ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನ, 11 ಮಂದಿ ಸಾವು

|
Google Oneindia Kannada News

ಅಂಕಾರಾ, ಮಾರ್ಚ್ 05: ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಲೆಫ್ಟಿನೆಂಟ್ ಜನರಲ್ ಸೇರಿ 11 ಮಂದಿ ಸಾವನ್ನಪ್ಪಿದ್ದಾರೆ.

ಸೇನೆಯ ಲೆಫ್ಟೆನೆಂಟ್ ಜನರಲ್ ಉಸ್ಮಾನ್ ಎರ್ಬಾಸ್ ಕೂಡ ಮೃತಪಟ್ಟಿರುವುದಾಗಿ ವರದಿಯಾಗಿದೆ. ಪತನ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಮಾನ ಅಪಘಾತದ 11 ದಿನಗಳ ಬಳಿಕ ಪೈಲಟ್ ಮೃತದೇಹ ಪತ್ತೆವಿಮಾನ ಅಪಘಾತದ 11 ದಿನಗಳ ಬಳಿಕ ಪೈಲಟ್ ಮೃತದೇಹ ಪತ್ತೆ

ಕರಾವಳಿ ಪ್ರದೇಶಗಳಲ್ಲಿ ಬಳಕೆಯಾಗುವ ಕೂಗರ್ ರೀತಿಯ ಹೆಲಿಕಾಪ್ಟರ್ ತತ್ವಾನ್ ಪಟ್ಟಣದ ಸಮೀಪ ಪತನಗೊಂಡಿದೆ. ಕರ್ಡಿಶ್ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಬಿಟ್ಲಸ್ ಪ್ರಾಂತ್ಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬಿಂಗಾಲ್ ಪ್ರದೇಶದಿಂದ ಹಾರಾಟ ಆರಂಭಿಸಿದ್ದ ಹೆಲಿಕಾಪ್ಟರ್ ಮಧ್ಯಾಹ್ನ 2.25ಕ್ಕೆ ಸಂಪರ್ಕ ಕಳೆದುಕೊಂಡಿತ್ತು.

11 Killed In Army Helicopter Crash In Eastern Turkey

ಹಿಮ ಸೇರಿದಂತೆ ಹಲವು ಹವಾಮಾನ ವೈಪರೀತ್ಯ ಕಾರಣದಿಂದ ಪತನ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸ್ಥಳೀಯರು ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ ಧಾವಿಸಿ, ಗಾಯಗೊಂಡಿದ್ದ ಸೇನಾ ಸಿಬ್ಬಂದಿಯನ್ನು ಹಿಮದ ರಾಶಿಯಿಂದ ಮೇಲಕ್ಕೆತ್ತಿದ್ದಾರೆ. ಟರ್ಕಿಯ ರಕ್ಷಣಾ ಸಚಿವ ಹುಲುಸಿ ಆಕರ್ ಮತ್ತು ಸೇನಾ ಮುಖ್ಯಸ್ಥ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

2017ರ ಸಂದರ್ಭದಲ್ಲಿ ಇರಾಕ್ ಮತ್ತು ಟರ್ಕಿ ಗಡಿ ಪ್ರದೇಶದಲ್ಲಿ ಕೂಗರ್ ಹೆಲಿಕಾಪ್ಟರ್ ಹಾರಾಟ ಆರಂಭಿಸಿ ಸ್ವಲ್ಪ ಸಮಯದಲ್ಲೇ ಪತನಗೊಂಡಿತ್ತು. ಅಂದು 13 ಮಂದಿ ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.

ಉಕ್ರೇನ್ ಮಿಲಿಟರಿ ವಿಮಾನ ಪತನ: 22 ಮಂದಿ ಸಜೀವ ದಹನಉಕ್ರೇನ್ ಮಿಲಿಟರಿ ವಿಮಾನ ಪತನ: 22 ಮಂದಿ ಸಜೀವ ದಹನ

ನಿಷೇಧಿತ ಕರ್ಡಿಸ್ಥಾನ್ ವರ್ಕರ್ಸ್ ಪಾರ್ಟಿಯ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಪ್ರದೇಶದಲ್ಲಿಯೇ ಹೆಲಿಕಾಪ್ಟರ್ ಪತನವಾಗಿದೆ. 1984ರಿಂದ ಉಗ್ರರು ಮತ್ತು ಸೇನೆಯ ನಡುವಿನ ಘರ್ಷಣೆಯು ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡಿದೆ.

English summary
An army helicopter crashed in eastern Turkey on Thursday, killing 11 military personnel on board and injuring two others, the Defence Ministry said. News reports said a high-ranking officer was among the victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X