ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಟಿಯಲ್ಲಿ 5.9ರ ತೀವ್ರತೆಯ ಭೂಕಂಪ, ಕನಿಷ್ಠ 11 ಮಂದಿ ಸಾವು

|
Google Oneindia Kannada News

ಹೈಟಿಯ ವಾಯವ್ಯ ಕಡಲ ತೀರದಲ್ಲಿ ಶನಿವಾರ ರಾತ್ರಿ 5.9ರ ತೀವ್ರತೆಯ ಭೂಕಂಪ ಸಂಭವಿಸಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ. ಪೋರ್ಟ್-ಡಿ-ಪೈಕ್ಸ್ ನ ವಾಯವ್ಯಕ್ಕೆ ಹತ್ತೊಂಬತ್ತು ಕಿ.ಮೀ. ದೂರದಲ್ಲಿ ಭೂಕಂಪನವು ಕೇಂದ್ರೀಕೃತವಾಗಿತ್ತು ಎಂದು ಅಮೆರಿಕ ಭೂಗರ್ಭ ಸರ್ವೇಕ್ಷಣಾ ವರದಿ ತಿಳಿಸಿದೆ.

ಸರಕಾರದ ವಕ್ತಾರರಾದ ಎಡ್ಡಿ ಜಾಕ್ಸನ್ ಅಲೆಕ್ಸಿಸ್ ಮಾಧ್ಯಮಗಳ ಜತೆಗೆ ಮಾತನಾಡಿ, ಈ ವರೆಗೆ ಹನ್ನೊಂದು ಮಂದಿ ಮೃತಪಟ್ಟಿರುವುದಾಗಿ ವರದಿ ಆಗಿದೆ. ವಿಪತ್ತು ನಿರ್ವಹಣಾ ತಂಡವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವೈರಲ್ ವಿಡಿಯೋ: ಭೂಕಂಪ-ಸುನಾಮಿ ನಂತರ ಹೇಗಾಗಿದೆ ನೋಡಿ ಇಂಡೋನೇಷ್ಯಾವೈರಲ್ ವಿಡಿಯೋ: ಭೂಕಂಪ-ಸುನಾಮಿ ನಂತರ ಹೇಗಾಗಿದೆ ನೋಡಿ ಇಂಡೋನೇಷ್ಯಾ

ರಾಜಧಾನಿ ಪೋರ್ಟ್-ಡಿ-ಪ್ರಿನ್ಸ್ ನಲ್ಲಿ ಕಂಪನದ ಅನುಭವ ಆಗಿದೆ. ಇದರಿಂದ ಸ್ಥಳೀಯರು ಗಾಬರಿ ಆಗಿದ್ದಾರೆ. ಎಂಟು ವರ್ಷದ ಹಿಂದೆ ಇದೇ ದೇಶದಲ್ಲಿ ಸಂಭವಿಸಿದ ಭಾರೀ ಭೂ ಕಂಪನದಲ್ಲಿ ಕನಿಷ್ಠ ಎರಡು ಲಕ್ಷ ಮಂದಿ ಸಾವನ್ನಪ್ಪಿದ್ದರು. ಮೂರು ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ಕಹಿ ನೆನಪು ಇಲ್ಲಿನ ಜನರನ್ನು ಈಗಲೂ ಕಾಡುತ್ತಿದೆ.

11 dead as 5.4 magnitude earthquake hits Haiti

ಸಂಯಮದಿಂದ ಇರುವಂತೆ ಹೈಟಿಯ ಅಧ್ಯಕ್ಷ ಜೊವೆನೆಲ್ ಮಾಯ್ಸ್ ಜನರನ್ನು ಮನವಿ ಮಾಡಿದ್ದಾರೆ. ನೆರವಿನ ಅಗತ್ಯ ಇರುವವರಿಗೆ ಅಧಿಕಾರಿಗಳು ಶ್ರಮ ವಹಿಸುತ್ತಿದ್ದಾರೆ ಎಂದು ಕೂಡ ಹೇಳಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನಡೆಯುತ್ತಿದೆ.

ಇಂಡೋನೇಷ್ಯಾವನ್ನು ಕಾಡಿರುವ ಅತಿ ಭಯಂಕರ 10 ಭೂಕಂಪಗಳ ಪಟ್ಟಿಇಂಡೋನೇಷ್ಯಾವನ್ನು ಕಾಡಿರುವ ಅತಿ ಭಯಂಕರ 10 ಭೂಕಂಪಗಳ ಪಟ್ಟಿ

ಪೂರ್ತಿಯಾಗಿ ಹಾನಿಗೀಡಾದ ಮನೆಗಳು, ಅರ್ಧಂಬರ್ಧ ಹಾಳಾದ ಕಟ್ಟಡಗಳ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅವುಗಳ ಸಾಚಾತನದ ಬಗ್ಗೆ ಯಾವುದೇ ಮೂಲಗಳು ಖಾತ್ರಿ ಪಡಿಸಿಲ್ಲ.

English summary
A 5.9-magnitude earthquake struck just off the northwest coast of Haiti late Saturday, killing at least 11 people and causing damage to buildings in the Caribbean nation, authorities said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X