ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

13 ವರ್ಷದ ಬಾಲಕನಿಗೆ 10 ವರ್ಷಗಳ ಕಠಿಣ ಶಿಕ್ಷೆ

|
Google Oneindia Kannada News

13 ವರ್ಷದ ಬಾಲಕನಿಗೆ ನೈಜೀರಿಯಾದ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ನೀಡಿದೆ. ಧರ್ಮನಿಂದನೆ ಆರೋಪದ ಹಿನ್ನೆಲೆಯಲ್ಲಿ ಬಾಲಕನಿಗೆ ಈ ರೀತಿಯ ಕಠಿಣ ಶಿಕ್ಷೆ ವಿಧಿಸಿದೆ. ಬಾಲಕ ಸ್ನೇಹಿತರೊಂದಿಗೆ ವಾದ ಮಾಡುವಾಗ, ಇಸ್ಲಾಂ ಧರ್ಮದ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದ ಎನ್ನಲಾಗಿದೆ. ಬಾಲಕನೂ ಕೂಡ ಇಸ್ಲಾಂ ಧರ್ಮಕ್ಕೆ ಸೇರಿದವನಾಗಿದ್ದ. ಆದರೂ ಧರ್ಮನಿಂದನೆ ಆರೋಪದಡಿ ಬಾಲಕನನ್ನು ಸ್ಥಳೀಯ ಪೊಲೀಸರು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದರು.

ವಿಚಾರಣೆ ನಡೆಸಿದ ನೈಜೀರಿಯಾದ ಕಾನೋ ರಾಜ್ಯದ ಷರಿಯಾ ಕೋರ್ಟ್, ಆರೋಪ ಸಾಬೀತಾಗಿರುವ ಹಿನ್ನೆಲೆ 13 ವರ್ಷದ ಬಾಲಕನಿಗೆ 10 ವರ್ಷಗಳ ಕಠಿಣ ಶಿಕ್ಷೆ ನೀಡಿದೆ. ಈ ಘಟನೆ ಜಗತ್ತಿನಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದು, ನೈಜೀರಿಯಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮಕ್ಕಳ ಪರ ಸಂಘಟನೆಗಳು ಧ್ವನಿ ಎತ್ತಿವೆ. ಅದರಲ್ಲೂ ಮಕ್ಕಳ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ವಿಶ್ವಸಂಸ್ಥೆಯ ಅಂಗವಾಗಿ ಸ್ಥಾಪಿಸಲಾಗಿರುವ ಯೂನಿಸೆಫ್ (UNICEF) ಈ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಇದು ಮಕ್ಕಳ ಹಕ್ಕುಗಳ ಹತ್ಯೆಯಾಗಿದ್ದು, ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಸೂಚಿಸಿದೆ.

13-Year-Old Boy Sentenced To 10 Years In Prison

ಧರ್ಮನಿಂದನೆ: ಪಾಕಿಸ್ತಾನ ಕೋರ್ಟ್‌ನಲ್ಲಿ ಗುಂಡಿಕ್ಕಿ ಆರೋಪಿ ಹತ್ಯೆ ಧರ್ಮನಿಂದನೆ: ಪಾಕಿಸ್ತಾನ ಕೋರ್ಟ್‌ನಲ್ಲಿ ಗುಂಡಿಕ್ಕಿ ಆರೋಪಿ ಹತ್ಯೆ

ಇಲ್ಲಿ ಬದುಕಲು ನಮಗೆ ಭಯವಾಗುತ್ತಿದೆ

ಒಂದುಕಡೆ ಬಾಲಕನನ್ನು ಕೋರ್ಟ್ ಜೈಲಿಗಟ್ಟಿದ್ದರೆ, ಮತ್ತೊಂದ್ಕಡೆ ಬಾಲಕನ ಊರಲ್ಲಿ ಭಯಾನ ಸ್ಥಿತಿ ನಿರ್ಮಾಣವಾಗಿದೆ. ಗುಂಪು ಕಟ್ಟಿಕೊಂಡು ಬರುತ್ತಿರುವ ಕೆಲವರು, ಬಾಲಕನ ಮನೆ ಮೇಲೆ ದಾಳಿ ಮಾಡಿ ಹೋಗಿದ್ದಾರೆ. ನೈಜೀರಿಯಾದಲ್ಲಿ ಮೂಲಭೂತವಾದ ಆಳವಾಗಿ ಬೇರುಬಿಟ್ಟಿದ್ದು, ಪರಿಸ್ಥಿತಿ ನಿಭಾಯಿಸಲು ಜಾತ್ಯಾತೀತರು ಪರದಾಡುತ್ತಿದ್ದಾರೆ. ಈಗ ಬಾಲಕನ ಹಳ್ಳಿಯಲ್ಲೂ ಇಂತಹದ್ದೇ ಸ್ಥಿತಿ ಇದ್ದು, ಇಲ್ಲಿ ಬದುಕಲು ನಮಗೆ ಭಯವಾಗುತ್ತಿದೆ ಎಂದು ಬಾಲಕನ ತಾಯಿ ಅಳಲು ತೋಡಿಕೊಂಡಿದ್ದಾರೆ.

ಕೊರೊನಾದಿಂದ 8.8 ಲಕ್ಷ ಮಕ್ಕಳು ಸಾಯಬಹುದು:ಭಾರತದಲ್ಲೇ ಹೆಚ್ಚು ಎಂದ ಯುನಿಸೆಫ್ಕೊರೊನಾದಿಂದ 8.8 ಲಕ್ಷ ಮಕ್ಕಳು ಸಾಯಬಹುದು:ಭಾರತದಲ್ಲೇ ಹೆಚ್ಚು ಎಂದ ಯುನಿಸೆಫ್

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಕೀಲರು

Recommended Video

ಉಪ ಮುಖ್ಯಮಂತ್ರಿ C.S Ashwathnarayan ಅವರಿಗೂ Covid Positive | Oneindia Kannada

13 ವರ್ಷದ ಬಾಲಕನಿಗೆ 10 ವರ್ಷಗಳ ಶಿಕ್ಷೆ ವಿಧಿಸಿರುವ ಷರಿಯಾ ಕೋರ್ಟ್‌ನ ತೀರ್ಪು ಪ್ರಶ್ನಿಸಿ ಬಾಲಕನ ಪರ ವಕೀಲರು ನೈಜೀರಿಯಾದ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲದೆ ನೈಜೀರಿಯಾದ ಕಾನೂನು ಧರ್ಮನಿಂದನೆ ಬಗ್ಗೆ ಉಲ್ಲೇಖಿಸಿಲ್ಲ, ಹೀಗಾಗಿ ಷರಿಯಾ ಕೋರ್ಟ್ ಬಾಲಕನಿಗೆ ವಿಧಿಸಿರುವ ಶಿಕ್ಷೆ ನೈಜೀರಿಯಾ ಕಾನೂನಿಗೆ ವಿರುದ್ಧವಾಗಿ ಎಂಬುದು ಬಾಲಕನ ಪರ ವಕೀಲರ ವಾದವಾಗಿದೆ. ನೈಜೀರಿಯಾ ಸುಪ್ರೀಂಕೋರ್ಟ್ ಈ ತೀರ್ಪನ್ನು ತಿರಸ್ಕರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
Child rights agency UNICEF condemned sentencing of 13-year-old boy to 10 years in prison for blasphemy in northern Nigeria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X