ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ನಲ್ಲಿ ಸೇನಾ ವಿಮಾನ ಪತನ; 16ರಲ್ಲಿ 15 ಮಂದಿ ಸಾವು

|
Google Oneindia Kannada News

ಬೋಯಿಂಗ್ 707 ಸೇನಾ ಸರಕು ವಿಮಾನವು ಸೋಮವಾರ ಹವಾಮಾನ ವೈಪರೀತ್ಯದಿಂದ ಇರಾನ್ ರಾಜಧಾನಿಯಲ್ಲಿ ಅಪಘಾತಕ್ಕೆ ಈಡಾಗಿ, ವಿಮಾನದಲ್ಲಿ ಇದ್ದ 16ರಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸೇನೆ ಹೇಳಿದೆ. ವಿಮಾನದ ಎಂಜಿನಿಯರ್ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯ ಆ ಒಂದು ಎಚ್ಚರಿಕೆ ಆಕಾಶದಿಂದ ವಿಮಾನವನ್ನೇ ಕೆಳಗಿಳಿಸಿತುಮಹಿಳೆಯ ಆ ಒಂದು ಎಚ್ಚರಿಕೆ ಆಕಾಶದಿಂದ ವಿಮಾನವನ್ನೇ ಕೆಳಗಿಳಿಸಿತು

ಕೇಂದ್ರ ಇರಾನ್ ನ ಅಲ್ಬ್ರೋಜ್ ನ ಕರಜ್ ಬಳಿಯ ಫತ್ ವಿಮಾನ ನಿಲ್ದಾಣದ ಬಳಿಯಲ್ಲಿ ಘಟನೆ ಸಂಭವಿಸಿದೆ. ಬೋಯಿಂಗ್ 707 ವಿಮಾನವು ಕೈರ್ಗಿಸ್ತಾನದ ಬಿಶ್ಕೆಕ್ ನಿಂದ ಮಾಂಸ ಹೊತ್ತೊಯ್ಯಲಾಗುತ್ತಿತ್ತು. ಫತ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಆಗಿದೆ. ವಿಮಾನ ಎಂಜಿನಿಯರ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

15 dead as cargo plane met with accident on runway in Iran

ನೆಲಕ್ಕೆ ಇಳಿಯುವಾಗ ರನ್ ವೇ ಮೇಲೆ ಸಾಗುತ್ತಾ ಬೆಂಕಿ ಹೊತ್ತಿಕೊಂಡಿತು. ಆ ನಂತರ ರನ್ ವೇಯ ಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಸೇನೆ ಹೇಳಿದೆ. ವಿಮಾನವು ಯಾರಿಗೆ ಸೇರಿದ್ದು ಎಂಬ ಗೊಂದಲ ಇತ್ತು. ಆ ನಂತರ ಸೇನೆಯಿಂದ ಹೇಳಿಕೆ ಬಂದಿದೆ. ಈ ವಿಮಾನವು ಕೈರ್ಗಿಸ್ತಾನಕ್ಕೆ ಸೇರಿದ್ದು ಎಂದು ಅವರು ಹೇಳಿದರೆ, ಕೈರ್ಗಿಸ್ತಾನದ ಮನಸ್ ವಿಮಾನ ನಿಲ್ದಾಣದ ವಕ್ತಾರೆ ಮಾತನಾಡಿ, ವಿಮಾನವು ಇರಾನ್ ನ ಪಯಂ ಏರ್ ಗೆ ಸೇರಿದ್ದು ಎಂದಿದ್ದಾರೆ.

English summary
A Boeing 707 military cargo plane crashed in bad weather on Monday west of the Iranian capital, killing 15 out of the 16 people on board. A flight engineer survived and was taken to hospital, the army said in a statement carried by the semi-official Fars news agency. The plane went down near Fath airport, near Karaj in the central Iranian province of Alborz.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X