ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಜೀರಿಯಾದಲ್ಲಿ ಚಿನ್ನದ ಗಣಿ ಕುಸಿತ: 18 ಜನ ದಾರುಣ ಸಾವು

|
Google Oneindia Kannada News

ನೈಜೀರಿಯಾ ನವೆಂಬರ್ 9: ನೈಜೀರಿಯಾದ ಗಡಿಯ ಸಮೀಪ ದಕ್ಷಿಣ ನೈಜರ್‌ನಲ್ಲಿ ಗೋಲ್ಡ್‌ಮೈನ್ ಕುಸಿದು 18 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮೇಯರ್ ಸೋಮವಾರ ತಿಳಿಸಿದ್ದಾರೆ. "ತಾತ್ಕಾಲಿಕ ಸಾವಿನ ಸಂಖ್ಯೆ 18 ಜನರು, ಅವರನ್ನು ನಾವು ಇಂದು ಬೆಳಿಗ್ಗೆ ಸಮಾಧಿ ಮಾಡಿದ್ದೇವೆ" ಎಂದು ಡಾನ್-ಇಸ್ಸಾ ಜಿಲ್ಲೆಯ ಮೇಯರ್ ಆಡಮೌ ಗುರೌ ಭಾನುವಾರದ ದುರಂತದ ಬಗ್ಗೆ AFP ಗೆ ತಿಳಿಸಿದರು.

ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ನೈಜೀರಿಯನ್ ಪ್ರಜೆಗಳೂ ಇದ್ದಾರೆ ಎಂದು ಅವರು ಹೇಳಿದರು. ಭಾನುವಾರ ಮಧ್ಯಾಹ್ನ ಗ್ಯಾರಿನ್-ಲಿಮನ್ ಗಣಿ ಸ್ಥಳದಲ್ಲಿ ಭೂ ಕುಸಿದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.

18 dead in goldmine collapse in southern Niger

"ಪಾರುಗಾಣಿಕಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ, ಹೊಂಡಗಳ ಕೆಳಭಾಗದಲ್ಲಿ ಇನ್ನೂ ದೇಹಗಳು ಸಿಕ್ಕಿಹಾಕಿಕೊಂಡಿರಬಹುದು" ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ನೈಜೀರಿಯಾದ ಗ್ಯಾರಿನ್-ಲಿಮನ್ ಗಣಿಗಳನ್ನು ಕೆಲವೇ ತಿಂಗಳುಗಳ ಹಿಂದೆ ಕಂಡುಹಿಡಿಯಲಾಯಿತು. ಸಾವಿರಾರು ಗಣಿಗಾರರು ಈ ಪ್ರದೇಶದಲ್ಲಿ ಕೆಲಸ ಮಾಡುತ್ತಾರೆ.

18 dead in goldmine collapse in southern Niger

Recommended Video

ವಿರಾಟ್ & ರವಿಶಾಸ್ತ್ರಿ ಜೋಡಿ ಕ್ರಿಕೆಟ್ ಇತಿಹಾಸದಲ್ಲಿ ಸಾಧಿಸಿದ್ದೇನು? | Oneindia Kannada

ವಿಶೇಷವಾಗಿ ಪಶ್ಚಿಮ ತಿಲ್ಲಾಬೆರಿ ಪ್ರದೇಶದಲ್ಲಿ ದಶಕಗಳಿಂದ ನೈಜರ್‌ನ ಗೋಲ್ಡ್‌ಮೈನ್‌ಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈಗ ಸಂಭವಿಸಿದ ದುರಂತದ ಸ್ಥಳ ಉತ್ತರದಲ್ಲಿ ಲಿಬಿಯಾ ಗಡಿಯ ಸಮೀಪದಲ್ಲಿದೆ. ಅಧಿಕಾರಿಗಳ ಪ್ರಕಾರ, ಮಣ್ಣಿನ ಅಸ್ಥಿರತೆ ಮತ್ತು ಗಣಿಗಾರರು ಬಳಸುತ್ತಿರುವ ಹಳತಾದ ವಿಧಾನಗಳಿಂದಾಗಿ ಈ ಸೈಟ್‌ಗಳಲ್ಲಿ ಅಪಘಾತಗಳು ಆಗಾಗ್ಗೆ ಸಂಭವಿಸುತ್ತವೆ. ಹೀಗಾಗಿ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತದೆ.

English summary
At least 18 people died when an artisanal goldmine collapsed in southern Niger near the border with Nigeria, the local mayor said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X