಕ್ಷ್ಯ ವಹಿಸಲಾಗಿದೆ. ಇದರ ಜೊತೆಗೆ ವೈದ್ಯಕೀಯ ಪ್ರಯೋಗದಲ್ಲಿ ಮೊದಲ ಹಂತಕ್ಕಿಂತ ಎರಡನೇ ಹಂತದಲ್ಲಿ ಹೆಚ್ಚು ಜನರನ್ನು ಬಳಸಿಕೊಳ್ಳಲಾಗುತ್ತಿದೆ.

ಮಾರ್ಚ್ ನಲ್ಲಿ ವೈದ್ಯಕೀಯ ಪ್ರಯೋಗ ನಡೆಸಿದ್ದ ಚೀನಾ

ಮಾರ್ಚ್ ನಲ್ಲಿ ವೈದ್ಯಕೀಯ ಪ್ರಯೋಗ ನಡೆಸಿದ್ದ ಚೀನಾ

ಮನುಷ್ಯರ ಮೇಲೆ ವೈದ್ಯಕೀಯ ಪ್ರಯೋಗವನ್ನು ನಡೆಸುತ್ತಿರುವ ಏಕೈಕ ರಾಷ್ಟ್ರವೇ ಚೀನಾ. ಕಳೆದ ಮಾರ್ಚ್ ನಲ್ಲಿ ಕೊರೊನಾ ವೈರಸ್ ವಿರುದ್ಧ ಲಸಿಕೆ ಕಂಡು ಹಿಡಿಯುವುದಕ್ಕಾಗಿ ಮೊದಲ ಹಂತದ ಸಂಶೋಧನೆಯನ್ನು ಆರಂಭಿಸಲಾಗಿತ್ತು.

ಕೊರೊನಾ ಸೋಂಕು ಹಂದಿ ಜ್ವರಕ್ಕಿಂತ 10ಪಟ್ಟು ಡೇಂಜರ್

ಕೊರೊನಾ ಸೋಂಕು ಹಂದಿ ಜ್ವರಕ್ಕಿಂತ 10ಪಟ್ಟು ಡೇಂಜರ್

ಸಾವಿರಾರು ಜನರನ್ನು ಬಲಿ ಪಡೆದ ಹಂದಿ ಜ್ವರ ರೋಗವನ್ನು ಅಪಾಯಕಾರಿ ಎಂದು ಹೇಳಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಹಂದಿಜ್ವರಕ್ಕಿಂತ ಹತ್ತು ಪಟ್ಟು ಅಪಾಯಕಾರಿ ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಂಡ್ರೋಸ್ ಅಧನೋಮ್ ಗೆಬ್ರಯೆಸಸ್ ತಿಳಿಸಿದ್ದಾರೆ. ಜಿನೇವಾದಲ್ಲಿ ಮಾತನಾಡಿದ ಅವರು, ಕೊರೊನಾ ಹರಡುತ್ತಿರುವ ವೇಗದ ಮೇಲೆ ನಿಗಾ ವಹಿಸಲಾಗಿದೆ ಈ ವೇಳೆ 2009ರಲ್ಲಿ ಕಾಣಿಸಿಕೊಂಡಿದ್ದ ಹಂದಿಜ್ವರಕ್ಕಿಂತ 10 ಪಾಲು ಡೇಂಜರಸ್ ಆಗಿದೆ ಎಂದು ತಿಳಿಸಿದರು.

English summary
2nd Phase Clinical Trial Starts At China For Coronavirus Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X