ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಗೆ ಚೀನಾ ಬಳಿಕ ನಲುಗಿದ ಮತ್ತೊಂದು ದೇಶ

|
Google Oneindia Kannada News

ಸಿಯೋಲ್, ಫೆಬ್ರವರಿ.24: ಜಾಗತಿಕ ಮಟ್ಟದಲ್ಲಿ ಹಾವಳಿ ಎಬ್ಬಿಸಿರುವ ಕೊರೊನಾ ವೈರಸ್ ಈಗ ಚೀನಾದ ಮಟ್ಟಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ವಿಶ್ವದ 33 ರಾಷ್ಟ್ರಗಳಲ್ಲಿ ಮಾರಕ ಸೋಂಕು ಹರಡಿದ್ದು, ಚೀನಾವನ್ನು ಹೊರತುಪಡಿಸಿದರೆ, ಅತಿಹೆಚ್ಚು ಸೋಂಕಿತ ಪ್ರಕರಣಗಳು ದಕ್ಷಿಣ ಕೊರಿಯಾದಲ್ಲಿ ಪತ್ತೆಯಾಗಿವೆ.

Recommended Video

Corona infected cases are maximum in this country after China | Oneindia Kannada

ದಕ್ಷಿಣ ಕೊರಿಯಾದಲ್ಲಿ ಒಂದೇ ದಿನ 161 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇದುವರೆಗೂ ದಕ್ಷಿಣ ಕೊರಿಯಾದಲ್ಲಿ ಏಳು ಮಂದಿ ಮಾರಕ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇನ್ನು, ಸೋಂಕಿತರ ಸಂಖ್ಯೆ ದೇಶದಲ್ಲಿ 763ಕ್ಕೆ ಏರಿಕೆಯಾಗಿದೆ.

ಕೊರೊನಾ ವೈರಸ್: ಚೀನಾ ಪಾಲಿಗೆ ಅತಿದೊಡ್ಡ ಆರೋಗ್ಯ ತುರ್ತು ಪರಿಸ್ಥಿತಿಕೊರೊನಾ ವೈರಸ್: ಚೀನಾ ಪಾಲಿಗೆ ಅತಿದೊಡ್ಡ ಆರೋಗ್ಯ ತುರ್ತು ಪರಿಸ್ಥಿತಿ

763 ಸೋಂಕಿತರ ಪೈಕಿ 11 ಮಂದಿ ದಕ್ಷಿಣ ಕೊರಿಯಾದ ಸೇನಾಪಡೆಗೆ ಸೇರಿದ ಸಿಬ್ಬಂದಿ ಎಂದು ರಕ್ಷಣಾ ಸಚಿವಾಲಯವು ಸ್ಪಷ್ಟಪಡಿಸಿದೆ. ಎಂಟು ಮಂದಿ ಭೂ ಸೇನೆ, ಒಬ್ಬರು ವಾಯು ಸೇನೆ ಮತ್ತು ಇನ್ನೊಬ್ಬರು ನೌಕಾಸೇನೆಗೆ ಸೇರಿದ ಸಿಬ್ಬಂದಿ ಎಂದು ತಿಳಿದು ಬಂದಿದೆ.

161 Coronavirus Infected Cases In South Korea, 7 Death Till Monday

ದಕ್ಷಿಣ ಕೊರಿಯಾದಲ್ಲಿ ಶಾಲಾ ಆರಂಭಿಕ ದಿನ ಮುಂದೂಡಿಕೆ:

ದಕ್ಷಿಣ ಕೊರಿಯಾದಲ್ಲಿ ಮಾರ್ಚ್.02 ರಿಂದ ಶೈಕ್ಷಣಿಕ ವರ್ಷದ ಆರಂಭವಾಗುತ್ತದೆ. ಅಂದಿನಿಂದಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಂಸ್ಥೆಗಳು ಕಾರ್ಯಾರಂಭ ಮಾಡುತ್ತವೆ. ಆದರೆ, ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಕ್ಕಳಿಗೆ ಸೋಂಕು ಹರಡದಂತೆ ತಡೆಗಟ್ಟಲು ಒಂದು ವಾರಗಳ ಕಾಲ ಶಾಲೆ ಆರಂಭಿಸದಂತೆ ದಕ್ಷಿಣ ಕೊರಿಯಾದ ಶಿಕ್ಷಣ ಸಚಿವಾಲಯವು ಆದೇಶಿಸಿದೆ. ಮಾರ್ಚ್.02ರ ಬದಲು ಮಾರ್ಚ್.09ರಿಂದ ಶಾಲೆಗಳನ್ನು ಆರಂಭಿಸುವಂತೆ ಸೂಚನೆ ನೀಡಲಾಗಿದೆ.

English summary
161 Coronavirus Infected Cases A Single Day In South Korea, 7 Death Till Monday. Nationwide Infected Cases 763.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X