ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆದುಳಿನ 'ಜಿಪಿಎಸ್‌' ಶೋಧಕರಿಗೆ ವೈದ್ಯ ನೊಬೆಲ್

|
Google Oneindia Kannada News

ಸ್ಟಾಕ್ ಹೋಮ್‌, ಅ.7 : ಮೆದುಳಿನಲ್ಲಿನ ಆಂತರಿಕ ಜಿಪಿಎಸ್‌ ಕುರಿತು ಸಂಶೋಧನೆ ನಡೆಸಿದ ಬ್ರಿಟನ್-ಅಮೆರಿಕ ಮೂಲದ ಸಂಶೋಧಕ ಜಾನ್ ಒ' ಕೀಫ್, ನಾರ್ವೆ ಮೂಲದ ದಂಪತಿ ಎಡ್ವರ್ಡ್‌ ಮೋಜರ್‌ ಹಾಗೂ ಮೇ-ಬ್ರೀಟ್‌ ಮೋಜರ್‌ ಅವರಿಗೆ ಪ್ರತಿಷ್ಠಿತ ವೈದ್ಯ ನೊಬೆಲ್ ಲಭಿಸಿದೆ.

ಸೋಮವಾರ ವೈದ್ಯ ನೊಬೆಲ್‌ ಪ್ರಕಟವಾಗಿದೆ. 6.77 ಕೋಟಿ ರೂ. ನಗದು ಹೊಂದಿರುವ ಬಹುಮಾನ ಮೂವರಿಗೂ ಸಮನಾಗಿ ಹಂಚಿಕೆಯಾಗುವುದಿಲ್ಲ. ಅರ್ಧದಷ್ಟು ಹಣ ಒ' ಕೀಫ್ ಪಾಲಾದರೆ ಉಳಿದ ಅರ್ಧ ಹಣ ನಾರ್ವೆ ದಂಪತಿ ಪಾಲಾಗಲಿದೆ.[ನೊಬೆಲ್ ಪುರಸ್ಕೃತ ಮಾರ್ಕ್ವೆಜ್ ಟ್ವೀಟ್ ಸ್ಮರಣೆ]

nobel

ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳನ್ನು ಶತಮಾನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಈ ಮೂವರು ತಮ್ಮ ಸಂಶೋಧನೆ ಮೂಲಕ ಉತ್ತರ ಕಂಡುಹಿಡಿದಿದ್ದಾರೆ ಎಂದು ನೊಬೆಲ್ ತೀರ್ಪುಗಾರರ ಮಂಡಳಿ ಹೇಳಿದೆ. ಮೆದುಳು ನಮ್ಮ ಸುತ್ತಲಿನ ವಾತಾವರಣದ ನಕ್ಷೆಯನ್ನು ಹೇಗೆ ತಯಾರಿಸುತ್ತದೆ? ಹಾಗೂ ಸಂಕೀರ್ಣ ಪರಿಸರದಲ್ಲಿ ನಾವು ಹೇಗೆ ಓಡಾಡುತ್ತೇವೆ? ಎಂಬುದೆ ಈ ಸಂಶೋಧನೆಯ ತಿರುಳು.

1971ರಲ್ಲಿ ಒ' ಕೀಫ್ ಇಲಿಯ ನರಮಂಡಲದಲ್ಲಿ ಒಂದು ಮಾದರಿಯ ಕೋಶ ಪತ್ತೆಹಚ್ಚಿದ್ದರು. ಆ ಇಲಿಯನ್ನು ಪ್ರಯೋಗಾಲಯದ ಒಂದು ನಿರ್ದಿಷ್ಟ ಭಾಗದಲ್ಲಿ ಇಡುತ್ತಿದ್ದಂತೆ ಆ ಕೋಶ ಜಾಗೃತವಾಗುತ್ತಿತ್ತು. ಇದರಿಂದ ಇಲಿಯ ಮೆದುಳಿನಲ್ಲಿ ಕೋಣೆಯ ನಕ್ಷೆ ಸಿದ್ಧವಾಗುತ್ತಿತ್ತು.[ಇಂಟರ್ ನೆಟ್ ಗೆ ಸಿಗುವುದೇ ನೊಬೆಲ್ ಶಾಂತಿ ಪ್ರಶಸ್ತಿ?]

2005ರಲ್ಲಿ ಮೇರಿ ಬ್ರಿಟ್‌ ಮತ್ತು ಎಡ್ವರ್ಡ್ ರೋಜರ್‌ ದಂಪತಿ ಮತ್ತೊಂದು ಸಂಶೋಧನೆ ಮಾಡಿದರು. ಮೆದುಳಿನ ಯಾವ ಕೋಶ ಸಮನ್ವಯ ವ್ಯವಸ್ಥೆ ಸೃಷ್ಟಿಸಿ, ನಿರ್ದಿಷ್ಟ ಜಾಗ ಗುರುತಿಸಿ ದಾರಿ ತೋರಿಸುತ್ತದೆ ಎಂಬುದನ್ನು ಪತ್ತೆ ಹಚ್ಚಿದ್ದರು.

ಅಲ್ಜೀಮರ್‌ ರೋಗಿಗಳಿಗೆ ಅನುಕೂಲ: ನರ ವೈದ್ಯ ಸಮಸ್ಯೆಯಾದ ಅಲ್ಜೀಮರ್‌ ಕಾಯಿಲೆ ಕಾಣಿಸಿಕೊಂಡ ಆರಂಭಿಕ ಹಂತದಲ್ಲೇ ಮೆದುಳಿನಲ್ಲಿನ ಜಾಗ ಗುರುತಿಸುವ ಸರ್ಕಿಟ್‌ಗೆ ಹಾನಿಯಾಗುತ್ತದೆ. ಈ ಮೂವರ ಸಂಶೋಧನೆ ಅಲ್ಜೀಮರ್‌ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ.

English summary
A British-American scientist and a pair of Norwegian researchers were awarded this year’s Nobel Prize in Physiology or Medicine on Monday for discovering “an inner GPS in the brain” that enables virtually all creatures to navigate their surroundings.John O’Keefe, a British-American scientist, will share the prize of $1.1 million with May-Britt Moser and Edvard I. Moser only the second married couple to win a Nobel in medicine, who will receive the other half.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X