ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಬೆನ್ನಿಗೆ ನಿಂತ ಗೆಳೆಯ, ರಷ್ಯಾದಿಂದ ಭಾರತಕ್ಕೆ ಭರಪೂರ ವ್ಯಾಕ್ಸಿನ್!

|
Google Oneindia Kannada News

ಭಾರತ-ರಷ್ಯಾ ಸಂಬಂಧವನ್ನ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಏಕೆಂದರೆ ಅರ್ಧ ಶತಮಾನದಲ್ಲಿ ಭಾರತ-ರಷ್ಯಾದ ಸಂಬಂಧ ಗಾಢವಾಗಿ ಬೆಳೆದಿದೆ. ಇದೀಗ ಆ ಸಂಬಂಧಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ಭಾರತ ಕೊರೊನಾ ಸಂಕಷ್ಟ ಎದುರಿಸುವಾಗ ಭಾರತದ ಬಹುಕಾಲದ ಗೆಳೆಯ ರಷ್ಯಾ, ಭಾರತದ ಬೆನ್ನಿಗೆ ನಿಂತುಕೊಂಡಿದೆ. ಕಡಿಮೆ ಬೆಲೆಯಲ್ಲಿ ಭಾರತಕ್ಕೆ ಲಸಿಕೆ ಪೂರೈಸಲು ರಷ್ಯಾ ಮುಂದಾಗಿದೆ.

ರಷ್ಯಾದಿಂದ ಭಾರತಕ್ಕೆ ಮೊದಲ ಬ್ಯಾಚ್‌ನಲ್ಲಿ 'ಸ್ಪುಟಿನ್-ವಿ' ಲಸಿಕೆ ಮೇ 1ರಂದು ಆಗಮಿಸಲಿದೆ. ಅಷ್ಟೇ ಅಲ್ಲದೆ ಸುಮಾರು 850 ಮಿಲಿಯನ್ ಡೋಸ್‌ನ ಸ್ಪುಟಿನ್-ವಿ ವ್ಯಾಕ್ಸಿನ್ ಭಾರತದಲ್ಲೇ ಉತ್ಪಾದನೆ ಆಗಲಿದ್ದು, ಇದಕ್ಕೆ ರಷ್ಯಾದ ಒಪ್ಪಿಗೆಯೂ ಸಿಕ್ಕಿದೆ. ಭಾರತದ ಹಲವು ಕಂಪನಿಗಳ ಸಾರಥ್ಯದಲ್ಲಿ ಸ್ಪುಟಿನ್-ವಿ ವ್ಯಾಕ್ಸಿನ್ ಭಾರತದಲ್ಲಿ ಉತ್ಪಾದನೆ ಆಗಲಿದೆ.

ಕೋವಿಡ್ ಪರಿಸ್ಥಿತಿ ಬಗ್ಗೆ ಮೋದಿ- ಪುಟಿನ್ ಸಮಾಲೋಚನೆ ಕೋವಿಡ್ ಪರಿಸ್ಥಿತಿ ಬಗ್ಗೆ ಮೋದಿ- ಪುಟಿನ್ ಸಮಾಲೋಚನೆ

ಈ ಹಿಂದೆ ರಷ್ಯಾ ಭಾರತದ ಬೆಂಬಲ ಬಯಸಿತ್ತು, ಅಲ್ದೆ ರಷ್ಯಾದ ಕೊರೊನಾ ಲಸಿಕೆ ಸ್ಪುಟಿನ್-ವಿ ಉತ್ಪಾದನೆಗೆ ಬೆಂಬಲ ನೀಡಿ ಎಂದು ಮನವಿ ಮಾಡಿತ್ತು. ಇದೀಗ ರಷ್ಯಾದ ಮನವಿಗೆ ಭಾರತ ಸ್ಪಂದಿಸಿದ್ದು, ಭಾರತದಲ್ಲೇ ಕೋಟಿ, ಕೋಟಿ ಡೋಸ್ 'ಸ್ಪುಟಿನ್-ವಿ' ಲಸಿಕೆ ಉತ್ಪಾದನೆ ಆಗಲಿದೆ.

ಜಗತ್ತಿನಾದ್ಯಂತ ಭಾರತಕ್ಕೆ ಸಹಾಯ

ಜಗತ್ತಿನಾದ್ಯಂತ ಭಾರತಕ್ಕೆ ಸಹಾಯ

ಜಗತ್ತಿನ ಪ್ರಮುಖ ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತಿವೆ. ಈಗಾಗಲೇ ಯುರೋಪ್‌ ರಾಷ್ಟ್ರಗಳು, ಅಮೆರಿಕದ ಸಹಾಯವೂ ಭಾರತಕ್ಕೆ ಸಿಕ್ಕಿದೆ. ಕೆನಡಾ ಕೂಡ ಭಾರತಕ್ಕೆ ಸುಮಾರು 7500 ಕೋಟಿ ರೂಪಾಯಿ ಸಹಾಯ ಧನ ನೀಡಲು ಮುಂದಾಗಿದೆ. ಇವರನ್ನೆಲ್ಲಾ ಹೊರತುಪಡಿಸಿ ತೈವಾನ್, ಆಸ್ಟ್ರೇಲಿಯಾ ಕೂಡ ಭಾರತದ ಬೆನ್ನಿಗೆ ನಿಂತಿವೆ. ಈ ಹೊತ್ತಲ್ಲೇ ತನ್ನ ಕರ್ತವ್ಯ ಮರೆಯದ ಭಾರತದ ಬಹುಕಾಲದ ಗೆಳೆಯ ರಷ್ಯಾ ಭಾರತಕ್ಕೆ ಅಗತ್ಯ ಪರಿಕರಗಳ ಪೂರೈಕೆಗೆ ಮುಂದಾಗಿದೆ. ಈ ಪೈಕಿ ಮುಖ್ಯವಾಗಿ ವ್ಯಾಕ್ಸಿನ್ ಸಪ್ಲೈ ಮಾಡಲು ರಷ್ಯಾ ಸಿದ್ಧವಾಗಿದೆ.

ಜಗತ್ತಿನ ಹಲವು ರಾಷ್ಟ್ರಗಳ ನೆರವು

ಜಗತ್ತಿನ ಹಲವು ರಾಷ್ಟ್ರಗಳ ನೆರವು

ಭಾರತಕ್ಕೆ ಈಗಾಗಲೇ ಜಗತ್ತಿನ ಹಲವು ರಾಷ್ಟ್ರಗಳು ನೆರವು ನೀಡಿವೆ. ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಕೈಲಾದಷ್ಟು ಸಹಾಯ ಸಿಗುತ್ತಿದೆ. ಯುರೋಪ್ ದೇಶಗಳು, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿವೆ. ಆದ್ರೆ ಕೆನಡಾ ಈವರೆಗೆ ಯಾವುದೇ ಘೋಷಣೆ ನೀಡಿರಲಿಲ್ಲ. ಇದೀಗ ದಿಢೀರ್ 1 ಬಿಲಿಯನ್ ಅಮೆರಿಕನ್ ಡಾಲರ್ ನೆರವು ಘೋಷಿಸುವ ಮೂಲಕ ಎಲ್ಲರ ಹುಬ್ಬೇರಿಸಿದೆ. ಮುಖ್ಯವಾಗಿ ಕೆನಡಾ ಭಾರತದ ಮಿತ್ರರಾಷ್ಟ್ರ. ಹಲವು ದಶಕಗಳಿಂದ ಕೆನಡಾ ಭಾರತದ ಜೊತೆ ಸಂಬಂಧವನ್ನು ವೃದ್ಧಿಸುತ್ತಲೇ ಬಂದಿದೆ. ಇದೀಗ ತಾನು ಭಾರತದ ಮಿತ್ರ ಎಂಬುದನ್ನು ಸಂಕಷ್ಟದ ಸಮಯದಲ್ಲಿ ಸ್ಪಷ್ಟಪಡಿಸಿದೆ.

ಅಮೆರಿಕದಂತೆ ಭಾರತದಲ್ಲೂ ಆತಂಕ..?

ಅಮೆರಿಕದಂತೆ ಭಾರತದಲ್ಲೂ ಆತಂಕ..?

ವಿಶ್ವದ ದೊಡ್ಡಣ್ಣ ಎಂಬ ಪಟ್ಟ ಕಟ್ಟಿಕೊಂಡಿದ್ದ ಅಮೆರಿಕ ಕೊರೊನಾ ಅಲೆಯಲ್ಲಿ ನಲುಗಿ ಹೋಗಿದೆ. ಆದರೆ ಈಗಿನ ಸ್ಥಿತಿಗತಿ ನೋಡಿದರೆ ಭಾರತದಲ್ಲೂ ಅಮೆರಿಕ ರೀತಿಯ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹೀಗಾಗಿ ಜಗತ್ತಿನಾದ್ಯಂತ ಭಾರತದ ಕೊರೊನಾ ಪರಿಸ್ಥಿತಿ ಕಂಡು ಕಳವಳ ವ್ಯಕ್ತವಾಗಿದೆ. ಈಗಾಗಲೇ ಚೀನಾ ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ. ಇದೇ ರೀತಿ ವಿಶ್ವದ ಅನೇಕ ರಾಷ್ಟ್ರಗಳು ಭಾರತಕ್ಕೆ ಸಹಾಯ ಹಸ್ತ ಚಾಚಲು ಮುಂದಾಗಿವೆ. ಆದರೆ ಸದ್ಯಕ್ಕೆ ಕೊರೊನಾ ಕಂಟ್ರೋಲ್‌ಗೆ ಸಿಗುವುದು ಅನುಮಾನವಾಗಿದೆ.

ನರೇಂದ್ರ ಮೋದಿ- ಪುಟಿನ್ ಸಮಾಲೋಚನೆ

ನರೇಂದ್ರ ಮೋದಿ- ಪುಟಿನ್ ಸಮಾಲೋಚನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಷ್ಯಾ ಒಕ್ಕೂಟದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ. ಉಭಯ ನಾಯಕರು ಕೋವಿಡ್-19 ಸಾಂಕ್ರಾಮಿಕ ಸ್ಥಿತಿಗತಿಯ ಬೆಳವಣಿಗೆಯ ಕುರಿತು ಚರ್ಚೆ ನಡೆಸಿದರು ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದನೆ ನೀಡಿರುವುದಕ್ಕೆ ಅಧ್ಯಕ್ಷ ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದರು. ಉಭಯ ನಾಯಕರು ಭಾರತದಲ್ಲಿ ಉತ್ಪಾದನೆಯಾಗುವ ರಷ್ಯಾದ ಲಸಿಕೆಯನ್ನು ಭಾರತ, ರಷ್ಯಾ ಮತ್ತು ತೃತೀಯ ರಾಷ್ಟ್ರಗಳಿಗೆ ಬಳಸಲಾಗುವುದು ಎಂದು ಹೇಳಿದರು.

English summary
1st batch of Russian ‘Sputnik-V’ Corona vaccine will arrive India on May 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X