ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಸ್ಪೀಕರ್ ಪಲೋಸಿ ಬರುತ್ತಿದ್ದಂತೆ ತೈವಾನ್‌ಗೆ ನುಗ್ಗಿದ ಚೀನಾ ಸೇನಾ ವಿಮಾನ

|
Google Oneindia Kannada News

ತೈಪೆ, ಆಗಸ್ಟ್ 3: ಯುನೈಟೆಡ್ ಸ್ಟೇಟ್ಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ತೈಪೆಗೆ ಬಂದಿಳಿದ ಸ್ವಲ್ಪ ಸಮಯದಲ್ಲಿ ಚೀನಾ ವಕ್ರದೃಷ್ಟಿ ಬೀರಿದೆ. ಚೀನಾದ 21 ಮಿಲಿಟರಿ ವಿಮಾನಗಳು ತೈವಾನ್‌ನ ವಾಯು ರಕ್ಷಣಾ ಗುರುತಿನ ವಲಯದ (ADIZ) ನೈಋತ್ಯ ಭಾಗದಲ್ಲಿ ಹಾರಿವೆ ಎಂಬುದನ್ನು ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯವು ದೃಢಪಡಿಸಿದೆ.

ಟ್ವಿಟರ್‌ನಲ್ಲಿ ತೈವಾನ್ ರಕ್ಷಣಾ ಸಚಿವಾಲಯವು, "21 PLA ವಿಮಾನಗಳು (J-11*8, J-16*10, KJ-500 AEW&C, Y-9 EW ಮತ್ತು Y-8 ELINT) ಆಗಸ್ಟ್ 2, 2022 ರಂದು ತೈವಾನ್‌ನ ನೈಋತ್ಯ ADIZ ಅನ್ನು ಪ್ರವೇಶಿಸಿತು," ಎಂದು ಉಲ್ಲೇಖಿಸಿದೆ.

ತೈವಾನ್ ವಿಷಯದಲ್ಲಿ ಹಿಂದೆ ಸರಿಯಿತೇ ಯುಎಸ್: ಅನುಮಾನಕ್ಕೆ ಕಾರಣ?ತೈವಾನ್ ವಿಷಯದಲ್ಲಿ ಹಿಂದೆ ಸರಿಯಿತೇ ಯುಎಸ್: ಅನುಮಾನಕ್ಕೆ ಕಾರಣ?

ಇದಕ್ಕೆ ಪ್ರತಿಕ್ರಿಯೆಯಾಗಿ, ತೈವಾನ್ ವಾಯು ಸೇನೆಯು ಗಸ್ತು ತಿರುಗಿತು. ಆ ಮೂಲಕ ರೇಡಿಯೋ ಎಚ್ಚರಿಕೆಗಳನ್ನು ಕಳುಹಿಸಲಾಗಿದ್ದು, ಚೀನಾದ ಮಿಲಿಟರಿ ವಿಮಾನಗಳನ್ನು ಪತ್ತೆ ಹಚ್ಚಲು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಿತು ಎಂದು ರಾಷ್ಟ್ರೀಯ ರಕ್ಷಣಾ ಸಚಿವಾಲಯ ಹೇಳಿದೆ.

ತೈವಾನ್‌ಗೆ ಆವಾಜ್ ಹಾಕಿದ ಚೀನಾ

ತೈವಾನ್‌ಗೆ ಆವಾಜ್ ಹಾಕಿದ ಚೀನಾ

ಚೀನಾ ಬೆದರಿಕೆಯ ಹಿನ್ನೆಲೆ ಇಂಡೋ-ಪೆಸಿಫಿಕ್ ಪ್ರದೇಶದ ಕಾಂಗ್ರೆಸ್ ನಿಯೋಗದ ಪ್ರವಾಸದ ಭಾಗವಾಗಿ ಪೆಲೋಸಿ ಮಂಗಳವಾರ ತೈವಾನ್‌ಗೆ ಭೇಟಿ ನೀಡಿದರು. ಆಕೆಯ ವಿಮಾನ ತೈಪೆಯಲ್ಲಿ ಇಳಿದ ಕೆಲವೇ ನಿಮಿಷಗಳಲ್ಲಿ, ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತೈವಾನ್ ಸುತ್ತಮುತ್ತಲಿನ ನೀರಿನಲ್ಲಿ ಆರು ಲೈವ್-ಫೈರ್ ಮಿಲಿಟರಿ ಡ್ರಿಲ್‌ಗಳನ್ನು ನಡೆಸುವುದಾಗಿ ಘೋಷಿಸಿತು, ಇದು ಗುರುವಾರದಿಂದ ಭಾನುವಾರದವರೆಗೆ ನಡೆಯಲಿದೆ ಎಂದು ಹೇಳಿತು.

ಚೀನಾದ ಡ್ರಿಲ್‌ಗಳ ಘೋಷಣೆಗೆ ಪ್ರತಿಕ್ರಿಯೆಯಾಗಿ, ತೈವಾನ್‌ನ ರಕ್ಷಣಾ ಸಚಿವಾಲಯವು ಮುಂದಿನ ಕೆಲವು ದಿನಗಳಲ್ಲಿ ತೈವಾನ್ ಸುತ್ತಮುತ್ತಲಿನ ನೀರಿನಲ್ಲಿ ಆರು ಲೈವ್-ಫೈರ್ ಮಿಲಿಟರಿ ಡ್ರಿಲ್‌ಗಳನ್ನು ನಡೆಸುವ ಚೀನಾದ ಯೋಜನೆಗಳು ತೈವಾನ್‌ನ ಪ್ರಮುಖ ಬಂದರುಗಳು ಮತ್ತು ಮಹಾನಗರ ಪ್ರದೇಶಗಳಿಗೆ ಬೆದರಿಕೆ ಹಾಕುವ ಪ್ರಯತ್ನವಾಗಿದೆ ಎಂದು ಹೇಳಿತು.

ಚೀನಾದ ಏಕಪಕ್ಷೀಯ ನಿರ್ಧಾರಕ್ಕೆ ತೈವಾನ್ ವಿರೋಧ

ಚೀನಾದ ಏಕಪಕ್ಷೀಯ ನಿರ್ಧಾರಕ್ಕೆ ತೈವಾನ್ ವಿರೋಧ

"ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡುವ ಚೀನಾದ ಏಕಪಕ್ಷೀಯ ಪ್ರಯತ್ನವು ಸೂಕ್ತವಾಗಿದ್ದಲ್ಲ. ಅದು ಚೀನಾದ ಅಂತರಾಷ್ಟ್ರೀಯ ಘನತೆಯನ್ನು ಹೆಚ್ಚಿಸುವುದಿಲ್ಲ. ಚೀನಾದ ಯೋಜನೆಗಳನ್ನು ಬಲವಾಗಿ ಖಂಡಿಸುತ್ತದೆ, ಏಕೆಂದರೆ ಚೀನಾದಿಂದ ತೈವಾನ್ ಜಲಸಂಧಿಯ ಎರಡೂ ಬದಿಗಳ ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ," ಎಂದು MND ಹೇಳಿಕೆಯಲ್ಲಿ ತಿಳಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿಯ ಯೋಜಿತ ಡ್ರಿಲ್‌ಗಳು ಚೀನಾದ ಮನಸ್ಥಿತಿಯನ್ನು ತೋರಿಸುತ್ತವೆ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡಲು ಅದು ಹೇಗೆ ಒತ್ತಾಯಿಸುತ್ತದೆ ಎಂದು ಪ್ರಶ್ನೆ ಮಾಡಲಾಗಿದೆ. ಆದಾಗ್ಯೂ ಸಚಿವಾಲಯವು ಪೀಪಲ್ಸ್ ಲಿಬರೇಶನ್ ಆರ್ಮಿ ಚಲನವಲನಗಳನ್ನು ಹತ್ತಿರದಿಂದ ಗಮನಿಸುತ್ತಿದೆ. ಚೀನಾದ ಮಿಲಿಟರಿಯ ಯಾವುದೇ ಕ್ರಮಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ ಎಂದು MND ಸ್ಪಷ್ಟಪಡಿಸಿದೆ.

ಏನಿದು ತೈವಾನ್ ವಿರುದ್ಧದ ಈ ಯೋಜಿತ ಡ್ರಿಲ್?

ಏನಿದು ತೈವಾನ್ ವಿರುದ್ಧದ ಈ ಯೋಜಿತ ಡ್ರಿಲ್?

ಚೀನಾದ ಮಾಧ್ಯಮ ವರದಿಗಳ ಪ್ರಕಾರ, ತೈವಾನ್ ಜಲಸಂಧಿ, ಬಾಶಿ ಚಾನೆಲ್, ಪೂರ್ವ ಚೀನಾ ಸಮುದ್ರ ಮತ್ತು ಪೆಸಿಫಿಕ್‌ನಲ್ಲಿ ರಾಷ್ಟ್ರದ ಉತ್ತರ, ಈಶಾನ್ಯ, ವಾಯುವ್ಯ, ಪೂರ್ವ, ದಕ್ಷಿಣ ಮತ್ತು ನೈಋತ್ಯ ನೀರಿನಲ್ಲಿ ಡ್ರಿಲ್‌ಗಳನ್ನು ಕೈಗೊಳ್ಳುವುದಾಗಿ ಚೀನಾ ಘೋಷಿಸಿದೆ. ಈ ಯೋಜಿತ ಡ್ರಿಲ್‌ಗಳ ಒಂದು ಸ್ಥಳವು ದಕ್ಷಿಣ ತೈವಾನ್‌ನ ಕಾಹ್‌ಸಿಯುಂಗ್‌ನಿಂದ 20 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿದೆ. "ಚೀನೀ ಸಶಸ್ತ್ರ ಪಡೆಗಳು ತೈವಾನ್ ಸುತ್ತಲೂ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸುತ್ತವೆ. ತೈವಾನ್ ಜಲಸಂಧಿಯಲ್ಲಿ ದೀರ್ಘ-ಶ್ರೇಣಿಯ ಲೈವ್ ಫೈರಿಂಗ್ ನಡೆಯಲಿದೆ ಮತ್ತು ಸಾಂಪ್ರದಾಯಿಕ ಕ್ಷಿಪಣಿ ಪರೀಕ್ಷೆಗಳನ್ನು ದ್ವೀಪದ ಪೂರ್ವ ಭಾಗದ ಸಮುದ್ರ ಪ್ರದೇಶದಲ್ಲಿ ಆಯೋಜಿಸಲಾಗುತ್ತದೆ," ಎಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ( PLA) ಈಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರ ಶಿ ಯಿ ಹೇಳಿದ್ದಾರೆ. "ಈ ಕ್ರಮಗಳು ತೈವಾನ್ ವಿಷಯದ ಬಗ್ಗೆ ಯುಎಸ್ ತೆಗೆದುಕೊಳ್ಳುತ್ತಿರುವ ಕ್ರಮಗಳು ಇತ್ತೀಚಿನ ಬೆಳವಣಿಗೆ ಕಾರಣವಾಗಿದೆ. ಅಲ್ಲದೇ ತೈವಾನ್ ಪರ ಸ್ವಾತಂತ್ರ್ಯ ಪಡೆಗಳಿಗೆ ಗಂಭೀರ ಎಚ್ಚರಿಕೆಯಾಗಿದೆ," ಎಂದು ಶಿ ಯಿ ತಿಳಿಸಿದ್ದಾರೆ.

ಪೆಲೋಸಿಯ ತೈವಾನ್ ಭೇಟಿ ಕುರಿತು ಉಲ್ಲೇಖಿಸಿದ ಚೀನಾ

ಪೆಲೋಸಿಯ ತೈವಾನ್ ಭೇಟಿ ಕುರಿತು ಉಲ್ಲೇಖಿಸಿದ ಚೀನಾ

ತೈವಾನ್‌ಗೆ ಭೇಟಿ ನೀಡುವುದರಿಂದ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೀಜಿಂಗ್ ಎಚ್ಚರಿಕೆಯ ನಂತರವೂ ಪೆಲೋಸಿ ತೈಪೆಗೆ ವಿಸಿಟ್ ಕೊಟ್ಟಿದ್ದಾರೆ. ಇದು ಉದ್ದೇಶಪೂರ್ವಕ ಪ್ರಚೋದನೆಯಾಗಿದ್ದು, ಪೀಪಲ್ಸ್ ಲಿಬರೇಶನ್ ಆರ್ಮಿಯು ಪ್ರತಿಯಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯಾನ್ ಹೇಳಿದ್ದಾರೆ.

ಪೆಲೋಸಿಯ ಭೇಟಿಯು ಮೂರು ಜಂಟಿ ಸಂವಹನ ಮತ್ತು ಚೀನಾ ತತ್ವದ ಗಂಭೀರ ಉಲ್ಲಂಘನೆಯಾಗಿದೆ. ಯುಎಸ್-ಚೀನಾ ಸಂಬಂಧಗಳನ್ನು ಗಂಭೀರವಾಗಿ ಘಾಸಿಗೊಳಿಸಿದೆ, ತೈವಾನ್ ಸ್ವಾತಂತ್ರ್ಯಕ್ಕಾಗಿ ಎಲ್ಲಾ ಬಾಹ್ಯ ಹಸ್ತಕ್ಷೇಪ ಮತ್ತು ಪ್ರತ್ಯೇಕತಾವಾದಿಗಳ ಪ್ರಯತ್ನಗಳನ್ನು ದೃಢವಾಗಿ ಹತ್ತಿಕ್ಕಲಾಗುತ್ತದೆ. ಇದರ ಮಧ್ಯೆ, ಯುಎಸ್ ನೌಕಾಪಡೆಯು ತೈವಾನ್‌ನ ಪೂರ್ವಕ್ಕೆ ಫಿಲಿಪೈನ್ ಸಮುದ್ರದಲ್ಲಿ ಮತ್ತು ಫಿಲಿಪೈನ್ಸ್ ಮತ್ತು ಜಪಾನ್‌ನ ದಕ್ಷಿಣದಲ್ಲಿ ವಾಡಿಕೆಯ ನಿಯೋಜನೆ ಎಂದು ಕರೆಯಲ್ಪಡುವ ನಾಲ್ಕು ಯುದ್ಧನೌಕೆಗಳನ್ನು ನಿಯೋಜಿಸಿದೆ ಎಂದು ಮಾಧ್ಯಮ ವರದಿ ಮಾಡಿವೆ.

ವಿಮಾನವಾಹಕ ನೌಕೆ ಯುಎಸ್ಎಸ್ ರೊನಾಲ್ಡ್ ರೇಗನ್, ಮಾರ್ಗದರ್ಶಿ ಕ್ಷಿಪಣಿ ಕ್ರೂಸರ್ ಯುಎಸ್ಎಸ್ ಆಂಟಿಟಮ್, ವಿಧ್ವಂಸಕ ಯುಎಸ್ಎಸ್ ಹಿಗ್ಗಿನ್ಸ್ ಮತ್ತು ಬಿಗ್ ಡೆಕ್ ಉಭಯಚರ ಹಡಗು ಯುಎಸ್ಎಸ್ ಟ್ರಿಪೋಲಿ ಸೇರಿವೆ ಎಂದು ಯುಎಸ್ ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೀನಾ ಬೆದರಿಕೆ ಎದುರಿಸುತ್ತಿರುವ ತೈವಾನ್ ನೆಲದಲ್ಲಿ ಪಲೋಸಿ ಸಂದೇಶ

ಚೀನಾ ಬೆದರಿಕೆ ಎದುರಿಸುತ್ತಿರುವ ತೈವಾನ್ ನೆಲದಲ್ಲಿ ಪಲೋಸಿ ಸಂದೇಶ

ಯುಎಸ್ ಉಪಾಧ್ಯಕ್ಷರ ನಂತರ ಓವಲ್ ಕಛೇರಿಯ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಯುಎಸ್ ಹೌಸ್ ಸ್ಪೀಕರ್, ತೈವಾನ್‌ನ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ತನ್ನ ದೇಶದ ಅಚಲವಾದ ಬದ್ಧತೆಯನ್ನು ಪುನರುಚ್ಚರಿಸಿದರು. ತಮ್ಮ ಈ ಪ್ರವಾಸವು ಸ್ವ-ಆಡಳಿತ ದ್ವೀಪದಲ್ಲಿ ದೀರ್ಘಕಾಲದ ಯುನೈಟೆಡ್ ಸ್ಟೇಟ್ಸ್ ನೀತಿಯನ್ನು ವಿರೋಧಿಸುವುದಿಲ್ಲ ಎಂದು ಹೇಳಿದರು.

"ತೈವಾನ್ ನಾಯಕತ್ವದೊಂದಿಗಿನ ಚರ್ಚೆಗಳು ನಮ್ಮ ಪಾಲುದಾರರಿಗೆ ಬೆಂಬಲವನ್ನು ಪುನರುಚ್ಚರಿಸುವುದರ ಸಂಕೇತವಾಗಿದೆ. ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಮುನ್ನಡೆಸುವುದು ಸೇರಿದಂತೆ ನಮ್ಮ ಹಂಚಿಕೆಯ ಆಸಕ್ತಿಗಳನ್ನು ಉತ್ತೇಜಿಸುವುದರ ಮೇಲೆ ನಾವು ಗಮನವನ್ನು ಕೇಂದ್ರೀಕರಿಸುತ್ತವೆ," ಎಂದು ತೈವಾನ್‌ನಲ್ಲಿ ಪಲೋಸಿ ಹೇಳಿದರು.

Recommended Video

ಮಳೆಗೆ ತತ್ತರಿಸಿದ ಕರ್ನಾಟಕ ಜನತೆ !! | Oneindia Kannada

English summary
21 Chinese military aircraft enter Taiwan Air Defence Zone amid US House Speaker Nancy Pelosi visit. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X