ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರ್ಮಾ ಚಂಡಮಾರುತಕ್ಕೆ ಸಿಲುಕಿದ್ದ 170 ಭಾರತೀಯರ ರಕ್ಷಣೆ

By Sachhidananda Acharya
|
Google Oneindia Kannada News

ಕುರಾಕೊವೊ, ಸೆಪ್ಟೆಂಬರ್ 13: ಭಯಂಕರ ಇರ್ಮಾ ಚಂಡಮಾರುತಕ್ಕೆ ಸಿಂಟ್ ಮಾರ್ಟಿನ್ ದ್ವೀಪದಲ್ಲಿ ಸಿಲುಕಿದ್ದ 170 ಭಾರತೀಯರನ್ನು ರಕ್ಷಿಸಲಾಗಿದೆ. ವಿಶೇಷ ವಿಮಾನಗಳ ಮೂಲಕ ಇವರನ್ನು ಕೆರಿಬಿಯನ್ ದ್ವೀಪ ಕುರಾಕೊವೊಗೆ ಕರೆತರಲಾಗಿದೆ.

ಚಂಡಮಾರುತದಿಂದ ಪಿತೃಪಕ್ಷದವರೆಗೆ ಚಿತ್ತ ಹಿಡಿದಿಟ್ಟ ಚಿತ್ರಗಳು...ಚಂಡಮಾರುತದಿಂದ ಪಿತೃಪಕ್ಷದವರೆಗೆ ಚಿತ್ತ ಹಿಡಿದಿಟ್ಟ ಚಿತ್ರಗಳು...

ಈ ಸಂತಸದ ಸುದ್ದಿಯನ್ನು ವೆನಿಜುವೆಲಾದ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿ ಹಂಚಿಕೊಂಡಿದೆ.
ಮೊದಲ ತಂಡದಲ್ಲಿ 110 ಜನರನ್ನು ರಕ್ಷಣೆ ಮಾಡಲಾಗಿತ್ತು. ಇದೀಗ ಮತ್ತೊಂದು ತಂಡದಲ್ಲಿ 60 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆತರಲಾಗಿದ್ದು ಒಟ್ಟು 170 ಭಾರತೀಯರನ್ನು ಇರ್ಮಾ ಚಂಡಮಾರುತದಿಂದ ರಕ್ಷಿಸಲಾಗಿದೆ.

ಫ್ಲೋರಿಡಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ 'ಇರ್ಮಾ'ಫ್ಲೋರಿಡಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ 'ಇರ್ಮಾ'

170 Indians evacuated from hurricane-hit Sint Maarten

ಭಾರತೀಯರ ಜತೆ ಇತರರ ರಕ್ಷಣೆ
ಭಾರತೀಯ ರಾಯಭಾರ ಕಚೇರಿ ವಿಶೇಷ ವಿಮಾನದಲ್ಲಿ ಭಾರತೀಯರನ್ನು ಮಾತ್ರ ರಕ್ಷಣೆ ಮಾಡಿಲ್ಲ. ಭಾರತೀಯರ ಜತೆ ಎರಡನೇ ತಂಡದಲ್ಲಿ ಬೇರೆ ದೇಶದ 30 ಪ್ರಯಾಣಿಕರನ್ನೂ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದೆ.

ಸಿಂಟ್ ಮಾರ್ಟಿನ್ ದ್ವೀಪದ ಆಡಳಿತವನ್ನು ಫ್ರಾನ್ಸ್ ಮತ್ತು ನೆದರ್ಲೆಂಡ್ ಜಂಟಿಯಾಗಿ ನೋಡಿಕೊಳ್ಳುತ್ತಿವೆ. ಇದು ಇರ್ಮಾ ಚಂಡಮಾರುತದ ದಾರಿಗೆ ಅಡ್ಡಲಾಗಿದ್ದು, ಭಾರೀ ಹಾನಿಗೆ ಒಳಗಾಗಿತ್ತು. ಇಲ್ಲಿನ ನಾಗರಿಕರು ನಿರಾಶ್ರಿತರಾಗಿ ಬೀದಿಗೆ ಬಂದಿದ್ದರು.

English summary
As many as 170 Indians have been evacuated from the hurricane Irma-hit Sint Maarten and brought to the Caribbean island of Curacao by special flights chartered by the Indian government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X