ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆದುಳಿನ ಆಘಾತಕ್ಕೊಳಗಾದ ಅಮೆರಿಕ ಯೋಧರ ಸಂಖ್ಯೆ 110 ಕ್ಕೆ ಏರಿಕೆ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 22: ಇರಾನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ಬಳಿಕ ಮೆದುಳಿದನ ಆಘಾತಕ್ಕೊಳ್ಳಗಾದ ಅಮೆರಿಕ ಯೋಧರ ಸಂಖ್ಯೆ 110ಕ್ಕೇರಿದೆ.

ಇದುವರೆಗೆ 110 ಭದ್ರತಾ ಸಿಬ್ಬಂದಿಗೆ ಲಘು ಟಿಬಿಐ ರೋಗವಿರುವುದು ದೃಢಪಟ್ಟಿದೆ. ನಿನ್ನೆ ವರದಿಯಾದ ಸಂಖ್ಯೆಗಿಂತ ಇಂದು ಒಬ್ಬ ಯೋಧ ಹೆಚ್ಚಾಗಿ ಸೇರ್ಪಡೆಯಾಗಿದ್ದಾರೆ. ಟಿಬಿಐ ರೋಗನಿರ್ಣಯ ಮಾಡಲಾಗಿರುವ ಯೋಧರ ಪೈಕಿ 77 ಮಂದಿ ಸದ್ಯ ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಮೆರಿಕದ ಸೇನಾ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿಅಮೆರಿಕದ ಸೇನಾ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ

ಫೆ 10 ರಂದು, ಪೆಂಟಗನ್ ಬಿಡುಗಡೆ ಮಾಡಿದ ಪ್ರಕಟಣೆಯಂತೆ ಟಿಬಿಐ ರೋಗನಿರ್ಣಯ ಮಾಡಿದ ಅಮೆರಿಕ ಯೋಧರ ಸಂಖ್ಯೆ 109ನಷ್ಟಿತ್ತು. ಇದು ಜನವರಿ ಅಂತ್ಯದ ವರದಿಗೆ ಹೋಲಿಸಿದರೆ 45 ರಷ್ಟು ಹೆಚ್ಚಾಗಿದೆ.

110 US troops Wounded In Iran Attack

ಜನವರಿ 8 ರಂದು ಇರಾನ್ ಕ್ಷಿಪಣಿ ದಾಳಿ ನಡೆಸಿ ಅಮೆರಿಕದ 80 ಸೈನಿಕರನ್ನು ಹತ್ಯೆ ಮಾಡಿತ್ತು. ಈ ಸಂಬಂಧ ಇರಾನ್ ಸರ್ಕಾರಿ ಮಾಧ್ಯಮ, ಖಂಡಾಂತರ ಕ್ಷಿಪಣಿ ದಾಳಿ ಮಾಡಿ ಇರಾಕ್‍ನಲ್ಲಿದ್ದ ಅಮೆರಿಕ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ನಮ್ಮ ದಾಳಿಯಲ್ಲಿ 80 'ಅಮೆರಿಕ ಉಗ್ರರು' ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿತ್ತು.

ಇರಾನ್ ಅಮೆರಿಕ ತನ್ನ ವೈರಿ ಎಂದು ಈಗಾಗಲೇ ಹೇಳಿಕೊಂಡಿದ್ದು ಉಗ್ರರ ನಾಡು ಎಂದು ಕರೆಯುತ್ತಿದೆ. ಅಮೆರಿಕದ ಸೈನಿಕರನ್ನು ಉಗ್ರಗಾಮಿಗಳಿಗೆ ಹೋಲಿಕೆ ಮಾಡುತ್ತಿದೆ.

ತನ್ನ ಸೇನಾ ಕಮಾಂಡರ್ ಖಾಸಿಂ ಸುಲೇಮಾನಿ ಹತ್ಯೆ ಪ್ರತೀಕಾರ ತೀರಿಸುತ್ತೇವೆ ಎಂದು ಇರಾನ್ ಹೇಳಿತ್ತು. ಅದರಂತೆ ಈಗ ಈ ದಾಳಿ ನಡೆಸಿದ್ದೇವೆ ಎಂದು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದೆ.

ಒಟ್ಟು 15 ಕ್ಷಿಪಣಿಗಳನ್ನು ಇರಾನ್ ಅಮೆರಿಕ ಸೇನೆಯ ಮೇಲೆ ಹಾರಿಸಿದೆ. ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ನಮ್ಮ ಕ್ಷಿಪಣಿಯನ್ನು ಅಮೆರಿಕ ಹೊಡೆದು ಹಾಕಿಲ್ಲ ಎಂದು ಇರಾನ್ ಸರ್ಕಾರಿ ಮಾಧ್ಯಮ ಹೇಳಿಕೊಂಡಿತ್ತು.

English summary
The number of US troops who sustained traumatic brain injury when Iran launched missiles at their base in Iraq last month has risen to 110, the Pentagon said Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X