ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲಾಕ್ ಹೋಲ್ ವಿಸ್ಮಯ ಚಿತ್ರಕ್ಕೆ 3 ಮಿಲಿಯನ್ ಡಾಲರ್ ಪ್ರಶಸ್ತಿ!

|
Google Oneindia Kannada News

ಬ್ರಹ್ಮಾಂಡದ ವಿಸ್ಮಯ ಎಂದೇ ಕರೆಸಿಕೊಳ್ಳುವ ಕಪ್ಪುರಂಧ್ರದ ಮೊದಲ ಚಿತ್ರವನ್ನು ಅನಾವರಣಗೊಳಿಸಿದ ಖಗೋಳಶಾಸ್ತ್ರಜ್ಞರ ತಂಡಕ್ಕೆ ವೈಜ್ಞಾನಿಕ ಸಂಶೋಧನೆಗೆ ನೀಡಲಾಗುವ "ದಿ ಬ್ರೇಕ್ ತ್ರೂ ಪ್ರಶಸ್ತಿ" ಲಭ್ಯವಾಗಿದೆ.

ಕಳೆದ ಏಪ್ರಿಲ್ ನಲ್ಲಿ ಈವೆಂಟ್ ಹಾರಿಜಾನ್ ಟೆಲಿಸ್ಕೋಪ್ ನ 347 ಜನರ ತಂಡ ಮೆಸ್ಸಿಯರ್ 87 ಗ್ಯಾಲಾಕ್ಸಿಯ ಮಧ್ಯ ಭಾಗದಲ್ಲಿರುವ ಕಪ್ಪು ರಂಧ್ರದ ಚಿತ್ರವನ್ನು ಅನಾವರಣಗೊಳಿಸಿತ್ತು. ಈ ಮೂಲಕ 18 ನೇ ಶತಮಾನದಿಂದಲೂ ಕುತೂಹಲದ ಕೇಂದ್ರಬಿಂದುವಾಗಿದ್ದ ಕಪ್ಪುರಂಧ್ರದ ಬಗೆಗೆ ಮತ್ತಷ್ಟು ಸಂಶೋಧನೆ ನಡೆಸಲು ವಿಜ್ಞಾನಿಗಳಿಗೆ ಸ್ಪೂರ್ತಿ ನೀಡಿತ್ತು.

ಬ್ರಹ್ಮಾಂಡದ ವಿಸ್ಮಯ 'ಕಪ್ಪು ರಂಧ್ರ' ಎಂದರೇನು? ಅದರ ವಿಶೇಷತೆಯೇನು?ಬ್ರಹ್ಮಾಂಡದ ವಿಸ್ಮಯ 'ಕಪ್ಪು ರಂಧ್ರ' ಎಂದರೇನು? ಅದರ ವಿಶೇಷತೆಯೇನು?

ಈವೆಂಟ್ ಹಾರಿಜಾನ್ ಟೆಲಿಸ್ಕೋಪ್ ಮೂಲಕ ಈ ಚಿತ್ರವನ್ನು ತೆಗೆದ ಕಾರಣ ಈ ತಂಡಕ್ಕೆ 3 ಮಿಲಿಯನ್ ಡಾಲರ್ (21,49,36,500 ರೂ.) ನಗದು ಮೊತ್ತದ ಪ್ರಶಸ್ತಿಯನ್ನು ನೀಡಲಾಗಿದೆ.

1st Image Of Black Hole Wins 3 Million Dollar Worth Prize

ಖಗೋಳದ ಅಚ್ಚರಿಗಳಲ್ಲಿ ಅತ್ಯಂತ ಪ್ರಮುಖ ಎನ್ನಿಸಿರುವ ಕಪ್ಪು ರಂಧ್ರದ ಅಸ್ತಿತ್ವದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಪ್ರಖ್ಯಾತ ವಿಜ್ಞಾನಿ ಸ್ಟಿಫನ್ ಹಾಕಿಂಗ್ಸ್ ಅವರೂ ಕಪ್ಪು ರಂಧ್ರ ಸಿದ್ಧಾಂತಕ್ಕೆ ಆಕ್ಷೇಪ ಎತ್ತಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಬೃಹತ್ ನಕ್ಷತ್ರವೊಂದರ ಮರಣದಿಂದಾಗಿ ರೂಪುಗೊಂಡಿದೆ ಎನ್ನಲಾಗುವ ಕಪ್ಪುರಂಧ್ರ ಕಲ್ಪನೆಗೂ ಮೀರಿದ ಗುರುತ್ವ ಶಕ್ತಿ, ಮತ್ತು ಆ ಕಾರಣದಿಂದಲೇ ಗಾಢಾಂಧಕಾರವನ್ನೂ ಹೊಂದಿರುವ ವಿಸ್ತಾರ ಪ್ರದೇಶ. ಏಪ್ರಿಲ್ ತಿಂಗಳಿನಲ್ಲಿ ಸೆರೆ ಸಿಕ್ಕ ಈ ಕಪ್ಪುರಂಧ್ರಕ್ಕೆ ವಿಜ್ಞಾನಿಗಳು ಪೊವೇಹಿ ಎಂದು ನಾಮಕರಣ ಮಾಡಿದ್ದರು.

ಮೊದಲ ಕಪ್ಪು ರಂಧ್ರಕ್ಕೆ 'ಪೊವೇಹಿ' ಎಂದು ನಾಮಕರಣಮೊದಲ ಕಪ್ಪು ರಂಧ್ರಕ್ಕೆ 'ಪೊವೇಹಿ' ಎಂದು ನಾಮಕರಣ

ಭೂಮಿಯ ಹಲವೆಡೆ ವೀಕ್ಷಣಾಲಯಗಳನ್ನು ನಿರ್ಮಿಸಿ, ಅದರ ಸಂಪರ್ಕಕ್ಕೆ ಸಿಗುವಂಥ ರೆಡಿಯೋ ಡಿಶ್ ಗಳನ್ನು ನಿರ್ಮಿಸಿ, ಆ ಮೂಲಕ ಬ್ಲಾಕ್ ಹೋಲ್ ಚಿತ್ರವನ್ನು ಪಡೆಯಲಾಗಿತ್ತು. ಇದುವರೆಗೆ ಕಲ್ಪನೆಗಷ್ಟೇ ಸಿಕ್ಕಿ, ಅದರ ಅಸ್ತಿತ್ವದ ಸಾಧ್ಯತೆಯ ಬಗ್ಗೆಯೇ ಅನುಮಾನ ಹುಟ್ಟಿಸಿದ್ದ ಕಪ್ಪು ರಂಧ್ರದ ಇರುವು ಸತ್ಯ ಎಂಬುದನ್ನು ಈ ಚಿತ್ರದ ಮೂಲಕ ತಂಡ ಸಾಬೀತುಪಡಿಸಿತ್ತು.

English summary
vent Horizon Telescope wins 3 million dollar worth The Breakthrough Prize for 1st Black Hole image
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X