• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

25 ಜನರನ್ನು ಬಲಿಪಡೆದ ಪೆಟ್ರೋಲ್ ಟ್ಯಾಂಕರ್ ಅಪಘಾತ

|

ನೈಜೀರಿಯಾದಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡು 25 ಜನರು ಸ್ಥಳದಲ್ಲೇ ಸುಟ್ಟು ಬೂದಿಯಾಗಿದ್ದಾರೆ. ಭೀಕರ ಘಟನೆಯಲ್ಲಿ ಶಾಲಾ ಮಕ್ಕಳು ಕೂಡ ಬೆಂಕಿಗೆ ಆಹುತಿಯಾಗಿದ್ದಾರೆ.

ಪೆಟ್ರೋಲ್ ಟ್ಯಾಂಕರ್ ಬ್ರೇಕ್ ಫೇಲ್ ಆಗಿದ್ದರಿಂದ ಅಪಘಾತ ಸಂಭವಿಸಿದೆ. ಬ್ರೇಕ್ ಫೇಲ್ ಆಗಿರುವುದು ಚಾಲಕನ ಗಮನಕ್ಕೆ ಬರುತ್ತಿದ್ದಂತೆ ಟ್ಯಾಂಕರ್ ನಿಲ್ಲಿಸಲು ಸರ್ಕಸ್ ಮಾಡಿದ್ದಾನೆ. ಆದರೆ ಈ ಹೊತ್ತಲ್ಲಿ ಎದುರು ಬರುತ್ತಿದ್ದ ವಾಹನಕ್ಕೆ ಟ್ಯಾಂಕರ್ ಗುದ್ದಿದೆ. ಈ ಸಂದರ್ಭದಲ್ಲಿ ಟ್ಯಾಂಕರ್ ಮಗುಚಿ ಬಿದ್ದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ವಾಹನಗಳು ಭಸ್ಮವಾಗಿವೆ.

ಹಲವು ಗಂಟೆಗಳ ಕಾಲ ಬೆಂಕಿ ಹೊತ್ತಿ ಉರಿದಿದ್ದು, ದಟ್ಟ ಹೊಗೆ ಆವರಿಸಿತ್ತು. ಬೆಂಕಿ ಹತೋಟಿಗೆ ತರಲು ನೈಜೀರಿಯಾದ ಅಗ್ನಿಶಾಮಕ ಸಿಬ್ಬಂದಿ ಪರದಾಡಿದರು. ಹಲವು ಗಂಟೆಗಳ ಕಾಲ ಸರ್ಕಸ್ ಮಾಡಿದ ನಂತರ ಬೆಂಕಿ ಹಿಡಿತಕ್ಕೆ ಬಂತು. ಅಷ್ಟರಲ್ಲಾಗಲೇ ಹತ್ತಾರು ಮಂದಿಯ ಪ್ರಾಣಪಕ್ಷಿ ಹಾರಿಹೋಗಿತ್ತು.

ನೂರಾರು ಜನರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಹಲವರು ಬದುಕುಳಿಯುವ ಸಾಧ್ಯತೆ ಕಡಿಮೆ ಇದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. (ಸಾಂದರ್ಭಿಕ ಚಿತ್ರಗಳು; ಪಿಟಿಐ)

ಶಾಲೆಗೆ ಹೋಗುತ್ತಿದ್ದ ಕಂದಮ್ಮಗಳು ಬಲಿ

ಶಾಲೆಗೆ ಹೋಗುತ್ತಿದ್ದ ಕಂದಮ್ಮಗಳು ಬಲಿ

ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡಿರುವುದು ಬೆಳಗಿನ ಹೊತ್ತಲ್ಲಿ. ನೈಜೀರಿಯಾದ ಕೇಂದ್ರ ಭಾಗದಲ್ಲಿನ ಲೋಕೋಜಾ ಎಂಬಲ್ಲಿ ಟ್ಯಾಂಕರ್ ಬ್ಲಾಸ್ಟ್ ಆಗಿದೆ. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ರಸ್ತೆ ದಾಟುತ್ತಿದ್ದರು. ಸ್ಫೋಟದ ತೀವ್ರತೆಗೆ ಇವರೆಲ್ಲಾ ಸುಟ್ಟು ಭಸ್ಮವಾಗಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಂಕಿ ಕೆನ್ನಾಲಿಗೆ ಹಿಡಿತಕ್ಕೆ ಸಿಗದಷ್ಟು ವೇಗವಾಗಿ ಹಬ್ಬಿದ್ದು, ಜನ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ರಸ್ತೆ ಅಕ್ಕಪಕ್ಕ ನಿಲ್ಲಿಸಿದ್ದ ಕಾರುಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿ ಹೋಗಿವೆ.

ತಮ್ಮವರನ್ನು ಗುರುತಿಸಲು ಪರದಾಟ

ತಮ್ಮವರನ್ನು ಗುರುತಿಸಲು ಪರದಾಟ

ಸ್ಫೋಟದ ತೀವ್ರತೆ ಹೇಗಿತ್ತು ಎಂದರೆ ಹಲವು ಮೃತದೇಹಗಳು ಗುರುತು ಸಿಗದಷ್ಟು ಸುಟ್ಟು ಹೋಗಿದ್ದವು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮೃತರ ಸಂಬಂಧಿಕರು ತಮ್ಮವರ ಮೃತದೇಹವನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಅಸಹಾಯಕರಾಗಿ ಗೋಳಾಡುತ್ತಿದ್ದರು. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಪೆಟ್ರೋಲ್ ಟ್ಯಾಂಕರ್ ಚಾಲಕ ವೇಗವಾಗಿ ಟ್ಯಾಂಕರ್ ಚಾಲನೆ ಮಾಡುತ್ತಿದ ಪರಿಣಾಮ ಈ ಘಟನೆ ಸಂಭವಿಸಿದೆ. ಇದರ ಜೊತೆಗೆ ಟ್ಯಾಂಕರ್‌ನ ಬ್ರೇಕ್ ಕೂಡ ಕಟ್ ಆಗಿ ಹೋಗಿತ್ತು. ಆದರೆ ಇದೆಲ್ಲಾ ಟ್ಯಾಂಕರ್ ಚಾಲಕನ ಗಮನಕ್ಕೆ ಬರುವಷ್ಟರಲ್ಲಿ ಭೀಕರ ಸ್ಫೋಟವೊಂದು ಸಂಭವಿಸಿ, ಕನಿಷ್ಠ 25 ಜನರನ್ನು ಬಲಿಪಡೆದಿದಾಗಿತ್ತು.

ಬೆಚ್ಚಿಬಿದ್ದ ಲೋಕೋಜಾ ನಿವಾಸಿಗಳು

ಬೆಚ್ಚಿಬಿದ್ದ ಲೋಕೋಜಾ ನಿವಾಸಿಗಳು

ಕೊರೊನಾ ಸಂಕಷ್ಟದ ನಡುವೆ ನೈಜೀರಿಯಾ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇತ್ತೀಚೆಗೆ ನೈಜೀರಿಯಾ ಸಹಜ ಸ್ಥಿತಿಗೆ ಮರಳುತ್ತಿದೆ. ದಶಕದಲ್ಲೇ ಮಹಾಕುಸಿತ ಕಂಡಿರುವ ನೈಜೀರಿಯಾ ಲಾಕ್‌ಡೌನ್ ನಂತರ ಈಗ ತಾನೆ ವ್ಯಾಪಾರ, ವಹಿವಾಟು ಪುನಾರಂಭಿಸಿದೆ. ಆದರೆ ಈ ಹೊತ್ತಲ್ಲೇ ಪೆಟ್ರೋಲ್ ಟ್ಯಾಂಕರ್ ಸ್ಫೋಟ ಜನರನ್ನು ಕಂಗಾಲಾಗಿಸಿದೆ. ಈ ಘಟನೆ ಸಂಭವಿಸಿದಾಗ ನೈಜೀರಿಯಾದ ಲೋಕೋಜಾ ಪ್ರದೇಶ ಜನರಿಂದ ತುಂಬಿ ತುಳುಕುತ್ತಿತ್ತು. ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಮಕ್ಕಳು ರಸ್ತೆ ದಾಟುತ್ತಿದ್ದರು. ಆದರೆ ಎಲ್ಲಿಂದಲೋ ಟ್ಯಾಂಕರ್ ರೂಪದಲ್ಲಿ ಬಂದ ಜವರಾಯ ಪುಟಾಣಿ ಕಂದಮ್ಮಗಳನ್ನು ಬಲಿಪಡೆದಿದ್ದಾನೆ.

ನೈಜೀರಿಯಾದಲ್ಲಿ ಇಂತಹ ಘಟನೆಗಳು ಮಾಮೂಲಿ

ನೈಜೀರಿಯಾದಲ್ಲಿ ಇಂತಹ ಘಟನೆಗಳು ಮಾಮೂಲಿ

ನೈಜೀರಿಯಾದಲ್ಲಿ ಸರಿಯಾದ ಸಾರಿಗೆ ನಿಯಮ ಇಲ್ಲ. ಇಲ್ಲಿ ಮನಸೋಯಿಚ್ಛೆ ವಾಹನ ಚಲಾಯಿಸುತ್ತಾರೆ. ಬ್ರೇಕ್ ಇಲ್ಲದ, ಸುಸ್ಥಿತಿಯಲ್ಲಿ ಇಲ್ಲದ ವಾಹನಗಳ ಸವಾರಿ ಮಾಮೂಲಿ. ಕಠಿಣ ಸಾರಿಗೆ ನಿಯಮ ಇಲ್ಲದ ಹಿನ್ನೆಲೆಯಲ್ಲಿ ಚಾಲಕರಿಗೂ ಕಾನೂನಿನ ಭಯವಿಲ್ಲ. ಹೀಗಾಗಿಯೇ ಪದೇ ಪದೆ ಅಪಘಾತಗಳು ಸಂಭವಿಸಿ, ವರ್ಷಕ್ಕೆ ಸಾವಿರಾರು ಜನ ಬಲಿಯಾಗುತ್ತಿದ್ದಾರೆ. ಕಳೆದ ಜೂನ್‌ನಲ್ಲೂ ಇಂತಹದ್ದೇ ಘಟನೆ ಸಂಭವಿಸಿತ್ತು. ಆಗಲೂ ಪೆಟ್ರೋಲ್ ಟ್ಯಾಂಕರ್ ಉರುಳಿ ಬಿದ್ದು, ಹತ್ತಾರು ಮಂದಿ ಭಸ್ಮವಾಗಿದ್ದರು.

English summary
Minimum 25 people have been killed in central Nigeria after a fuel tanker exploded following a collision with other vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X