ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಲಿಪೈನ್ಸ್: ಕಾಲುವೆಗೆ ಉರುಳಿದ ಎಸ್‌ಯುವಿ, 13 ಮಂದಿ ದುರ್ಮರಣ

|
Google Oneindia Kannada News

ಮನಿಲಾ, ಏಪ್ರಿಲ್ 19: ಫಿಲಿಪೈನ್ಸ್‌ನ ನೀರಾವರಿ ಕಾಲುವೆಗೆ ಎಸ್‌ಯುವಿ ಕಾರು ಉರುಳಿಬಿದ್ದ ಪರಿಣಾಮ 7 ಮಂದಿ ಮಕ್ಕಳ ಸಮೇತ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಸ್ಥಳೀಯರು ಹಾಗೂ ಪೊಲೀಸರು ಸೇರಿ ಗಾಯಗೊಂಡವರನ್ನು ಕಳಿಂಗದ ಎರಡು ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.

ಭೀಕರ ಅಪಘಾತ: ಸುಂಟಿಕೊಪ್ಪ ಬಳಿ ಹೊತ್ತಿ ಉರಿದ ಕಾರು-ಲಾರಿಭೀಕರ ಅಪಘಾತ: ಸುಂಟಿಕೊಪ್ಪ ಬಳಿ ಹೊತ್ತಿ ಉರಿದ ಕಾರು-ಲಾರಿ

ಎಸ್‌ಯುವಿಯಲ್ಲಿ 15 ಮಂದಿ ಪ್ರಯಾಣಿಸುತ್ತಿದ್ದರು. ಮೃತರಲ್ಲಿ ಚಾಲಕ ಹಾಗೂ 7 ಮಂದಿ ಮಕ್ಕಳು ಸೇರಿದ್ದಾರೆ. 15 ಮಂದಿಯಲ್ಲಿ ಇಬ್ಬರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 13 People Dead As SUV Falls Into Philippine Irrigation Canal

ಘಟನೆಯು ಕಳಿಂಗ ಪ್ರಾಂತ್ಯದ ತಬೂಕ್ ನಗರದಲ್ಲಿ ಜನಪ್ರಿಯವಾದ ಸರೋವರಕ್ಕೆ ತೆರಳುತ್ತಿದ್ದ ಸಮಯದಲ್ಲಿ ನಡೆದಿದೆ. ಅಪಘಾತಕ್ಕೆ ಕಾರಣವೇನೆಂಬುದು ಇದುವರೆಗೂ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಫೀಲಿಪೈನ್ಸ್ ದೇಶ ಪರ್ವತಶ್ರೇಣಿಗಳಿಂದ ಕೂಡಿದೆ, ಎಲ್ಲಿ ನೋಡಿದರೂ ಕಳಪೆ ರಸ್ತೆಗಳಿವೆ, ಸೂಕ್ತ ರಸ್ತೆ ಸುರಕ್ಷತಾ ಸಂಕೇತಗಳೂ ಇಲ್ಲ, ಸಾರಿಗೆ ನಿಯಮ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಅಪಘಾತಗಳಿಗೆ ಹೆಚ್ಚು ಕುಖ್ಯಾತವಾಗಿದೆ.

ಎಸ್‌ಯುವಿ ಚಾಲಕ ಸೋಯಾ ಲೋಪ್ ಇದ್ದಕ್ಕಿದ್ದಂತೆ ವಾಹನದ ನಿಯಂತ್ರಣ ಕಳೆದುಕೊಂಡಿದ್ದರು, ಹಾಗಾಗಿ ವಾಹನವು ರಸ್ತೆ ಬಿಟ್ಟು ಸರೋವರಕ್ಕೆ ನುಗ್ಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ, ನಿಖರ ಕಾರಣಗಳು ಇನ್ನೂ ಪತ್ತೆಯಾಗಿಲ್ಲ.

English summary
Philippines —Thirteen people, many of them children, drowned when their SUV plunged into an irrigation canal in a northern Philippine mountain city, police said Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X