ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ಮನೆಯಲ್ಲಿ ಮ್ಯೂಸಿಕ್ ಹಾಕಿದ್ದಕ್ಕೆ 13 ಜನ ಉಡೀಸ್!

|
Google Oneindia Kannada News

ತಾಲಿಬಾನ್ ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ತೆಗೆದುಕೊಂಡ ನಂತರ ಒಂದಿಲ್ಲ ಒಂದು ವಿಚಾರಕ್ಕೆ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ. ಸದ್ಯ ಮದುವೆ ಮನೆಯೊಂದರಲ್ಲಿ ಮ್ಯೂಸಿಕ್ ಹಾಕಿದ್ದರು ಎಂಬ ಕಾರಣಕ್ಕೆ 13 ಜನರನ್ನು ಕೊಂದು ಹಾಕಿದ ಆರೋಪ ತಾಲಿಬಾನಿಗಳ ವಿರುದ್ಧ ಕೇಳಿಬಂದಿದೆ. ಸ್ವತಃ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಟ್ವೀಟ್‌ ಮೂಲಕ ಆರೋಪ ಮಾಡಿದ್ದಾರೆ.

ಅಫ್ಘಾನಿಸ್ತಾನದ ನೆಂಗರ್‌ಹಾರ್ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಮ್ಯೂಸಿಕ್ ಹಾಕಲಾಗಿತ್ತು. ಆದರೆ ಈ ವೇಳೆ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ 13 ಜನ ಮೃತಪಟ್ಟಿದ್ದಾರೆ ಎಂದು ಅಮ್ರುಲ್ಲಾ ಸಲೇಹ್ ಆರೋಪಿಸಿದ್ದರೆ, ತಾಲಿಬಾನ್ ಮಾತ್ರ 3 ಜನ ಮೃತಪಟ್ಟಿದ್ದಾರೆ ಎನ್ನುತ್ತಿದೆ.

ಈ ನಡುವೆ ಗುಂಡು ಹಾರಿಸಿದವರನ್ನು ನಾವು ಬಂಧಿಸಿದ್ದೇವೆ ಎಂದು ತಾಲಿಬಾನ್‌ ಆಡಳಿತ ಘಟನೆ ಬಗ್ಗೆ ಸಮಜಾಯಿಷಿ ನೀಡಿದೆ. ಆದರೆ ಜಗತ್ತಿನಾದ್ಯಂತ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅಫ್ಘಾನಿಸ್ತಾನದ ಪ್ರಜೆಗಳು ಆಗ್ರಹಿಸಿದ್ದಾರೆ.

‘ಸಂಗೀತ’ ಎಂದರೆ ಕೆಂಡ..!

‘ಸಂಗೀತ’ ಎಂದರೆ ಕೆಂಡ..!

ತಾಲಿಬಾನ್ ನಾಯಕರಿಗೂ ಮ್ಯೂಸಿಕ್‌ಗೂ ಹಾವು-ಮುಂಗುಸಿ ಸಂಬಂಧ ಇದ್ದಂತೆ. ಯಾಕಂದ್ರೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಈಗಾಗಲೇ ಮ್ಯೂಸಿಕ್ ಕಾರಣಕ್ಕೆ ಅಫ್ಘಾನಿಸ್ತಾನದಲ್ಲಿ ಹಲವಾರು ಬಾರಿ ದಾಳಿ ನಡೆದಿದೆ. ಅದರಲ್ಲೂ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ಬಳಿಕ ಪರಿಸ್ಥಿತಿಯೇ ಬದಲಾಗಿ ಹೋಗಿದೆ. ಆದರೆ 13 ಜನರನ್ನು ಸಂಗೀತದ ಕಾರಣಕ್ಕೆ ಕೊಂದು ಹಾಕಿರುವುದು ಇದೇ ಮೊದಲು. ಹೀಗಾಗಿ ಅಫ್ಘಾನಿಸ್ತಾನದ ಜನ ಘಟನೆ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಮತ್ತೊಂದು ಕಡೆ ತಾಲಿಬಾನ್ ನಾಯಕರು, ತಮಗೂ ಮತ್ತು ಈ ಘಟನೆಗೂ ಸಂಬಂಧ ಇಲ್ಲ. ಈ ಕೃತ್ಯ ಎಸಗಿದವರು ಬೇರೆಯವರು ಅಂತಾ ವಾದಿಸುತ್ತಿದ್ದಾರೆ.

ಮಹಿಳೆಯರಿಗೆ ಕಠಿಣ ನಿಯಮ

ಮಹಿಳೆಯರಿಗೆ ಕಠಿಣ ನಿಯಮ

ಮುಜಾಹಿದ್ದೀನ್‌ಗಳ ಬಳಿಕ ಅಫ್ಘಾನಿಸ್ತಾನದ ಗದ್ದುಗೆ ಏರಿದ್ದ ತಾಲಿಬಾನ್, 1996ರಿಂದ 2001ರವರೆಗೂ ಕಠಿಣ ನಿಯಮಗಳನ್ನ ಹೇರಿತ್ತು. ಅದ್ರಲ್ಲೂ ಮಹಿಳೆಯರ ಮೇಲೆ ತಾಲಿಬಾನ್ ಹೇರಿದ್ದ ನಿಯಮಗಳು ಜಗತ್ತಿನಾದ್ಯಂತ ಭಾರಿ ಟೀಕೆಗೆ ಗುರಿಯಾಗಿತ್ತು. ಮಹಿಳೆಯರು ಒಬ್ಬರೇ ಹೊರಗಡೆ ಬರುವಂತಿಲ್ಲ, ಅಧ್ಯಯನ ಮಾಡುವಂತಿಲ್ಲ, ಕೆಲಸಕ್ಕೆ ಹೋಗುವಂತಿಲ್ಲ ಹೀಗೆ ಹಲವಾರು ಅಸಹನೀಯ ನಿಯಮಗಳನ್ನ ತಾಲಿಬಾನ್ ಹೇರಿತ್ತು. ಆದ್ರೆ ಈಗ ಅಂತಹ ನಿಯಮಗಳನ್ನ ತಾಲಿಬಾನ್ ತರುವುದಿಲ್ಲ ಎಂಬ ನಿರೀಕ್ಷೆ ಇತ್ತು. ಆ ನಂಬಿಕೆ ಹುಸಿಯಾಗಿದ್ದು, ಹಿಂದೆ ನಡೆದುಕೊಂಡ ರೀತಿಯಲ್ಲೇ ತಾಲಿಬಾನ್ ಈಗಲೂ ವರ್ತಿಸುತ್ತಿದೆ.

ತಾಲಿಬಾನ್ ಸಿದ್ಧಾಂತ ಏನು..?

ತಾಲಿಬಾನ್ ಸಿದ್ಧಾಂತ ಏನು..?

ಅಫ್ಘಾನಿಸ್ತಾನದಲ್ಲಿ ಇಸ್ಲಾಂ ಧರ್ಮೀಯರು ಬಹುಸಂಖ್ಯಾತರು. ಹೀಗಾಗಿ ಅಫ್ಘಾನ್‌ನಲ್ಲಿ ಷರಿಯಾ ಕಾನೂನು ಜಾರಿಗೆ ತರಬೇಕೆಂಬ ಉದ್ದೇಶ ತಾಲಿಬಾನ್ ಸಂಘಟನೆಯದ್ದು. 1996ರಲ್ಲಿ ತಾಲಿಬಾನ್ ಮೊದಲ ಬಾರಿಗೆ ಅಧಿಕಾರ ಹಿಡಿದಾಗ ಅಫ್ಘಾನ್‌ನಲ್ಲಿ ಷರಿಯಾ ಕಾನೂನು ಜಾರಿಗೆ ತಂದಿತ್ತು. ಷರಿಯಾ ಕಾನೂನು ಮಹಿಳೆಯರ ಮೇಲೆ ಸಾಕಷ್ಟು ನಿರ್ಬಂಧ ಹೇರಿತ್ತು.

 ಷರಿಯಾ ಕಾನೂನು ನಿರ್ಬಂಧಿಸಿತ್ತು

ಷರಿಯಾ ಕಾನೂನು ನಿರ್ಬಂಧಿಸಿತ್ತು

ಮಹಿಳೆಯರು ಕೆಲಸ ಮಾಡುವುದು, ಅಧ್ಯಯನ ಮಾಡುವುದಾಗಲಿ ಅಥವಾ ಒಬ್ಬರೇ ಮನೆಯಿಂದ ಹೊರ ಬರುವುದನ್ನು ಷರಿಯಾ ಕಾನೂನು ನಿರ್ಬಂಧಿಸಿತ್ತು. ಇಷ್ಟೇ ಅಲ್ಲದೆ ತಪ್ಪು ಮಾಡಿದವರಿಗೆ ಮರಣದಂಡನೆ ಮತ್ತು ಚಾಟಿ ಏಟಿನಂತಹ ಕಠಿಣ ಶಿಕ್ಷೆಗಳು ಮಾಮೂಲಿಯಾಗಿದ್ದವು. ಈ ಎಲ್ಲಾ ಕಾರಣಕ್ಕೆ ತಾಲಿಬಾನ್ ಆಡಳಿತಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರಲಿಲ್ಲ. ಪಾಕಿಸ್ತಾನ, ಚೀನಾ ಸೇರಿದಂತೆ ಕೆಲವೇ ಕೆಲವು ದೇಶಗಳು ಮಾತ್ರ ತಾಲಿಬಾನ್ ಆಡಳಿತ ಒಪ್ಪಿಕೊಂಡಿದ್ದವು.

English summary
Allegedly taliban gunman killed 13 people in a marriage function for playing music.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X