ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೈತ್ಯ ಗುರುವಿಗೆ ಇದೆ ಇನ್ನೂ ಡಜನ್ ಹೊಸ ಚಂದ್ರರ ನಂಟು

|
Google Oneindia Kannada News

ವಾಷಿಂಗ್ಟನ್ ಡಿ.ಸಿ, ಜುಲೈ 18: ಹಲವು ಕೌತುಕಗಳ ಕೇಂದ್ರವಾಗಿರುವ ದೈತ್ಯ ಗುರು ಗ್ರಹದ ಸುತ್ತಲೂ ಇನ್ನೂ 12 ಚಂದ್ರಗಳು ಬೆಳಗುತ್ತಿರುವುದನ್ನು ಖಗೋಳಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ.

ಇದರಿಂದ ಗುರು ಗ್ರಹದ ಸುತ್ತಲೂ ಇರುವ ಚಂದ್ರಗಳ ಸಂಖ್ಯೆ 79ಕ್ಕೆ ಏರಿದೆ. ಒಂದು ವರ್ಷದಿಂದ ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ದ ಖಗೋಳಶಾಸ್ತ್ರಜ್ಞರ ತಂಡ ಒಂದು ಡಜನ್ ಹೊಸ ಚಂದ್ರರನ್ನು ಕಂಡುಹಿಡಿದಿದ್ದಾರೆ.

 ವಾವ್.. ನೋಡಲೇಬೇಕು, ಉಪಗ್ರಹ ತೆಗೆದ ಭೂಮಿಯ ಅದ್ಭುತ ಚಿತ್ರ! ವಾವ್.. ನೋಡಲೇಬೇಕು, ಉಪಗ್ರಹ ತೆಗೆದ ಭೂಮಿಯ ಅದ್ಭುತ ಚಿತ್ರ!

ಗುರು ಗ್ರಹದ ಅಕ್ಕಪಕ್ಕದ ಗ್ರಹಗಳು ಕೂಡ ಚಂದ್ರ, ನಕ್ಷತ್ರಮಂಡಲಗಳಿಂದ ತುಂಬಿಕೊಂಡಿವೆ. ಆದರೆ ಗುರುವಿನ ಸುತ್ತಲೇ ಗಿರಕಿ ಹೊಡೆಯುತ್ತಿರುವ ಈ 12 ಚಂದ್ರರು ಅಚ್ಚರಿ ಮೂಡಿಸಿದ್ದಾರೆ.

ಸುಮಾರು 400 ವರ್ಷಗಳ ಹಿಂದೆ ಗೆಲಿಲಿಯೊ ಗೆಲಿಲಿ ಗುರು ಗ್ರಹದ ಮೊದಲ ಚಂದ್ರನನ್ನು ಪತ್ತೆಹಚ್ಚಿದ್ದರು. ಅಲ್ಲಿಂದಲೂ ಗುರುವಿನ ಸುತ್ತಲೂ ಇರುವ ಚಂದ್ರಗಳು ಒಂದೊಂದಾಗಿ ಕಣ್ಣಿಗೆ ಬೀಳುತ್ತಲೇ ಇವೆ.

ಅಧ್ಯಯನದ ವೇಳೆ ಪತ್ತೆ

ಅಧ್ಯಯನದ ವೇಳೆ ಪತ್ತೆ

ನಮ್ಮ ಸೌರವ್ಯೂಹದೊಳಗೆ ಸುಪ್ತವಾಗಿರುವ ಗುರು ಗ್ರಹದ ಹೊರಭಾಗಗಳ ಆಚೆಗೆ ಇರಬಹುದಾದ ಆಕಾಶಕಾಯಗಳ ಅಧ್ಯಯನ ನಡೆಸಲು ಹೊರಟ ತಮ್ಮ ತಂಡದ ಕಣ್ಣಿಗೆ ಈ ಚಂದ್ರಗಳು ಕಾಣಿಸಿರುವುದಾಗಿ ಕಾರ್ನೆಜಿ ವಿಜ್ಞಾನ ಸಂಸ್ಥೆಯ ಸ್ಕಾಟ್ ಶೆಫರ್ಡ್ ತಿಳಿಸಿದ್ದಾರೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಶೆಫರ್ಡ್ ಅವರು ಚಿಲಿಯಲ್ಲಿ ನಾಲ್ಕು ಮೀಟರ್ ಉದ್ದದ ವಿಕ್ಟರ್ ಬ್ಲಾಂಕೊ ಟೆಲಿಸ್ಕೋಪ್ ಬಳಸಿ ವೀಕ್ಷಿಸಿದಾಗ ತಾವು ಹುಡುಕಾಟಕ್ಕೆ ಬಯಸಿದ್ದ ಜಾಗದಲ್ಲಿಯೇ ಗುರು ಗ್ರಹ ಇದೆ ಎನ್ನುವುದು ಖಚಿತವಾಗಿತ್ತು.

ಪ್ಲಾನೆಟ್ ನೈನ್ ಹುಡುಕಾಟ

ಪ್ಲಾನೆಟ್ ನೈನ್ ಹುಡುಕಾಟ

ಪ್ಲೂಟೊದಾಚೆಗೆ ಇರಬಹುದು ಎಂದು ಊಹಿಸಿರುವ ಪ್ಲಾನೆಟ್‌ ನೈನ್ ಎಂಬ ವಿಸ್ಮಯದ ಕುರಿತು ಸಂಶೋಧನೆ ನಡೆಸುವ ವೇಳೆ ಅವರಿಗೆ ಗುರುವಿನ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ಈ ಗ್ರಹಗಳು ಕಾಣಿಸಿವೆ.

ಟೆಲಿಸ್ಕೋಪ್‌ಗೆ ಅಳವಡಿಸಿದ ಬೃಹತ್ ಕ್ಯಾಮೆರಾ ಗುರುವಿನ ಸುತ್ತಮುತ್ತಲಿನ ಸಂಪೂರ್ಣ ಪ್ರದೇಶವನ್ನು ಕೆಲವೇ ಚಿತ್ರಗಳಲ್ಲಿ ಹಿಡಿದುಕೊಟ್ಟಿತು. ಅದರಲ್ಲಿ 12 ಹೊಸ ಚಂದ್ರಗಳು ಕಾಣಿಸಿಕೊಂಡವು. ಬೇರೆ ಟೆಲಿಸ್ಕೋಪ್‌ಗಳನ್ನು ಬಳಸಿ ಸಹ ಈ ಚಂದ್ರಗಳ ಅಸ್ತಿತ್ವವನ್ನು ಖಾತರಿಪಡಿಸಿಕೊಳ್ಳಲಾಯಿತು.

ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಬುವಿ-ಅಂತರಿಕ್ಷದ ಅದ್ಭುತ ಚಿತ್ರಗಳ ಸರಣಿಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಬುವಿ-ಅಂತರಿಕ್ಷದ ಅದ್ಭುತ ಚಿತ್ರಗಳ ಸರಣಿ

ಪ್ರತಿಗಾಮಿ ಚಂದ್ರಗಳು

ಪ್ರತಿಗಾಮಿ ಚಂದ್ರಗಳು

ಈ 12 ಚಂದ್ರಗಳ ಪೈಕಿ 9 ಚಂದ್ರಗಳು ಈ ಹಿಂದೆ ಪತ್ತೆಹಚ್ಚಲಾದ ಚಂದ್ರಗಳ ಗುಚ್ಛದಲ್ಲಿದ್ದು, ಖಗೋಳಶಾಸ್ತ್ರಜ್ಞರು ಇದನ್ನು ಪ್ರತಿಗಾಮಿ ಕಕ್ಷೆ ಎಂದು ಕರೆದಿದ್ದರು.

ಗುರು ಗ್ರಹವು ತನ್ನ ಕಕ್ಷೆಯೊಳಗೆ ಸುತ್ತುವ ವಿರುದ್ಧ ದಿಕ್ಕಿನಲ್ಲಿ ಈ ಚಂದ್ರಗಳು ಚಲಿಸುತ್ತವೆ.

ಪ್ರತಿಗಾಮಿ ಚಂದ್ರಗಳು ಗುರು ಸುತ್ತುವ ದಿಕ್ಕಿನಲ್ಲಿಯೇ ಸುತ್ತುವ ಅಭಿಗಾಮಿ ಚಂದ್ರಗಳಿಗಿಂತ ವಿಭಿನ್ನವಾದ ಜನ್ಮರಹಸ್ಯ ಹೊಂದಿರಬಹುದು ಎಂದು ಖಗೋಳಶಾಸ್ತ್ರಜ್ಞರು ಭಾವಿಸಿದ್ದಾರೆ.

ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ?ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ?

ಪ್ರದಕ್ಷಿಣೆ ಹಾಕುವ ಚಂದ್ರರು

ಪ್ರದಕ್ಷಿಣೆ ಹಾಕುವ ಚಂದ್ರರು

ಅಭಿಗಾಮಿ ಚಂದ್ರಗಳು ಗ್ರಹದ ರಚನೆ ವೇಳೆ ಒಂದುಗೂಡಿದ ಸೌರವ್ಯೂಹದ ಕಣಗಳಿಂದಲೇ ಸೃಷ್ಟಿಯಾಗಿದ್ದಿರಬಹುದು. ಇದಕ್ಕೆ ವಿರುದ್ಧವಾಗಿ ಪ್ರತಿಗಾಮಿ ಚಂದ್ರಗಳು ಒಂದು ಕಾಲದಲ್ಲಿ ಸೌರವ್ಯೂಹದಲ್ಲಿ ಸುತ್ತಾಡುತ್ತಿದ್ದು, ಗುರುಗ್ರಹದ ಗುರುತ್ವದ ಶಕ್ತಿಗೆ ಸಿಲುಕಿದ್ದಿರಬಹುದು ಎಂದು ನಂಬಲಾಗಿದೆ.

ಈ ಚಂದ್ರಗಳು ಗುರು ಗ್ರಹದ ರಚನೆಯ ಸಂದರ್ಭದಲ್ಲಿಯೇ ಹುಟ್ಟಿದ್ದಲ್ಲ. ಈ ಹಿಂದೆ ತನಗೆ ಅತಿ ಸಮೀಪದಲ್ಲಿದ್ದ ಇವುಗಳನ್ನು ಗುರು ಗ್ರಹ ಹಿಡಿದಿಟ್ಟುಕೊಂಡಿದೆ ಎಂದು ನಮ್ಮ ಆಲೋಚನೆ ಎಂಬುದಾಗಿ ಶೆಫರ್ಡ್ ವಿವರಿಸಿದ್ದಾರೆ.

ಸೌರ ಮಂಡಲಕ್ಕೆ ಬಂದ 'ಹೊಸ ಅತಿಥಿ'ಯ ಕುತೂಹಲಕಾರಿ ಕಥೆಸೌರ ಮಂಡಲಕ್ಕೆ ಬಂದ 'ಹೊಸ ಅತಿಥಿ'ಯ ಕುತೂಹಲಕಾರಿ ಕಥೆ

ಒಂದು ಕಿ.ಮೀ.ಯಷ್ಟೇ ದೊಡ್ಡದು

ಒಂದು ಕಿ.ಮೀ.ಯಷ್ಟೇ ದೊಡ್ಡದು

ಗುರು ಗ್ರಹಕ್ಕೆ ಪ್ರತಿಗಾಮಿ ಚಂದ್ರಗಳಿಗಿಂತಲೂ ಅಭಿಗಾಮಿ ಚಂದ್ರಗಳು ಹೆಚ್ಚು ಸಮೀಪದಲ್ಲಿ ಸುತ್ತುತ್ತವೆ. ಆದರೆ, 'ಆಡ್‌ಬಾಲ್' ಉಳಿದ ಅಭಿಗಾಮಿ ಚಂದ್ರಗಳಿಗಿಂತ ವಿಭಿನ್ನ, ವಿಲಕ್ಷಣ ಗುಣ ಹೊಂದಿದೆ.

ಆಡ್‌ಬಾಲ್ ಚಂದ್ರನ ಕಕ್ಷೆ ಪ್ರತಿಗಾಮಿ ಚಂದ್ರಗಳು ಇರುವಷ್ಟೇ ದೂರದಲ್ಲಿದೆ. ಶೆಫರ್ಡ್ ಮತ್ತು ಅವರ ಸಹೋದ್ಯೋಗಿಗಳು ಪತ್ತೆಹಚ್ಚಿದ ಚಂದ್ರಗಳ ಪೈಕಿ ಆಡ್‌ಬಾಲ್ ಅತಿ ಚಿಕ್ಕದು.

ಇದರ ಗಾತ್ರ ಕೇವಲ ಒಂದು ಕಿ.ಮೀ.ಯಷ್ಟಿದೆ. ಇದು ಒಂದು ಕಾಲದಲ್ಲಿ ಬೃಹತ್ ಚಂದ್ರನಾಗಿದ್ದು, ಆ ಭಾಗದಲ್ಲಿನ ಒಂದು ಅಥವಾ ಇನ್ನೂ ಹೆಚ್ಚಿನ ಪ್ರತಿಗಾಮಿ ಚಂದ್ರಗಳ ನಡುವೆ ಡಿಕ್ಕಿ ಹೊಡೆದು ತನ್ನ ಗಾತ್ರವನ್ನು ಕಳೆದುಕೊಂಡಿರಬಹುದು ಎಂದು ವಿಜ್ಞಾನಿಗಳ ತಂಡ ಊಹಿಸಿದೆ.

ವಾಲೆಟುಡೊ ಹೆಸರಿಗೆ ಶಿಫಾರಸು

ವಾಲೆಟುಡೊ ಹೆಸರಿಗೆ ಶಿಫಾರಸು

ಒಂದು ಕಿ.ಮೀ.ಯಷ್ಟು ಮಾತ್ರ ದೊಡ್ಡದಿರುವ ಈ ಪುಟಾಣಿ ಚಂದ್ರನಿಗೆ ರೋಮನ್ ದೇವತೆ ಜುಪಿಟರ್‌ನ ಮರಿಮೊಮ್ಮಗಳು ಹಾಗೂ ಮರಿ ದೇವತೆ ವಾಲೆಟುಡೊಳ ಹೆಸರಿಡುವಂತೆ ಶೆಫರ್ಡ್ ಮತ್ತವರ ತಂಡ ಪ್ರಸ್ತಾವ ಮುಂದಿಟ್ಟಿದೆ.

ನೂರರ ಗಡಿ ದಾಟಬಹುದು

ನೂರರ ಗಡಿ ದಾಟಬಹುದು

ಹನ್ನೆರಡು ಹೊಸ ಚಂದ್ರಗಳು ಕಂಡುಬಂದಿದ್ದರೂ, ಮುಂದಿನ ದಿನಗಳಲ್ಲಿ ಮತ್ತಷ್ಟು ಚಂದ್ರಗಳು ಕಾಣಿಸಬಹುದು. ಈ ಮೊದಲು 67 ಗ್ರಹಗಳು ಪತ್ತೆಯಾಗಿದ್ದವು.

ಈಗ ಮತ್ತೆ ಹನ್ನೆರಡು ಚಂದ್ರಗಳ ಸೇರ್ಪಡೆಯಿಂದ ಗುರುಗ್ರಹದ ಕುಟುಂಬ ಇನ್ನಷ್ಟು ವಿಸ್ತೀರ್ಣವಾಗಿದೆ. ಮುಂದೆ ಅದರ ಸುತ್ತಲೂ ಪ್ರದಕ್ಷಿಣೆ ಹಾಕುವ ಇನ್ನಷ್ಟು ಚಂದ್ರಗಳು ಕಣ್ಣಿಗೆ ಬೀಳಬಹುದು. ಹೀಗಾಗಿ ಅತಿ ಚಿಕ್ಕವನ್ನೂ ಒಳಗೊಂಡಂತೆ ಚಂದ್ರನ ಸಂಖ್ಯೆ 100ರ ಗಡಿ ದಾಟಿದರೂ ಅಚ್ಚರಿಯಿಲ್ಲ.

ಕುಬ್ಜ ಚಂದ್ರಗಳು

ಕುಬ್ಜ ಚಂದ್ರಗಳು

ಗ್ರಹದಿಂದ ಒಂದು ಮೈಲಿಗೂ ಕಡಿಮೆ ಗಾತ್ರ ಇರುವ ವಸ್ತುವನ್ನು ಚಂದ್ರ ಎಂದು ಕರೆಯಬಹುದೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಇದು ಸಮಸ್ಯಾತ್ಮಕ ಎನ್ನುವುದನ್ನು ಶೆಫರ್ಡ್ ಒಪ್ಪುತ್ತಾರೆ. ಸಣ್ಣ ಚಂದ್ರಗಳ ಕುರಿತು ಬೇರೆಯದೇ ಹೊಸ ವ್ಯಾಖ್ಯಾನ ಹುಟ್ಟಿಕೊಳ್ಳಬಹುದು. ಒಂದು ಕಿ.ಮೀ ಅಥವಾ ಇನ್ನೂ ಸಣ್ಣ ಗಾತ್ರದ ಚಂದ್ರಗಳಿಗೆ ಕುಬ್ಜ ಚಂದ್ರ ಎಂದೂ ಹೆಸರಿಡಬಹುದು ಎಂಬುದಾಗಿ ಅವರು ಹೇಳಿದ್ದಾರೆ.

ಒಂದು ವರ್ಷದ ಶ್ರಮ

ಒಂದು ವರ್ಷದ ಶ್ರಮ

ಈ ಚಂದ್ರಗಳು ಗುರುವಿನ ಸುತ್ತ ಸುತ್ತುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅನೇಕ ಪರಿಶೀಲನೆಗಳನ್ನು, ಅಧ್ಯಯನಗಳನ್ನು ಮಾಡಬೇಕಾಯಿತು. ಇದಕ್ಕೆ ಒಂದು ವರ್ಷ ಬೇಕಾಯಿತು ಎಂದು ಖಗೋಳವಿಜ್ಞಾನಿ ಗೆರತ್ ವಿಲಿಯಮ್ಸ್ ಹೇಳಿದ್ದಾರೆ.

English summary
A team of astronomers have discovered 12 more new moons in the orbit of Jupiter planet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X