ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾ ರಕ್ಕಸ ಅಲೆಗೀಗ ಹದಿನಾಲ್ಕು ವರುಷ, ಮಾಸದು ನೆನಪಿನ ಅವಶೇಷ

|
Google Oneindia Kannada News

"ಅಲೆಯೇ, ನೀನು ಕೋಟಿ ಬಾರಿ ಬಂದು ನನ್ನ ಪಾದ ಮುಟ್ಟಿದರೂ ನಾನು ನಿನ್ನನ್ನು ಕ್ಷಮಿಸುವುದಿಲ್ಲ...

ನನ್ನ ತಂದೆ-ತಾಯಿ, ಒಡಹುಟ್ಟಿದವರನ್ನೆಲ್ಲ ನಿಷ್ಕಾರಣವಾಗಿ ನನ್ನಿಂದ ಬೇರೆ ಮಾಡಿದ ನೀನು, ಪಾದ ಮುಟ್ಟಿ ಕ್ಷಮೆ ಕೇಳಿದ ಮಾತ್ರಕ್ಕೆ ನಾನು ಕರಗುವುದಿಲ್ಲ..."

2004ರಲ್ಲಿ ಸಂಭವಿಸಿದ ರಕ್ಕಸ ಸುನಾಮಿಯಿಂದ ತನ್ನವರನ್ನೆಲ್ಲ ಕಳೆದುಕೊಂಡ ಪುಟ್ಟ ಹುಡುಗನೊಬ್ಬ ಸಮುದ್ರದ ತಟದಲ್ಲಿ ನಿಂತು ಅಲೆಯೊಂದಿಗೆ ಹೇಳುತ್ತಿದ್ದ ಮಾತು ಇದು!

ಇಂಡೋನೇಷ್ಯಾ ಸುನಾಮಿ: ಸಾವಿನ ಸಂಖ್ಯೆ 222ಕ್ಕೆ ಏರಿಕೆಇಂಡೋನೇಷ್ಯಾ ಸುನಾಮಿ: ಸಾವಿನ ಸಂಖ್ಯೆ 222ಕ್ಕೆ ಏರಿಕೆ

ಲಕ್ಷಾಂತರ ಜನರ ಪ್ರಾಣ ಕಿತ್ತುಕೊಂಡ ಭೀಕರ ಸುನಾಮಿ ಸಂಭವಿಸಿದ್ದು ಡಿ. 26, 2004 ರಂದು. ಅದಕ್ಕೂ ಮುನ್ನ 'ಸುನಾಮಿ' ಎಂಬ ಪದವೇ ಗೊತ್ತಿರಲಿಲ್ಲ. ಇಂಡೊನೇಷ್ಯಾ ಮಟ್ಟಿಗೆ ಈ 'ಡಿಸೆಂಬರ್' ತಿಂಗಳು ಕರಾಳ ಮಾಸವೇ ಇರಬೇಕು! ಮತ್ತೀಗ ಇಂಡೊನೇಷ್ಯಾ ಸುನಾಮಿ ಮತ್ತು ಭೂಕಂಪದ ಕ್ರೌರ್ಯಕ್ಕೆ ತುತ್ತಾಗಿದೆ. ಹದಿನಾಲ್ಕು ವರ್ಷದ ಹಿಂದೆ ನಡೆದ ಆ ದುರಂತವನ್ನು ಮತ್ತೆ ನೆನಪಿಸುವಂತೆ ಡಿ.22 ರಂದು ಸಂಭವಿಸಿದ ಈ ಸುನಾಮಿಯಲ್ಲಿ ಇದುವರೆಗೆ 222 ಜನ ಮೃತರಾಗಿದ್ದಾರೆ.

2004 ಡಿಸೆಂಬರ್ 26 ರಂದು ಆಗಷ್ಟೇ ಕ್ರಿಸ್ಮಸ್ ಮುಗಿಸಿ, ಹೊಸ ವರ್ಷವನ್ನು ಸ್ವಾಗತಿಸಲು ಉತ್ಸುಕರಾಗಿದ್ದ ಲಕ್ಷಾಂತರ ಜನರನ್ನು ಸುನಾಮಿ ಎಂಬ ರಕ್ಕಸ ಅಲೆ ತನ್ನೊಡಲಲ್ಲಿ ಸೇರಿಸಿಕೊಂಡಿತ್ತು. ಏನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲಿ ಸಾವಿರಾರು ಜನ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಇಂಡೊನೇಷ್ಯಾದ ಸುಮಾತ್ರಾ ದ್ವೀಪದ ಸಮುದ್ರದಾಳದಲ್ಲಿ ಕೆಲ ಕಾಲ ಭೂಮಿ ಕಂಪಿಸಿದ್ದರಿಂದ ಸಂಭವಿಸಿದ ಸುನಾಮಿ ಇಡೀ ಜಗತ್ತನ್ನೂ ಸೂತಕದ ಛಾಯೆಯಲ್ಲಿ ಮುಳುಗಿಸಿತ್ತು.

ಇಂಡೋನೇಷಿಯಾ ಸುನಾಮಿಗೆ ಅಗ್ನಿಪರ್ವತ, ಹುಣ್ಣಿಮೆ ಸೆಳೆತ ಕಾರಣ!ಇಂಡೋನೇಷಿಯಾ ಸುನಾಮಿಗೆ ಅಗ್ನಿಪರ್ವತ, ಹುಣ್ಣಿಮೆ ಸೆಳೆತ ಕಾರಣ!

ಇಂಡೋನೇಷ್ಯಾ ಮಟ್ಟಿಗೆ ಇಂಥ ದುರಂತಗಳು ಹೊಸತಲ್ಲ. 2004ರ ಸುನಾಮಿಯ ನಂತರ ಆ ನೆನಪನ್ನು ಮರೆಯುವುದಕ್ಕೂ ಅವಕಾಶ ನೀಡದಂತೆ ನಿರಂತರವಾಗಿ ಸುನಾಮಿ, ಭೂಕಂಪಗಳು ಸಂಭವಿಸಿವೆ. ಪ್ರತಿಬಾರಿಯೂ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ನೈಸರ್ಗಿಕ ವಿಕೋಪದಿಂದ ಚೇತರಿಸಿಕೊಂಡು ಬದುಕನ್ನು ಸವಿಯುವ ಉತ್ಸಾಹ ಇನ್ನೇನು ಮೊಳೆಕೆಯೊಡಯಬೇಕು, ಅಷ್ಟರಲ್ಲಿ ಮತ್ತೊಮ್ಮೆ ದುರಂತಗಳು ಸಂಭವಿಸುತ್ತವೆ. ಇಂಡೋನೇಷ್ಯಾದ ಹೆಸರೊಂದಿಗೆ ನೈಸರ್ಗಿಕ ವಿಕೋಪವೂ ಅನ್ವರ್ಥವಾದಂತೆ ಇಲ್ಲಿನ ಜನರ ಮನಸ್ಸಲ್ಲಿ ಎಂದಿಗೂ ಮಾಸದ ಭಯವನ್ನು ಜೀವಂತವಾಗಿರಿಸಿದೆ.

2004, ಡಿಸೆಂಬರ್ 26

2004, ಡಿಸೆಂಬರ್ 26

ಡಿಸೆಂಬರ್ 26, 2004 ರಂದು ಹಿಂದುಮಹಾಸಾಗರದಲ್ಲಿ ಸಂಭವಿಸಿದ ಸುನಾಮಿಯಲ್ಲಿ ಮೃತರಾದವರ ಸಂಖ್ಯೆ 167,540! ಇದು ಶತಮಾನದ ಭೀಕರ ದುರಂತವಾಗಿ ಅಚ್ಚಳಿಯದೆ ಉಳಿದಿದೆ.

ಮಾ.28, 2005 ರಲ್ಲಿ ಇಲ್ಲಿನ ನಿಯಾಸ್ ಸಿಮ್ಯುಲ್ಯು ಎಂಬಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತರಾದವರ ಸಂಖ್ಯೆ 915!

2006 ಮೇ 27

2006 ಮೇ 27

ಮೇ 27, 2006 ರಂದು ಯೋಗ್ಯಕರ್ತ ಎಂಬಲ್ಲಿ ಸಂಭವಿಸಿದ ಭೂಕಂಪದಲ್ಲಿ 5700 ಕ್ಕೂ ಹೆಚ್ಚು ಜನ ಮೃತರಾಗಿದ್ದರು.

ಜುಲೈ 17, 2006 ರಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಲ್ಲಿ 668 ಜನ ಮೃತರಾಗಿದ್ದರು.

2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದುರಂತಗಳ ಪಟ್ಟಿ 2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದುರಂತಗಳ ಪಟ್ಟಿ

ಸೆ. 30, 2009

ಸೆ. 30, 2009

ಸೆಪ್ಟೆಂಬರ್ 30, 2009 ರಂದು ಸುಮಾತ್ರಾ ದ್ವೀಪದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 1,115 ಜನ ಮೃತರಾಗಿದ್ದರು.

ಅಕ್ಟೋಬರ್ 25, 2010 ರಂದು ಸಂಭವಿಸಿದ ಭೂಕಮಪ ಮತ್ತು ಸುನಾಮಿಯಲ್ಲಿ 435 ಜನ ಮೃತರಾಗಿದ್ದರು.

ಡಿಸೆಂಬರ್ 7, 2016

ಡಿಸೆಂಬರ್ 7, 2016

ಡಿಸೆಂಬರ್ 7, 2016 ರಲ್ಲಿ ಅಸೆಹ್ ಎಂಬಲ್ಲಿ ಸಂಭವಿಸಿದ ಭೂಕಂಪದಲ್ಲಿ 104 ಜನ ಮೃತರಾಗಿದ್ದರು.

ಜುಲೈ 29, 2018 ರಲ್ಲಿ ಸಂಭವಿಸಿದ ಭೂಕಂಪದಲ್ಲಿ 556 ಜನ ಮೃತರಾಗಿದ್ದರು.

2018 ಅನ್ನು ಬೆಚ್ಚಿ ಬೀಳಿಸಿದ ಆ ನಿಗೂಢ ಪ್ರಕರಣಗಳು2018 ಅನ್ನು ಬೆಚ್ಚಿ ಬೀಳಿಸಿದ ಆ ನಿಗೂಢ ಪ್ರಕರಣಗಳು

ಸೆ.27, 2018

ಸೆ.27, 2018

ಸೆಪ್ಟೆಂಬರ್ 27, 2018 ರಲ್ಲಿ ಪಾಲುವಿನಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಲ್ಲಿ ಬರೋಬ್ಬರಿ 2,200 ಜನ ಮೃತರಾಗಿದ್ದರು.

ಇದೀಗ ಡಿ.22 ರಂದು ಸಂಭವಿಸಿದ ಸುನಾಮಿ ಮತ್ತು ಭೂಕಂಪದಲ್ಲಿ 22 ಜನ ಮೃತರಾಗಿದ್ದಾರೆ.

English summary
On 2004, December 26th Indonesia has witnessed a devastating earthquake and tsunami. This is the 14th anniversary of the tragedy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X