• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

250 ಕೆಜಿ ತೂಕದ ಐಸಿಸ್ ಉಗ್ರನಿಗೆ ಪೊಲೀಸ್ ಜೀಪ್ ಸಾಕಾಗೋದಿಲ್ಲ!

|

ಬಾಗ್ದಾದ್, ಜನವರಿ.19: ಇಸ್ಲಾಮಿಕ್ ಸ್ಟೇಟ್ ನ ಉಗ್ರ ಮುಫ್ತಿ ಅಬು ಅಬ್ದುಲ್ ಬಾರಿಯನ್ನು ಬಂಧಿಸುವಲ್ಲಿ ಇರಾಕ್ ನ ವಿಶೇಷ ಭದ್ರತಾ ಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೆ, 250 ಕೆಜಿ ತೂಕದ ಉಗ್ರನನ್ನು ಭದ್ರತಾ ಪಡೆ ಸಿಬ್ಬಂದಿ ಕರೆದೊಯ್ಯಲು ಪರದಾಡಿದಂತಾ ಘಟನೆ ನಡೆದಿದೆ.

ಇರಾಕ್ ನಲ್ಲಿ ಬಂಧಿಸಲ್ಪಟ್ಟಿದ್ದ ಉಗ್ರ ಜಬ್ಬಾಗೆ ವಿಶೇಷ ಭದ್ರತಾ ಪಡೆಯ ವಾಹನವೂ ಸಾಕಾಗಲಿಲ್ಲ. ದಢೂತಿ ದೇಹ ಉಗ್ರನನ್ನು ಕರೆಯೊಯ್ಯಲು ಭದ್ರತಾ ಸಿಬ್ಬಂದಿ ಬೇರೆ ವಾಹನವನ್ನೇ ತರಬೇಕಾಯಿತು. ಪುಟ್ಟ ಟ್ರಕ್ ವೊಂದರಲ್ಲಿ ಭದ್ರತಾ ಸಿಬ್ಬಂದಿ ಉಗ್ರನನ್ನು ಕರೆದುಕೊಂಡು ಹೋಗಿದ್ದು ಸುದ್ದಿಯಾಗಿದೆ.

ಜಿಹಾದಿ ಗ್ಯಾಂಗ್ ಸೆರೆ: ಐಸಿಸ್ ಕಮಾಂಡರ್ ವಿದೇಶಕ್ಕೆ ಪರಾರಿ?

ಐಸಿಸ್ ಉಗ್ರ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಫ್ತಿ ಅಬು ಅಬ್ದುಲ್ ಬಾರಿ ಅಲಿಯಾಸ್ ಜಬ್ಬಾ ಭದ್ರತಾ ಸಿಬ್ಬಂದಿ ವಿರುದ್ಧವೇ ಫತ್ವಾ ಹೊರಡಿಸುತ್ತಿದ್ದನು ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿದ್ದ ಐಸಿಸ್ ಉಗ್ರ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕುತ್ತಿದ್ದನು.

ಮುಸ್ಲಿಂ ಪಾದ್ರಿಗಳ ಹತ್ಯೆಗೂ ಫತ್ವಾ:

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಹೀಗೆ ಒಪ್ಪಿಕೊಳ್ಳದಿದ್ದರೆ ಮುಸ್ಲಿಂ ಪಾದ್ರಿಗಳು ಎನ್ನುವುದನ್ನೂ ನೋಡದೇ ಹತ್ಯೆ ಮಾಡುವಂತೆ ಮುಫ್ತಿ ಅಬು ಅಬ್ದುಲ್ ಬಾರಿ ಫತ್ವಾಗಳನ್ನು ಹೊರಡಿಸುತ್ತಿದ್ದನು. ಇದರ ಜೊತೆಗೆ ಇರಾಕ್ ಭದ್ರತಾ ಸಿಬ್ಬಂದಿ ವಿರುದ್ಧ ತಮ್ಮ ಕೊನೆಯುಸಿರು ಇರುವವರೆಗೂ ಹೋರಾಟ ಮಾಡುವಂತೆ ಪ್ರಚೋದನಕಾರಿ ಪೋಸ್ಟ್ ಗಳನ್ನು ಉಗ್ರನು ಹಾಕಿತ್ತಿದ್ದ ಎನ್ನಲಾಗಿದೆ.

English summary
250 KG ISIS Terrorist Jabba Arrested By Special Force Of Iraq. SWAT Shifted The Jihadi In Truck.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X