ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ಗಂಟೆಗಳಲ್ಲಿ ಕೊರೊನಾ ವೈರಸ್ ಗೆ 15 ಬಲಿ; ಇದು ಚೀನಾ ಕಥೆಯಲ್ಲ

|
Google Oneindia Kannada News

ತೆಹ್ರಾನ್, ಮಾರ್ಚ್.05: ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಗೆ ಇಡೀ ವಿಶ್ವವೇ ನಲುಗಿ ಹೋಗಿದೆ. ಕ್ಷಣಕ್ಷಣಕ್ಕೂ ಮಾರಕ ಸೋಂಕಿಗೆ ಸಿಲುಕಿ ಪ್ರಾಣ ಬಿಡುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಚೀನಾದಲ್ಲಿ ಕ್ಷಿಪ್ರಗತಿಯಲ್ಲಿ ಸೋಂಕು ಹರಡುವಿಕೆಗೆ ಕೊಂಚ ಕಡಿವಾಣ ಹಾಕಿದರೂ, ಇತರೆ ರಾಷ್ಟ್ರಗಳಲ್ಲಿ ಡೆಡ್ಲಿ ವೈರಸ್ ಗಳ ಅಮಾಯಕರು ಬಲಿಯಾಗುತ್ತಿದ್ದಾರೆ.

ಚೀನಾ ಹೊರತುಪಡಿಸಿದರೆ ಕೊರೊನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆಯಲ್ಲಿ ಇರಾನ್ ಇದೀಗ ಎರಡನೇ ಸ್ಥಾನದಲ್ಲಿದೆ. ಕಳೆದ 24 ಗಂಟೆಗಳಲ್ಲೇ 15 ಮಂದಿ ಮಾರಕ ಸೋಂಕಿನಿಂದ ಬಳಲಿ ಪ್ರಾಣ ಬಿಟ್ಟಿರುವುದರ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?

ಒಂದೇ ದಿನದಲ್ಲಿ 15 ಮಂದಿ ಕೊರೊನಾ ವೈರಸ್ ಗೆ ಮೃತಪಟ್ಟಿದ್ದರಿಂದ ಸಾವಿನ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಇನ್ನು, ಇರಾನ್ ಒಂದರಲ್ಲೇ 2,922 ಮಂದಿ ಕೊರೊನಾ ವೈರಸ್ ಸೋಂಕಿತರಿದ್ದಾರೆ ಎಂದು ತಿಳಿದು ಬಂದಿದೆ.

15 Peoples Death In Past 24 Hour From Coronavirus In Iran

ಸೋಂಕಿತರ ಸಂಖ್ಯೆಯಲ್ಲಿ ದಕ್ಷಿಣ ಕೊರಿಯಾಗೆ 2ನೇ ಸ್ಥಾನ:

ಚೀನಾದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ ಡ್ರ್ಯಾಗನ್ ದೇಶದಲ್ಲಿ ಕೊರೊನಾ ವೈರಸ್ ಗೆ 3013 ಮಂದಿ ಪ್ರಾಣ ಬಿಟ್ಟಿದ್ದಾರೆ. 80,430 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಪಟ್ಟಿಯಲ್ಲಿ ದಕ್ಷಿಣ ಕೊರಿಯಾ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಕೊರಿಯಾದಲ್ಲಿ ಮೃತರ ಸಂಖ್ಯೆ 42 ಆಗಿದ್ದರೂ ಕೂಡಾ ಸೋಂಕಿತರ ಸಂಖ್ಯೆ 5,766 ಆಗಿದೆ. ಇನ್ನು, ಇರಾನ್ ನಲ್ಲಿ 3,513 ಮಂದಿ ಸೋಂಕಿತರಿದ್ದು, 107 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

English summary
15 Peoples Death In Past 24 Hour From Coronavirus In Iran. Now More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X