ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

26/11 ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಗೆ 5 ವರ್ಷ ಜೈಲು

|
Google Oneindia Kannada News

ಇಸ್ಲಮಾಬಾದ್, ಫೆಬ್ರವರಿ.12: ಮುಂಬೈ ಉಗ್ರ ದಾಳಿ ಹಿಂದಿನ ಮಾಸ್ಟರ್ ಮೈಂಡ್ ಎಂದೇ ಕರೆಸಿಕೊಂಡಿರುವ ಲಷ್ಕರ್ -ಇ-ತೈಬಾ ಉಗ್ರ ಸಂಘಟನೆ ಸಂಸ್ಥಾಪಕ ಹಫೀಜ್ ಸಯೀದ್ ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಐದೂವರೆ ವರ್ಷ ಜೈಲುಶಿಕ್ಷೆ ವಿಧಿಸಿದೆ.

ಪಾಕಿಸ್ತಾನದ ಎರಡು ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕ ಸಂಬಂಧಿಸಿದಂತೆ ಪಾಕಿಸ್ತಾನದ ಕೋರ್ಟ್ ಈ ಆದೇಶ ಹೊರಡಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಹಫೀಜ್ ಸಯೀದ್ ಗೆ ಐದೂವರೆಗ ವರ್ಷ ಜೈಲುಶಿಕ್ಷೆ ಹಾಗೂ ಒಂದು ಪ್ರಕರಣಕ್ಕೆ 15 ಸಾವಿರ ರೂಪಾಯಿಯಂತೆ ಎರಡು ಪ್ರಕರಣಕ್ಕೆ 30 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.

ಉಗ್ರ ಹಫೀಜ್ ತಿಂಗಳ ಖರ್ಚಿಗೆ ವಿಶ್ವಸಂಸ್ಥೆಯನ್ನು ಕಾಡಿ ಬೇಡಿ ಒಪ್ಪಿಸಿದ ಪಾಕ್ಉಗ್ರ ಹಫೀಜ್ ತಿಂಗಳ ಖರ್ಚಿಗೆ ವಿಶ್ವಸಂಸ್ಥೆಯನ್ನು ಕಾಡಿ ಬೇಡಿ ಒಪ್ಪಿಸಿದ ಪಾಕ್

ಎಲ್ಇಟಿ ಸಂಸ್ಥಾಪಕ ಮುಖ್ಯಸ್ಥ ಹಫೀಜ್ ಸಯೀದ್ ನಿಷೇಧಿತ ಲಷ್ಕರ್ ಇ ತೈಬಾ ಹಾಗೂ ಜಮಾತ್ ಉದ್ ದವಾ ಉಗ್ರ ಸಂಘಟನೆಗಳು ನಡೆಸುವ ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದನು ಎಂದು ಆರೋಪಿಸಲಾಗಿತ್ತು.

26/11 Mumbai Attack Mastermind Hafeez Saeed Get 5 Years Jail

ನಿಷೇಧಿತ ಸಂಘಟನೆಯ ಮುಖ್ಯಸ್ಥನಲ್ಲಿ ಕೋಟಿ ಕೋಟಿ ಆಸ್ತಿ:

2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯಲ್ಲಿ 166ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದರು. ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಇದೇ ಹಫೀಜ್ ಸಯೀದ್ ಎಂದು ಆರೋಪಿಸಲಾಗಿತ್ತು. ಇದರ ಬೆನ್ನಲ್ಲೇ ಅಮೆರಿಕಾ ರಾಷ್ಟ್ರೀಯ ರಕ್ಷಣಾ ಸಮಿತಿಯು ಲಷ್ಕರ್ ಇ ತೈಬಾ ಸಂಘಟನೆಯ್ನು ನಿಷೇಧಿತ ಉಗ್ರ ಸಂಘಟನೆಗಳ ಗುಂಪಿಗೆ ಸೇರಿಸಿತು. ನಂತರದಲ್ಲಿ ಉಗ್ರ ಸಂಘಟನೆಗೆ ಆರ್ಥಿಕ ನೆರವು ನೀಡಿದ ಹಿನ್ನೆಲೆಯಲ್ಲಿ ಪಾಕ್ ಕೋರ್ಟ್ ಇದೀಗ ಹಫೀಜ್ ಸಯೀದ್ ಗೆ ಜೈಲುಶಿಕ್ಷೆ ವಿಧಿಸಿದೆ.

ಇನ್ನು, ಹಫೀಜ್ ಸಯೀದ್ ವಿರುದ್ಧ ಪಾಕಿಸ್ತಾನದಲ್ಲೂ ಕೂಡಾ ಹಲವು ಪ್ರಕರಣಗಳು ದಾಖಲಾಗಿದ್ದು, 23 ಕೇಸ್ ಗಳು ಈತ ಮೇಲಿದ್ದವು. ಇಷ್ಟಾಗಿಯೂ ಕೂಡಾ ಪಾಕಿಸ್ತಾನದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದ ಹಫೀಜ್ ಸಯೀದ್, ಭಾರತ ವಿರೋಧಿ ಮೆರವಣಿಗೆ, ಸಭೆ, ಸಮಾರಂಭಗಳನ್ನು ನಡೆಸಿಕೊಂಡು ಮೆರೆಯುತ್ತಿದ್ದನು.

English summary
26/11 Mumbai Attack Mastermind Hafeez Saeed Get 5 Years Jail In Two Terror Funding Cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X