ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಗೆ ನಡುಕ ಹುಟ್ಟಿಸಿತು ಅಮೆರಿಕಾ ಅಧ್ಯಕ್ಷ ಟ್ರಂಪ್ ತೀರ್ಮಾನ

|
Google Oneindia Kannada News

ವಾಶಿಂಗ್ಟನ್, ಜುಲೈ.15: ಚೀನಾ ಹಾಗೂ ಅಮೆರಿಕಾದ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಲೆ ಬಿಸಿ ಮಾಡಿದ್ದು, ಯಾವುದೇ ಕಾರಣಕ್ಕೆ ಚೀನಾ ಜೊತೆಗೆ ಮಾತುಕತೆಯಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Recommended Video

ಪೋಷಕರು ಇಂತ ಸಮಯದಲ್ಲಿ ಮಕ್ಕಳ ಕಡೆ ಗಮನ ಹರಿಸಬೇಕು | oneindia Kannada

ಚೀನಾ ಮತ್ತು ಅಮೆರಿಕಾದ ನಡುವೆ ಬಿಕ್ಕಟ್ಟು ತಲೆದೂರಿದ್ದು ಇಂಥ ಸಂದರ್ಭದಲ್ಲಿ ಎರಡನೇ ಹಂತದ ವಾಣಿಜ್ಯ ಒಪ್ಪಂದದ ಕುರಿತು ಚೀನಾ ಜೊತೆಗೆ ಚರ್ಚಿಸುವ ಆಸಕ್ತಿಯಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಸಿಬಿಎಸ್ ನ್ಯೂಸ್ ಸಂದರ್ಶನದಲ್ಲಿ "ನಾನು ಚೀನಾದ ಜೊತೆಗೆ ಚರ್ಚಿಸುವಲ್ಲಿ ಆಸಕ್ತಿ ಹೊಂದಿಲ್ಲ" ಎಂದು ಟ್ರಂಪ್ ತಿಳಿಸಿದ್ದಾರೆ.

ಚೀನಾದಿಂದ ಅಮೆರಿಕಾಕ್ಕೆ ಕಾದಿದೆ ಬಹುದೊಡ್ಡ ಗಂಡಾಂತರ: ಎಫ್‌ಬಿಐಚೀನಾದಿಂದ ಅಮೆರಿಕಾಕ್ಕೆ ಕಾದಿದೆ ಬಹುದೊಡ್ಡ ಗಂಡಾಂತರ: ಎಫ್‌ಬಿಐ

ಚೀನಾದ ಜೊತೆಗೆ ನಾವು ಉತ್ತಮ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲಿದ್ದೆವು. ಇನ್ನೇನು ಇಷ್ಟರಲ್ಲೇ ಒಪ್ಪಂದಕ್ಕೆ ಅಂಕಿತ ಬೀಳಬೇಕು ಎನ್ನುವಷ್ಟರಲ್ಲೇ ಚೀನಾ ನಮ್ಮ ವಿರುದ್ಧವೇ ತಿರುಗಿ ಬೀಳುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

2 Phase Of Trade Deal: US President Donald Trump Not Interested To Talk With China

ಜನವರಿಯಲ್ಲಿ ಮೊದಲ ಹಂತದ ಒಪ್ಪಂದ:

ಅಮೆರಿಕಾ ಮತ್ತು ಚೀನಾ ನಡುವೆ ಮೊದಲ ಹಂತದ ವಾಣಿಜ್ಯ ಒಪ್ಪಂದಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕಳೆದ ಜನವರಿಯಲ್ಲೇ ಅಂಕಿತ ಹಾಕಿದ್ದರು. ಉಭಯ ರಾಷ್ಟ್ರಗಳ ನಡುವೆ ಮೊದಲ ಹಂತದ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆದಿದ್ದು, ಎರಡನೇ ಹಂತದ ವಾಣಿಜ್ಯ ಒಪ್ಪಂದ ಮತ್ತು 3ನೇ ಹಂತದಲ್ಲೇ ಈ ಒಪ್ಪಂದವನ್ನು ಮುಂದುವರಿಸುವ ನಿಟ್ಟಿನಲ್ಲಿ ಚರ್ಚಿಸಲಾಗಿತ್ತು.

ವಿಶ್ವದ ಎರಡು ರಾಷ್ಟ್ರಗಳ ಆರ್ಥಿಕತೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಯಾವುದೇ ಸಮಯನಿಗದಿ ಎಂದು ಇರುವುದಿಲ್ಲ. 2ನೇ ಹಂತದ ವಾಣಿಜ್ಯ ಒಪ್ಪಂದದ ಕುರಿತು ಸಮಾಲೋಚನೆ ನಡೆಸಬೇಕು ಎನ್ನುವಷ್ಟರಲ್ಲೇ ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ದೇಶವನ್ನು ಹೊಕ್ಕಿತು.

ಕಳೆದ 2019ರಲ್ಲಿ ಅಮೆರಿಕಾ ಚೀನಾ ನಡುವೆ 308 ಬಿಲಿಯನ್ ಡಾಲರ್ ವ್ಯವಹಾರ ನಡೆದಿದೆ. ಸರಕು ಸೇವೆಗಳ ಕೊರತೆಯಿಂದಾಗಿ ಅಮೆರಿಕಾ ರಫ್ತು ಪ್ರಮಾಣಕ್ಕಿಂತ ಚೀನಾದಿಂದ ಹೆಚ್ಚಾಗಿ ಆಮದು ಮಾಡಿಕೊಂಡಿತ್ತು ಎಂದು ತಿಳಿದು ಬಂದಿದೆ.

English summary
2 Phase Of Trade Deal: US President Donald Trump Not Interested To Talk With China. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X