ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಜಿಪ್ಟ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ 26 ಸೈನಿಕರು ಬಲಿ

By Sachhidananda Acharya
|
Google Oneindia Kannada News

ಸಿನಾಯ್ (ಈಜಿಪ್ಟ್), ಜುಲೈ 7: ಈಜಿಪ್ಟ್ ನ ಸಿನಾಯ್ ಪ್ರಾಂತ್ಯದ ಚೆಕ್ ಪೋಸ್ಟ್ ಒಂದರ ಮೇಲೆ ಉಗ್ರರು ಕಾರ್ ಬಾಂಬ್ ನುಗ್ಗಿಸಿದ ಪರಿಣಾಮ ಓರ್ವ ಕೊಲೋನೆಲ್ ಸೇರಿ ಕನಿಷ್ಟ 26 ಸೈನಿಕರು ಅಸುನೀಗಿದ್ದಾರೆ.

ಈ ವೇಳೆ ಉಗ್ರರ ಜತೆ ನಡೆದ ಸಂಘರ್ಷದಲ್ಲಿ ಸೈನಿಕರು 40 ಉಗ್ರರನ್ನು ಕೊಂದಿದ್ದು 6 ಕಾರುಗಳನ್ನು ಧ್ವಂಸ ಮಾಡಲಾಗಿದೆ. ಒಟ್ಟು 66 ಜನರು ಅಸುನೀಗಿದ್ದಾರೆ.

 26 soldiers, 40 terrorists killed in a suicide attack in Egypt

ಸಿನಾಯ್ ಪ್ರಾಂತ್ಯದ ರಾಫಾ ಗ್ರಾಮದಲ್ಲಿರುವ ಸೈನಿಕ ಗ್ರಾಮದ ಚೆಕ್ ಪೋಸ್ಟ್ ನತ್ತ ಧಾವಿಸಿ ಬಂದ ಕಾರ್ ಬಾಂಬ್ ಸ್ಪೋಟಗೊಂಡಿದೆ. ಇದರಿಂದ ಚೆಕ್ ಪೋಸ್ಟ್ ರಕ್ಷಣೆಗೆ ಇದ್ದ ಸೈನಿಕರು ಸಾವನ್ನಪ್ಪಿದ್ದಾರೆ.

ಬೆನ್ನಿಗೆ ಹಲವಾರು ಜನ ಭಯೋತ್ಪಾದಕರು ಗುಂಡಿನ ದಾಳಿ ಆರಂಭಿಸಿದ್ದಾರೆ. ಇವರನ್ನು ಹಿಮ್ಮೆಟ್ಟಿಸುವಲ್ಲಿ ಸೈನಿಕರು ಸಫಲವಾದರೂ 26 ಸೈನಿಕರು ಸಾವನ್ನಪ್ಪಿದ್ದು, 20

ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಇನ್ನು ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತಿಲ್ಲ. ಹಾಗಾಗಿ ಈ ಭಾರೀ ಪ್ರಮಾಣದ ದಾಳಿ ನಡೆಸಿದ್ದು ಯಾರು ಎಂದು ತಿಳಿದು ಬಂದಿಲ್ಲ. ಐಸಿಸ್ ಜತೆ ಗುರುತಿಸಿಕೊಂಡಿರುವ 'ವಿಲಾಯತ್ ಸಿನಾಯ್' ಉಗ್ರ ಸಂಘಟನೆ ಈ ದಾಳಿ ನಡೆಸಿರಬಹುದು ಎನ್ನಲಾಗಿದೆ.

English summary
At least 26 Egyptian soldiers including a colonel were killed in a suicide bomb attack on an army checkpoint in Sinai. Another 40 fighters were killed in a subsequent gun battle with soldiers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X