ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರ್ವೇನಲ್ಲಿ ಲಸಿಕೆ ಪಡೆದ 23 ವಯೋವೃದ್ಧರ ಸಾವು; ಲಸಿಕೆ ಅಡ್ಡಪರಿಣಾಮ ಶಂಕೆ

|
Google Oneindia Kannada News

ನಾರ್ವೆ, ಜನವರಿ 16: ಕೊರೊನಾ ಸೋಂಕಿಗೆ ಹಲವು ದೇಶಗಳಲ್ಲಿ ಈಗಾಗಲೇ ಲಸಿಕೆಗಳನ್ನು ನೀಡಲು ಆರಂಭಿಸಲಾಗಿದೆ. ಕೊರೊನಾ ವಿರುದ್ಧ ಹೋರಾಡಲು ಅಭಿವೃದ್ಧಿಪಡಿಸಿರುವ ಕೆಲವು ಲಸಿಕೆಗಳಿಂದ ಅಡ್ಡ ಪರಿಣಾಮಗಳು ಕಂಡುಬರುತ್ತಿದ್ದು, ನಾರ್ವೇನಲ್ಲಿಯೂ ಲಸಿಕೆ ಪಡೆದ ನಂತರ ಸುಮಾರು 23 ವಯೋವೃದ್ಧರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಈ 23 ಮಂದಿ ಹೊರತಾಗಿ ಲಸಿಕೆ ಪಡೆದ ನಂತರ ಹಲವರು ಅಸ್ವಸ್ಥಗೊಂಡಿರುವುದಾಗಿ ವರದಿಯಾಗಿದೆ.

ವಯೋವೃದ್ಧರ ಈ ಸಾವಿನ ಹಿಂದಿನ ನಿಖರ ಕಾರಣದ ಕುರಿತು ತಜ್ಞರು ಪರಿಶೀಲನೆ ನಡೆಸುತ್ತಿದ್ದು, ಬಯೋ ಎನ್ ಟೆಕ್ ನ ಫೈಜರ್ ಲಸಿಕೆ ಪಡೆದ 23 ಮಂದಿ ಸಾವನ್ನಪ್ಪಿರುವುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಇವರೆಲ್ಲರೂ 80 ವಯಸ್ಸಿನ ಮೇಲ್ಪಟ್ಟವರಾಗಿದ್ದು, ಲಸಿಕೆ ಅಡ್ಡಪರಿಣಾಮ ಗೋಚರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಹಿಳೆಯರು ಮತ್ತು ಗರ್ಭಿಣಿಯರಿಗೆ ಕೊರೊನಾ ಲಸಿಕೆ ಸುರಕ್ಷಿತವೇ?ಮಹಿಳೆಯರು ಮತ್ತು ಗರ್ಭಿಣಿಯರಿಗೆ ಕೊರೊನಾ ಲಸಿಕೆ ಸುರಕ್ಷಿತವೇ?

ಈ ಲಸಿಕೆಗೂ, ವಯೋವೃದ್ಧರ ಸಾವಿಗೂ ಇರುವ ನೇರ ಸಂಬಂಧದ ಬಗ್ಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ. ಆದರೆ ಸತ್ತ 23 ಮಂದಿಯಲ್ಲಿ 13 ಮಂದಿಗೆ ಒಂದೇ ರೀತಿಯ ಲಕ್ಷಣಗಳು ಕಾಣಿಸಿಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.

23 Elder People Die After Pfizer Vaccine Dose In Norway

ನಾರ್ವೇನಲ್ಲಿ ಈ ಸಾವುಗಳು ವರದಿಯಾಗುತ್ತಿದ್ದಂತೆ ಯುರೋಪಿಯನ್ ದೇಶಗಳಿಗೆ ಲಸಿಕೆ ಪೂರೈಸುವುದನ್ನು ಫೈಜರ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಸಂಗತಿ ನಂತರ 80 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕುರಿತು ಮುಂಜಾಗ್ರತಾ ಕ್ರಮ ವಹಿಸಬೇಕೆಂದು ನಾರ್ವೇ ಸಾರ್ವಜನಿಕಾ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ನಾರ್ವೇನಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಕೊರೊನಾ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಇದುವರೆಗೂ ಮೂವತ್ತು ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಫೈಜರ್ ಹಾಗೂ ಮಾಡೆರ್ನಾ ಲಸಿಕೆಗಳ ಬಳಕೆಗೆ ನಾರ್ವೇ ಅನುಮತಿ ನೀಡಿದೆ.

Recommended Video

ಕೊರೊನಾ ಲಸಿಕೆಯನ್ನ ಮೊದಲು ಜನಪ್ರತಿನಿಧಿಗಳು ತೆಗೆದುಕೊಳ್ಳಬೇಕು- ಶಾಸಕಿ ಸೌಮ್ಯ ರೆಡ್ಡಿ ಅಭಿಪ್ರಾಯ |Oneindia Kannada

English summary
23 elderly people dies shortly after receiving the Covid-19 vaccine. Apart from the 23, several others have fallen ill soon after the vaccination in norway
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X