ಬೋಸ್ಟನ್ ನಲ್ಲಿ ಭಾರತೀಯನೊಬ್ಬ ನಾಪತ್ತೆ: ಜನಾಂಗೀಯ ದ್ವೇಷಕ್ಕೆ ಬಲಿ?

Posted By:
Subscribe to Oneindia Kannada

ನ್ಯೂಯಾರ್ಕ್, ಮೇ 17: ಸುಮಾರು 26 ವರ್ಷ ವಯಸ್ಸಿನ ಭಾರತ ಮೂಲದ ಜಯಕುಮಾರ್ (26) ಎಂಬಾತ ಬೋಸ್ಟನ್ ನಲ್ಲಿ ನಾಪತ್ತೆಯಾಗಿದ್ದಾನೆ.

ಈತನ ಶೋಧಕ್ಕೆ ಪೊಲೀಸರು ಮುಂದಾಗಿದ್ದು, ಇದೂ ಜನಾಂಗೀಯ ದ್ವೇಷದ ಪರಿಣಾಮವಾಗಿ ನಡೆದಿರುವ ಕೃತ್ಯವೇ ಎಂಬ ಅನುಮಾನ ಹುಟ್ಟುಹಾಕಿದೆ.

26-year-old Indian-American man missing in Boston; police say search is on

ಲೆಕ್ಸಿಂಗ್ಟನ್ ನಲ್ಲಿರುವ ಮನೆಯಲ್ಲಿ ತನ್ನ ತಂದೆ, ತಾಯಿ ಜತೆ ವಾಸವಿದ್ದ ಜಯಕುಮಾರ್, ಶುಕ್ರವಾರ ರಾತ್ರಿ ಹೊರಗೆ ಹೋಗಿದ್ದ. ಒಂದು ಗಂಟೆಯ ತರುವಾಯ ಪುನಃ ಮನೆಗೆ ಆಗಮಿಸುವುದಾಗಿ ತೆರಳಿದ್ದ ಜಯಕುಮಾರ್, ಬೋಸ್ಟನ್ ಗೆ ಬಂದು ಅಲ್ಲಿನ ರಸ್ತೆಯೊಂದರ ಪಕ್ಕದಲ್ಲಿ ಕಾರು ಪಾರ್ಕ್ ಮಾಡಿ ತೆರಳಿದ್ದಾನೆ.

ಆದರೆ, ಆನಂತರ ಆತ ಎಲ್ಲಿಗೆ ಹೋದ, ಏನಾದ ಎಂಬುದು ಯಾರಿಗೂ ಗೊತ್ತಿಲ್ಲ. ಆತನ ಹುಡುಕಾಟದಲ್ಲಿರುವ ಪೊಲೀಸರಿಗೆ ಬೋಸ್ಟನ್ ನಲ್ಲಿನ ಆತನ ಕಾರು ಪತ್ತೆಯಾಗಿದೆ. ಹಾಗಾಗಿ, ಆತ ಬೋಸ್ಟನ್ ವರೆಗೂ ಬಂದಿದ್ದ ಎಂಬುದು ಖಾತ್ರಿಯಾಗಿದೆ.

ಇತ್ತೀಚೆಗೆ, ಅಮೆರಿಕದಲ್ಲಿ ಭಾರತೀಯ ಮೂಲದ ಪ್ರಜೆಗಳ ಮೇಲೆ ಹತ್ಯೆ, ಹಲ್ಲೆಯಂಥ ಅನೇಕ ಘಟನೆಗಳು ಜರುಗುತ್ತಿವೆ. ಅದರಲ್ಲೂ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿ ಹೊರಹೊಮ್ಮಿದ ನಂತರ, ಅಲ್ಲಿನ ಔದ್ಯೋಗಿಕ ವಲಯದಲ್ಲಿ ಅಮೆರಿಕನ್ನರಿಗೇ ಮೊದಲ ಪ್ರಾಶಸ್ತ್ಯ ಎಂಬ ನಿಯಮಗಳನ್ನು ಜಾರಿ ಮಾಡಿರುವುದರಿಂದ ಸಹಜವಾಗಿ ಉನ್ನತ ಹುದ್ದೆಗಳಲ್ಲಿರುವ ಭಾರತೀಯರ ಮೇಲೆ ಅಲ್ಲಿನ ಜನರು ವಿಷ ಕಾರುವಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 26-year-old Indian-American man is reported missing in Boston and police is urging people to come forward and share any information they may have on the case.
Please Wait while comments are loading...