ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಾಂತರ ಡಾಲರ್ ವಂಚನೆ: ಅಮೆರಿಕದಲ್ಲಿ 21 ಭಾರತೀಯರಿಗೆ ಜೈಲು ಶಿಕ್ಷೆ

|
Google Oneindia Kannada News

ನ್ಯೂಯಾರ್ಕ್, ಜುಲೈ 21: ಅಮೆರಿಕದ ಸಾವಿರಾರು ನಾಗರಿಕರಿಗೆ ಲಕ್ಷಾಂತರ ಡಾಲರ್ ಪಂಗನಾಮ ಹಾಕಿದ ಭಾರತ ಮೂಲದ 21 ಆರೋಪಿಗಳಿಗೆ 4ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ 21 ಮಂದಿಯಲ್ಲಿ ಕೆಲವರು ತಮ್ಮ ಶಿಕ್ಷೆಯ ಅವಧಿ ಪೂರ್ಣಗೊಂಡ ಬಳಿಕ ಭಾರತಕ್ಕೆ ಗಡಿಪಾರಾಗಲಿದ್ದಾರೆ.

ಅಮೆರಿಕದ ಅತಿ ದೊಡ್ಡ ಕಾಲ್ ಸೆಂಟರ್ ಹಗರಣ ಇದಾಗಿದ್ದು, ಭಾರತದ ಮೂಲದ ವ್ಯಕ್ತಿಗಳು ಅಮೆರಿಕದ ಸಾವಿರಾರು ಜನರಿಗೆ ಲಕ್ಷಾಂತರ ಡಾಲರ್ ಹಣ ವಂಚಿಸಿದ್ದಾರೆ.

ಪುಟಿನ್ ನೋಡಿ ಬೆದರಿದರೇ ಮೆಲಾನಿಯಾ ಟ್ರಂಪ್?: ತಮಾಷೆಯ ವೈರಲ್ ವಿಡಿಯೋಪುಟಿನ್ ನೋಡಿ ಬೆದರಿದರೇ ಮೆಲಾನಿಯಾ ಟ್ರಂಪ್?: ತಮಾಷೆಯ ವೈರಲ್ ವಿಡಿಯೋ

ವಿವಿಧ ದೂರವಾಣಿ ಸಂಪರ್ಕಗಳನ್ನು ಬಳಸಿಕೊಂಡು ಸುಳ್ಳು ಯೋಜನೆಗಳ ಹೆಸರಿನಲ್ಲಿ ಭಾರತದ ಕಾಲ್ ಸೆಂಟರ್‌ಗಳು ಅಮೆರಿಕದ ಹಿರಿಯರು ಹಾಗೂ ಕಾನೂನುಬದ್ಧ ವಲಸಿಗರು ಸೇರಿದಂತೆ ನೂರಾರು ಮಂದಿಗೆ ವಂಚಿಸಿವೆ.

21 indian origins sentenced in call centre scam in us

2012-2016ರ ಅವಧಿಯಲ್ಲಿ ಅಹ್ಮದಾಬಾದ್‌ನಲ್ಲಿ ಇರುವ ಕಾಲ್‌ ಸೆಂಟರ್‌ನಿಂದ ಕರೆ ಮಾಡುತ್ತಿದ್ದ ವ್ಯಕ್ತಿಗಳು ಜನರಿಂದ ಹಣ ವರ್ಗಾಯಿಸಿಕೊಂಡು ಅವರನ್ನು ವಂಚಿಸುತ್ತಿದ್ದರು.

ಅಮೆರಿಕದಾದ್ಯಂತ ಜನರನ್ನು ವಂಚಿಸಲು ಆಂತರಿಕ ಕಂದಾಯ ಸೇವೆ ಅಥವಾ ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಯ ಅಧಿಕಾರಿಗಳ ಸೋಗಿನಲ್ಲಿ ಕರೆಮಾಡುತ್ತಿದ್ದರು.

ಥಾಯ್ಲೆಂಡ್: ಗುಹೆಯಲ್ಲಿ ಅನುಭವಿಸಿದ ಸಂಕಷ್ಟಗಳನ್ನು ಬಿಚ್ಚಿಟ್ಟ ಬಾಲಕರುಥಾಯ್ಲೆಂಡ್: ಗುಹೆಯಲ್ಲಿ ಅನುಭವಿಸಿದ ಸಂಕಷ್ಟಗಳನ್ನು ಬಿಚ್ಚಿಟ್ಟ ಬಾಲಕರು

ಡಾಟಾ ಬ್ರೋಕರ್‌ಗಳು ಮತ್ತು ಇತರೆ ಮೂಲಗಳಿಂದ ಅಮೆರಿಕದ ಜನರ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದ ವಂಚಕರು, ಸರ್ಕಾರಕ್ಕೆ ಸಿಗಬೇಕಾದ ಹಣ ನೀಡದಿದ್ದರೆ ಬಂಧನ, ಜೈಲು ಶಿಕ್ಷೆ, ದಂಡ ಅಥವಾ ಗಡಿಪಾರಿಗೆ ಒಳಗಾಗಬೇಕಾಗುತ್ತದೆ ಎಂದು ಬೆದರಿಸುತ್ತಿದ್ದರು.

ಇದರಿಂದ ಭಯಗೊಳ್ಳುತ್ತಿದ್ದ ಜನರು ಸ್ಟೋರ್ಡ್ ವ್ಯಾಲ್ಯೂ ಕಾರ್ಡ್ ಸೇರಿದಂತೆ ವಂಚಕರು ಸೂಚಿಸಿದ ರೀತಿಯಲ್ಲಿ ಹಣವನ್ನು ಪಾವತಿ ಮಾಡುತ್ತಿದ್ದರು.

ಇವರಲ್ಲದೆ ಭಾರತ ಮೂಲದ ಇನ್ನೂ 32 ವ್ಯಕ್ತಿಗಳು ಹಾಗೂ ಐದು ಕಾಲ್ ಸೆಂಟರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮೊದಲು ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಭಾಗಿಯಾದ ಮೂವರನ್ನು ಶಿಕ್ಷೆ ಗುರಿಪಡಿಸಲಾಗಿತ್ತು.

English summary
21 indian origin persons have been sentenced to up to 20 years in US for multimillion dollar call centre scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X