ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಢಾಕಾ ಏರ್‌ಪೋರ್ಟ್ ಬಳಿ 250 ಕೆಜಿ ಸಜೀವ ಬಾಂಬ್ ಪತ್ತೆ

|
Google Oneindia Kannada News

ಢಾಕಾ, ಡಿಸೆಂಬರ್ 11: ಪಾಕಿಸ್ತಾನದ ವಿರುದ್ಧ 1971ರ ಬಾಂಗ್ಲಾದೇಶದ ವಿಮೋಚನಾ ಯುದ್ಧದ ಸಂದರ್ಭದ 250 ಕೆಜಿ ಸಜೀವ ಬಾಂಬ್, ಬಾಂಗ್ಲಾದೇಶದ ರಾಜಧಾನಿ ಢಾಕಾದ ಏರ್‌ಪೋರ್ಟ್ ಬಳಿ ಪತ್ತೆಯಾಗಿದೆ.

ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಹಿಸಾ) ವಿಸ್ತೃತ ಟರ್ಮಿನಲ್‌ಗಾಗಿ ಕೆಲಸ ಮಾಡುತ್ತಿರುವಾಗ ಉತ್ಖನನ ಸಂದರ್ಭದಲ್ಲಿ ಕಾರ್ಮಿಕರಿಗೆ ಈ ಬಾಂಬ್ ಸಿಕ್ಕಿದೆ. ಇದನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿಯೇ ನಿಷ್ಕ್ರೀಯಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್ ಪತ್ತೆಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ವಾಯುಪಡೆಯ ಅಧಿಕಾರಿಗಳು ಬಾಂಬ್ ಇರುವ ಸ್ಥಳಕ್ಕೆ ಬಂದು ನಿಷ್ಕ್ರೀಯಗೊಳಿಸಿದರು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಜೊತೆಗೆ ಸುರಕ್ಷಿತ ಮತ್ತು ಉತ್ತಮ ಮಾರ್ಗದರ್ಶಕದ ಮೂಲಕ ಬಾಂಬ್ ಅನ್ನು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಡಿಫ್ಯೂಸ್ ಮಾಡಲಾಗಿದೆ.

250 KG Live Bomb From 1971 War Found Near Dhaka Airport

"ಇದು 'ಸಾಮಾನ್ಯ ಉದ್ದೇಶ' ಬಾಂಬ್ ಎಂದು ಗುರುತಿಸಲಾಗಿದೆ. ಇದನ್ನು ಶತ್ರು ಪಡೆಗಳು ವಾಹನಗಳು ಮತ್ತು ಕಟ್ಟಡಗಳ ಮೇಲೆ ಹಾನಿ ಮಾಡಲು ವಿಮಾನಗಳಿಂದ ಬೀಳಿಸಲಾಗಿದೆ" ಎಂದು ಮಿಲಿಟರಿ ಬಾಂಬ್ ತಜ್ಞರು ಹೇಳಿದ್ದಾರೆ. 1971 ರಲ್ಲಿ ನಡೆದ ವಿಮೋಚನಾ ಯುದ್ಧದ ಸಮಯದಲ್ಲಿ ಬಾಂಬ್ ಅನ್ನು ಇಲ್ಲಿ ಹಾಕಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
A 250-kg live bomb has been found buried at a construction site at the Dhaka international airport
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X