ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಜಲು ಹೋಗಿದ್ದ 23 ವರ್ಷದ ಯುವಕನನ್ನು ಕೊಂದ ಶಾರ್ಕ್

|
Google Oneindia Kannada News

ದೆಹಲಿ, ಏಪ್ರಿಲ್ 7: ಸ್ನೇಹಿತರ ಜೊತೆ ಈಜಲು ಹೋಗಿದ್ದ 23 ವರ್ಷದ ಯುವಕನನ್ನು ಶಾರ್ಕ್ ಕೊಂದಿರುವ ಘಟನೆ ಪೂರ್ವ ಆಸ್ಟ್ರೇಲಿಯದಲ್ಲಿ ನಡೆದಿದೆ.

Recommended Video

ಚಾಲೆಂಜ್ ಸ್ವೀಕರಿಸಿ ಕೊರೊನಾ ವಿರುದ್ಧ ಹೋರಾಡ್ತಾರಾ ವಿರಾಟ್ ಕೊಹ್ಲಿ | Oneindia Kannada

ಪೂರ್ವ ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಐಸ್‌ಲ್ಯಾಂಡ್‌ನಲ್ಲಿ ಸ್ನೇಹಿತರ ಗುಂಪು ಈಜಲು ತೆರಳಿದ್ದರು. ಸೋಮವಾರ ಸಂಜೆ ಸುಮಾರು 5.30 ಸಮಯಕ್ಕೆ ಶಾರ್ಕ್ ಅವರ ಮೇಲೆ ಅಟ್ಯಾಕ್ ಮಾಡಿದೆ. ಈ ಘಟನೆಯಲ್ಲಿ ಒಬ್ಬ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾರ್ಕ್ ಹೊಟ್ಟೆಯಲ್ಲಿತ್ತು ಈಜಲು ಹೋದ ಪ್ರವಾಸಿಗನ ಕೈಶಾರ್ಕ್ ಹೊಟ್ಟೆಯಲ್ಲಿತ್ತು ಈಜಲು ಹೋದ ಪ್ರವಾಸಿಗನ ಕೈ

ಶಾರ್ಕ್ ದಾಳಿಯ ಬಳಿಕ ಆ ಯುವಕ ತೀವ್ರವಾಗಿ ಗಾಯಗೊಂಡಿದ್ದ. ಕೈ, ಕಾಲು ಹಾಗೂ ತೋಳಿಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಅಲ್ಲಿಂದ ಕ್ವೀನ್ಸ್ ಲ್ಯಾಂಡ್‌ನ ಖಾಸಗಿ ಆಸ್ಪತ್ರೆಗೆ ಆತನನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು. ಬಲವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ್ದಾನೆ.

23 Year Old Boy Killed By Shark At Australia

ಕಳೆದ ಎರಡು ವರ್ಷಗಳ ಇತಿಹಾಸ ನೋಡಿದ್ರೆ ಪ್ರವಾಸಿ ಸ್ಥಳಗಳಲ್ಲಿ ಶಾರ್ಕ್ ದಾಳಿ ಮಾಡಿರುವ ಬಗ್ಗೆ ಸರಣಿ ಘಟನೆಗಳಿವೆ. 2019, ನವೆಂಬರ್‌ ತಿಂಗಳಲ್ಲಿ ಲಂಡನ್‌ನ ರೀಯೂನಿಯನ್ ಐಲ್ಯಾಂಡ್‌ನಲ್ಲಿ ಸ್ನಾರ್ಕೆಲಿಂಗ್ ಮಾಡುತ್ತಿದ್ದ ದಂಪತಿ ಮೇಲೆ ಶಾರ್ಕ್ ದಾಳಿ ಮಾಡಿತ್ತು. ಈ ಘಟನೆಯಲ್ಲಿ 40 ವರ್ಷದ ವ್ಯಕ್ತಿಗೆ ಶಾರ್ಕ್‌ಗೆ ಆಹಾರವಾಗಿದ್ದರು.

ಮಂಗಳೂರಿನಲ್ಲಿ ಕಂಡಿತು ಅಪರೂಪದ ವೇಲ್ ಶಾರ್ಕ್ಮಂಗಳೂರಿನಲ್ಲಿ ಕಂಡಿತು ಅಪರೂಪದ ವೇಲ್ ಶಾರ್ಕ್

ಅಂದ್ಹಾಗೆ, ಈ ಪ್ರದೇಶದಲ್ಲಿ ಯಾವುದೇ ಅಪಾಯಕಾರಿ ಜಲಚರಗಳು ಇಲ್ಲ. ಹೀಗಾಗಿ ಈಜಾಡಲು ಸುರಕ್ಷಿತ ಎಂದು ಅಧಿಕಾರಿಗಳು ಪ್ರವಾಸಿಗರಿಗೆ ಅವಕಾಶ ನೀಡಿದ್ದರು. ಆದರೂ ಅಲ್ಲಿ ಶಾರ್ಕ್‌ ಕಾಣಿಸಿಕೊಂಡಿದ್ದು ಅಚ್ಚರಿ ತಂದಿತ್ತು.

English summary
23 Year old man was killed by a shark while he swimming with friends at Eastern Australia, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X