ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊವೆಲ್ ಕೊರೊನಾ ವೈರಸ್ ನಿಂದಾಗಿ 'ನೇಪಾಳ' ನರ್ವಸ್!

|
Google Oneindia Kannada News

ಕಠ್ಮಂಡು, ಜೂನ್.03: ನೊವೆಲ್ ಕೊರೊನಾ ವೈರಸ್ ಭೀತಿ ಇಲ್ಲದೇ ಕೊಂಚ ನಿರಾಳವಾಗಿದ್ದ ನೇಪಾಳದಲ್ಲೂ ಮಹಾಮಾರಿಯ ಅಟ್ಟಹಾಸ ತೋರುತ್ತಿದೆ. ಕಳೆದ 24 ಗಂಟೆಗಳಲ್ಲಿ ನೇಪಾಳದಲ್ಲಿ 201 ಜನರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.

ನೇಪಾಳದಲ್ಲಿ ಬುಧವಾರ ನೊವೆಲ್ ಕೊರೊನಾ ವೈರಸ್ ಸೋಂಕಿನಿಂದ 70 ವರ್ಷದ ವೃದ್ಧರೊಬ್ಬರು ಪ್ರಾಣ ಬಿಟ್ಟಿದ್ದಾರೆ. ತೀವ್ರ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧನಿಗೆ ನೀಡಿದ ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದ್ದಾರೆ. ಇನ್ನು, 201 ಜನರಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 2,300ಕ್ಕೆ ಏರಿಕೆಯಾಗಿದೆ.

ಕೋವಿಡ್ 19: ನೇಪಾಳ ಪಿಎಂ ಓಲಿಯಿಂದ ಭಾರತ ವಿರುದ್ಧ ಆರೋಪ ಕೋವಿಡ್ 19: ನೇಪಾಳ ಪಿಎಂ ಓಲಿಯಿಂದ ಭಾರತ ವಿರುದ್ಧ ಆರೋಪ

ಕೇಂದ್ರ ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯದ ವಕ್ತಾರ ಬಿಕಾಶ್ ದೇವಕೋಟಾ ಈ ಬಗ್ಗೆ ಸ್ಪಷ್ಟನೆ ನೀಡಿದರು. ಬುಧವಾರ ಪತ್ತೆಯಾದ 201 ಸೋಂಕಿತರ ಪೈಕಿ 179 ಮಂದಿ ಪುರುಷರಿದ್ದು, 22 ಮಹಿಳೆಯರಿದ್ದಾರೆ ಎಂದು ಮಾಹಿತಿ ನೀಡಿದರು.

201 New Coronavirus Cases Reported in Nepal Today, Nationa Tally Rise to 2,300

ನೇಪಾಳದಳಲ್ಲಿ ಕೊವಿಡ್-19 ನಿಂದ ಮಹಿಳೆಯರು ಸೇಫ್?:

ನೇಪಾಳದಲ್ಲಿ ಕೊರೊನಾ ವೈರಸ್ ಸೋಂಕಿತನಿಂದ ಮಹಿಳೆಯರು ಸುರಕ್ಷಿತರಾಗಿದ್ದಾರೆ ಎನ್ನುವುದನ್ನು ಅಂಕಿ-ಅಂಶಗಳೇ ಸಾರಿ ಹೇಳುತ್ತಿದೆ. ದೇಶಾದ್ಯಂತ ಪತ್ತೆಯಾಗಿರುವ 2,300 ಕೊರೊನಾ ವೈರಸ್ ಸೋಂಕಿತರ ಪೈಕಿ 170 ಮಂದಿಯಷ್ಟೇ ಮಹಿಳೆಯರಾಗಿದ್ದಾರೆ. ಬಾಕಿ 2,130 ಮಂದಿ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ.

English summary
201 New Coronavirus Cases Reported in Nepal Today, Nationa Tally Rise to 2,300.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X