• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ರೇಲ್‌ ಸೇನೆಯ ಗಾಝಾ ದಾಳಿಯಲ್ಲಿ ಗುಜರಾತಿ ಯುವತಿ ಶೌರ್ಯ

|
Google Oneindia Kannada News

ಗಾಝಾ, ಜೂನ್ 17: ವಿಶ್ವದ ಅತ್ಯುತ್ತಮ ಸಶಸ್ತ್ರ ಪಡೆ ಎಂದೇ ಕರೆಸಿಕೊಂಡಿರುವ ಇಸ್ರೇಲ್ ಸೇನಾ ಪಡೆ ಈಗ ಮತ್ತೂ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ.

   ಇಸ್ರೇಲ್ ಸೇನೆಯಲ್ಲಿ ಭಾರತದ ಯುವತಿ | Oneindia Kannada

   ಹನ್ನೊಂದು ದಿನಗಳ ನಿರಂತರ ಯುದ್ಧದ ನಂತರ ಕದನ ವಿರಾಮ ಘೋಷಿಸಲಾಗಿದ್ದ ಗಾಝಾ ಪ್ರದೇಶದಲ್ಲಿ ಇಸ್ರೇಲ್ ಸೇನೆ ಬುಧವಾರ ವೈಮಾನಿಕ ದಾಳಿ ನಡೆಸಿದ್ದು, ಆ ದಾಳಿ ನಡೆಸುವಲ್ಲಿ ಗುಜರಾತ್ ಮೂಲದ 20 ವರ್ಷದ ಯುವತಿ ಪಾಲ್ಗೊಂಡು ಧೈರ್ಯ ಪ್ರದರ್ಶಿಸಿದ್ದಾರೆ.

   ಭೀಕರ ಯುದ್ಧ ನಿಲ್ಲಿಸಿದ ಇಸ್ರೇಲ್, ನೂರಾರು ಜನರು ಜೈಲು ಪಾಲು..!ಭೀಕರ ಯುದ್ಧ ನಿಲ್ಲಿಸಿದ ಇಸ್ರೇಲ್, ನೂರಾರು ಜನರು ಜೈಲು ಪಾಲು..!

   ಪ್ಯಾಲೆಸ್ತಿನ್ ಪ್ರದೇಶದಲ್ಲಿನ ಉಗ್ರರು ಬೆಂಕಿಯ ಬಲೂನನ್ನು ಹಾರಿಬಿಟ್ಟಿದ್ದ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರತಿ ದಾಳಿ ನಡೆಸಿತ್ತು. ಈ ವೈಮಾನಿಕ ದಾಳಿಯಲ್ಲಿ ಗುಜರಾತಿ ಯುವತಿ ನಿತ್ಶಾ ಮುಲಿಯಾಶಾ ಇಸ್ರೇಲ್ ರಕ್ಷಣಾ ತಂಡದ ಭಾಗವಾಗಿದ್ದುದು ವಿಶೇಷವಾಗಿತ್ತು. ಗುಜರಾತ್ ರಾಜ್‌ ಕೋಟ್‌ನ ಮನಾವದಾರ್ ತಾಲೂಕಿನ ಕೊತಾಡಿ ಗ್ರಾಮ ಮೂಲದ ನಿತ್ಶಾ ಇಸ್ರೇಲ್ ಸೇನೆಗೆ ಸೇರ್ಪಡೆಗೊಂಡ ಮೊದಲ ಗುಜರಾತಿ ಯುವತಿ ಎಂದೂ ಕರೆಸಿಕೊಂಡಿದ್ದಾರೆ.

   ತಮ್ಮ ಈ ಮಗಳ ಸಾಧನೆ ಕುರಿತು ಹೇಳಿಕೊಂಡಿರುವ ನಿತ್ಶಾ ತಂದೆ ಝೀವಾಭಾಯ್ ಮುಲಿಯಾಶಾ, ಇಸ್ರೇಲಿ ಶಿಕ್ಷಣ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ.

   "ಇಲ್ಲಿನ ಶಾಲಾ ಪದ್ಧತಿಯು ಮಕ್ಕಳ ಕೌಶಲಗಳನ್ನು ಅಳೆಯಲು ಪರೀಕ್ಷೆಗಳನ್ನು ನಡೆಸಿ ಅವರನ್ನು ತಯಾರುಗೊಳಿಸುತ್ತದೆ. ಇದರಿಂದಾಗಿ ಅವರಿಗೆ ಸೂಕ್ತವಾದ ಕೋರ್ಸ್ ಹಾಗೂ ವೃತ್ತಿ ಜೀವನವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಇದೇ ಅವರ ಸಾಧನೆಗೆ ಅಡಿಪಾಯವಾಗುತ್ತದೆ. ಯುವತಿಯರಿಗೂ ಸೇನೆಯಲ್ಲಿ ಅವಕಾಶ ನೀಡಿ ತರಬೇತಿ ನೀಡುವುದು ಈ ಸೇನೆಯ ವಿಶೇಷತೆ" ಎಂದು ಶ್ಲಾಘಿಸುತ್ತಾರೆ.

   ಯುದ್ಧಭೂಮಿಯಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ಬಹುಆಯಾಮದ ಕೌಶಲ ಬಳಕೆಯಲ್ಲಿ ನಿತ್ಶಾ ತರಬೇತಿ ಪಡೆದಿದ್ದಾರೆ. "ಸೇನೆಯಲ್ಲಿ 2.4 ವರ್ಷಗಳ ತರಬೇತಿ ಮುಗಿದ ನಂತರ ಐದು ವರ್ಷ ಅಥವಾ 10 ವರ್ಷದ ಅವಧಿಯ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಈ ಸಮಯದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಅಥವಾ ಇನ್ನಾವುದೇ ಕೋರ್ಸ್ ಮುಗಿಸಬಹುದು. ಸೇನೆಯೇ ಈ ಎಲ್ಲಾ ವೆಚ್ಚವನ್ನು ಭರಿಸುತ್ತದೆ," ಎಂದು ನಿತಾಶಾ ತಂದೆ ವಿವರಿಸುತ್ತಾರೆ.

   ಕಳೆದ ಎರಡು ವರ್ಷಗಳಲ್ಲಿ ನಿತ್ಶಾ ಅವರನ್ನು ಲೆಬನಾನ್, ಸಿರಿಯಾ, ಜೋರ್ಡನ್ ಮತ್ತು ಈಜಿಪ್ಟ್‌ ಗಡಿಗಳಲ್ಲಿ ಪೋಸ್ಟ್ ಮಾಡಲಾಗಿದೆ. ಪ್ರಸ್ತುತ ಇಸ್ರೇಲಿ ಪಡೆಗಳು ಪ್ರತಿದಾಳಿ ನಡೆಸುತ್ತಿರುವುದರಿಂದ ಗುಶ್ ದಾನ್‌ನಲ್ಲಿ ನೇಮಿಸಲಾಗಿದೆ. ಇಲ್ಲಿಯೂ ತಮ್ಮ ಧೈರ್ಯ ಪ್ರದರ್ಶನ ಮಾಡಿದ್ದಾರೆ ನಿತ್ಶಾ.

   English summary
   Nitsha Muliyasha, 20, is among the brave recruits of the IDF, which is considered the finest armed forces in the world by military experts
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X