ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಗುಂಡಿನ ದಾಳಿ, ಇಬ್ಬರು ಸಾವು

Posted By:
Subscribe to Oneindia Kannada

ಕ್ಯಾಲಿಫೋರ್ನಿಯಾ, ಡಿಸೆಂಬರ್ 30 : ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಇಲ್ಲಿನ ವಾಣಿಜ್ಯ ಕಟ್ಟಡವೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಅಮೆರಿಕ: ಭಾರತೀಯ ಕುಟುಂಬದ ಮೇಲೆ ಗುಂಡಿನ ದಾಳಿ, ಒಬ್ಬ ಸಾವು

ಸ್ಥಳೀಯ ಕಾಲಮಾನ 2:25ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ಲಾಂಗ್ ಬೀಚ್ ಪೊಲೀಸರು ತಿಳಿಸಿದ್ದಾರೆ. ದಾಳಿ ನಡೆದ ಕಟ್ಟಡದಲ್ಲಿ ಹಲವು ಕಾನೂನು ಕಚೇರಿಗಳಿದ್ದು, ಗುಂಡಿನ ದಾಳಿಯಲ್ಲಿ ಹಲವರು ಗಾಯಾಗೊಂಡಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

2 Killed In Workplace Shooting In Southern California

ಗುಂಡಿನ ದಾಳಿ ಹಿನ್ನೆಲೆಯಲ್ಲಿ ಜನ ಕಟ್ಟಡದಿಂದ ಕೂಗುತ್ತಾ ಹೊರ ಓಡಿ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರಿಗಾಗಿ ಸದ್ಯ ಕಟ್ಟಡವನ್ನು ಪೊಲೀಸರು ಸುತ್ತುವರಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಡಿಸೆಂಬರ್ 25ರಂದು ಅಮೆರಿಕದ ಚಿಕಾಗೊ ಸಮೀಪದ ಡೆಲ್ಟನ್ ನಗರದಲ್ಲಿ ಭಾರತೀಯ ಮೂಲದ ಕುಟುಂಬವೊಂದರ ಮೇಲೆ ದರೋಡೆಕೋರರು ಗುಂಡಿನ ದಾಳಿ ನಡೆಸಿ, 19 ವರ್ಷದ ಭಾರತೀಯ ಮೂಲದ ಯುವಕನನ್ನು ಬಲಿ ಪಡೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two people, including the shooter, have died in Southern California in what appears to be a case of workplace violence, Long Beach police said, according to a report by the Associated Press. The incident reported at around 2:25 PM (local time), is now over.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ