ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 101 ಶತಕೋಟಿ ಸಿರಿವಂತರು; ಅಗ್ರಸ್ಥಾನದಲ್ಲಿ ಅಂಬಾನಿ

2017ನೇ ಸಾಲಿನ ವಿಶ್ವದ ಶ್ರೀಮಂತರ ಪಟ್ಟಿಯನ್ನು ಫೋಬ್ಸ್ ಬಿಡುಗಡೆ ಮಾಡಿದೆ. 2,043 ಜನರ ಈ ಪಟ್ಟಿಯಲ್ಲಿ ಮೊದಲ ಬಾರಿಗೆ ಶತ ಕೋಟ್ಯಾಧಿಪತಿ ಭಾರತೀಯರ ಸಂಖ್ಯೆ 100ರ ಗಡಿ ದಾಟಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 21: 2017ನೇ ಸಾಲಿನ ವಿಶ್ವದ ಶ್ರೀಮಂತರ ಪಟ್ಟಿಯನ್ನು ಫೋಬ್ಸ್ ಬಿಡುಗಡೆ ಮಾಡಿದೆ. 2,043 ಜನರ ಈ ಪಟ್ಟಿಯಲ್ಲಿ ಮೊದಲ ಬಾರಿಗೆ ಶತ ಕೋಟ್ಯಾಧಿಪತಿ ಭಾರತೀಯರ ಸಂಖ್ಯೆ 100ರ ಗಡಿ ದಾಟಿದೆ.

ಅಮೆರಿಕಾದಲ್ಲಿ ಅತೀ ಹೆಚ್ಚು 565 ಶತ ಕೋಟ್ಯಾಧಿಪತಿಗಳಿದ್ದಾರೆ. ಅತೀ ಹೆಚ್ಚು ಶತ ಕೋಟ್ಯಾಧಿಪತಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತೀಯರಲ್ಲಿ ಅತೀ ಹೆಚ್ಚು ಶ್ರೀಮಂತರಾಗಿದ್ದಾರೆ. ಆದರೆ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಅವರು 33ನೇ ಸ್ಥಾನದಲ್ಲಿದ್ದಾರೆ.[ಫೋರ್ಬ್ಸ್ ಪ್ರಕಟಿಸಿದ ದೇಶದ 100 ಶ್ರೀಮಂತರ ಪಟ್ಟಿಯಲ್ಲಿ ಯಾರಿದ್ದಾರೆ?]

ಇನ್ನು 20 ಭಾರತೀಯ ಮೂಲದ ಉದ್ಯಮಿಗಳು ಬೇರೆ ಬೇರೆ ದೇಶದಲ್ಲಿ ನೆಲೆಸಿದ್ದು ಶತ ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಉದಾಹರಣೆಗೆ ಇಂಗ್ಲೆಂಡಿನಲ್ಲಿರುವ ಹಿಂದೂಜಾ ಸಹೋದರರ ಆಸ್ತಿ 154 ಬಿಲಿಯನ್ ಡಾಲರ್ ಇದ್ದು ವಿಶ್ವದ ಸಿರಿವಂತರ ಪಟ್ಟಿಯಲ್ಲಿ 64ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಅಗ್ರಸ್ಥಾನದಲ್ಲಿ ಮುಖೇಶ್ ಅಂಬಾನಿ

ಅಗ್ರಸ್ಥಾನದಲ್ಲಿ ಮುಖೇಶ್ ಅಂಬಾನಿ

23.2 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಮುಖೇಶ್ ಅಂಬಾನಿ ಭಾರತದ ಅತೀ ಸಿರಿವಂತರಾಗಿದ್ದಾರೆ. ವಿಶ್ವಕ್ಕೆ ಹೋಲಿಕೆ ಮಾಡಿದರೆ ಅವರ ಸ್ಥಾನ 33ರಲ್ಲಿ ಬಂದು ನಿಲ್ಲುತ್ತದೆ. ಇನ್ನು ಅವರ ತಮ್ಮ ಅನಿಲ್ ಅಂಬಾನಿ ಆಸ್ತಿ 2.7 ಬಿಲಿಯನ್ ಇದ್ದು ಪಟ್ಟಿಯಲ್ಲಿ 745ನೇ ಸ್ಥಾದಲ್ಲಿದ್ದಾರೆ.

ಲಕ್ಷ್ಮೀ ಮಿತ್ತಲ್

ಲಕ್ಷ್ಮೀ ಮಿತ್ತಲ್

ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಲಕ್ಷ್ಮೀ ಮಿತ್ತಲ್ ಎರಡನೇ ಸ್ಥಾನದಲ್ಲಿದ್ದಾರೆ. ಆರ್ಸೆಲಾರ್ ಮಿತ್ತಲ್ ಕಂಪೆನಿಯ ಅಧ್ಯಕ್ಷ ಮಿತ್ತಲ್ ಬಳಿ 16.4 ಬಿಲಿಯನ್ ಡಾಲರ್ ಆಸ್ತಿ ಇದ್ದು ವಿಶ್ವದ ಸಿರಿವಂತರ ಪಟ್ಟಿಯಲ್ಲಿ 56ನೇ ಸ್ಥಾನದಲ್ಲಿದ್ದಾರೆ. ಉಕ್ಕಿನ ಬೆಲೆ ಹಾಗೂ ಬೇಡಿಕೆ ಹೆಚ್ಚಾಗಿರುವುದರಿಂದ ಅವರ ಆಸ್ತಿಯಲ್ಲಿ ಈ ವರ್ಷ ಏರಿಕೆಯಾಗಿದೆ ಎಂದು ಫೋರ್ಬ್ಸ್ ಹೇಳಿದೆ.[ಫೋರ್ಬ್ಸ್, ದೇಶದ 100 ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ: ನಮ್ಮವರಿದ್ದಾರಾ?]

20 ಅನಿವಾಸಿ ಭಾರತೀಯರು

20 ಅನಿವಾಸಿ ಭಾರತೀಯರು

ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 20 ಅನಿವಾಸಿ ಭಾರತೀಯರೂ ಇದ್ದಾರೆ. ಬ್ರಿಟನಿನಲ್ಲಿರುವ ಹಿಂದೂಜಾ ಸಹೋದರರು 15.4 ಬಿಲಿಯನ್ ಆಸ್ತಿಯೊಂದಿಗೆ 64ನೇ ಸ್ಥಾನದಲ್ಲಿದ್ದಾರೆ. ಶಪೂರ್ಜಿ ಪಲ್ಲೊಂಜಿ ಗ್ರೂಪ್ ಅಧ್ಯಕ್ಷ ಪಲ್ಲೊಂಜಿ ಮಿಸ್ತ್ರಿ ಕುಟುಂಬ 14.3 ಬಿಲಿಯನ್ ಆಸ್ತಿಯೊಂದಿಗೆ 77ನೇ ಸ್ಥಾನದಲ್ಲಿದೆ. ಇನ್ನು ಪೆಟ್ರೊ ಕೆಮಿಕಲ್ ಕಂಪೆನಿ ಇಂಡೊರಾಮ ಸಹ ಸಂಸ್ಥಾಪಕ ಶ್ರೀ ಪ್ರಕಾಶ್ ಲೋಹಿಯಾ 5.4 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 288ನೇ ಸ್ಥಾನದಲ್ಲಿದ್ದಾರೆ.

ಕೇವಲ ನಾಲ್ವರು ಮಹಿಳೆಯರು

ಕೇವಲ ನಾಲ್ವರು ಮಹಿಳೆಯರು

ಸಿರಿವಂತರ ಪಟ್ಟಿಯಲ್ಲಿ ಕೇವಲ ನಾಲ್ವರು ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದಾರೆ. ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ 5.2 ಬಿಲಿಯನ್ ಆಸ್ತಿಯೊಂದಿಗೆ 303ನೇ ಸ್ಥಾನದಲ್ಲಿದೆ. ಗೋಡ್ರೆಜ್ ಕಂಪೆನಿಯ ಸ್ಮಿತಾ ಕೃಷ್ಣಾ 814ನೇ ಸ್ಥಾನದಲ್ಲಿದ್ದರೆ, ಕಿರಣ್ ಮಂಜೂಮ್ದಾರ್ ಶಾ 973, ಲೀನಾ ತೆವಾರಿ 1030ನೇ ಸ್ಥಾನದಲ್ಲಿದ್ದಾರೆ.[ಜಗತ್ತಿನ ಮೊದಲ ಟ್ರಿಲಿಯನೇರ್ ಆಗ್ತಾರಂತೆ ಬಿಲ್ ಗೇಟ್ಸ್!]

ಇತರರು

ಇತರರು

ವಿಪ್ರೊ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ ಜೀ 72, ಅದಾನಿ ಗ್ರೂಪ್ ಸಂಸ್ಥಾಪಕ ಗೌತಮ್ ಅದಾನಿ 250, ಬಜಾಜ್ ಗ್ರೂಪ್ ಅಧ್ಯಕ್ಷ ರಾಹುಲ್ ಬಜಾಜ್ 544, ರಾಕೇಶ್ ಝುಂಝುನ್ವಾಲಾ 939, ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ್ ಮೂರ್ತಿ 1161, ಹಬಿಲ್ ಖೋರಕಿವಾಲಾ 1567, ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ 1567, ನಿರಂಜನ್ ಮತ್ತು ಸುರೇಂದ್ರ ಹಿರನಂದನಿ 1678, ಯಸ್ ಬ್ಯಾಂಕ್ ಮುಖ್ಯಸ್ಥ ರಾಣಾ ಕಪೂರ್ 1795ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ 1.3 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 1567ನೇ ಸ್ಥಾನದಲ್ಲಿದ್ದಾರೆ. ಇನ್ನು 2.5ಬಿ. ಡಾಲರ್ ಆಸ್ತಿಯೊಂದಿಗೆ ಆಚಾರ್ಯ ಬಾಲಕೃಷ್ಣ (ಪತಂಜಲಿಯ ಶೇ. 97 ಶೇರುದಾರ) 814ನೇ ಸ್ಥಾನ ಪಡೆದುಕೊಂಡಿದ್ದಾರೆ.

ಬಿಲ್ ಗೇಟ್ಸ್

ಬಿಲ್ ಗೇಟ್ಸ್

ವಿಶ್ವದ ಸಿರಿವಂತ ಪಟ್ಟಿಯ ನಂಬರ್ ವನ್ ಸ್ಥಾನವನ್ನು ಬಿಲ್ ಗೇಟ್ಸ್ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಸತತ ನಾಲ್ಕನೇ ವರ್ಷಗಳಿಂದ ಅವರು ನಂಬರ್ ವನ್ ಸ್ಥಾನದಲ್ಲಿದ್ದು ಕಳೆದ 23 ವರ್ಷಗಳಲ್ಲಿ 18 ವರ್ಷ ವಿಶ್ವದ ಅತ್ಯಂತ ಸಿರಿವಂತರಾಗಿ ಮೂಡಿ ಬಂದಿದ್ದಾರೆ.

ಅವರ ಬಳಿ 86 ಬಿಲಿಯನ್ ಡಾಲರ್ ಆಸ್ತಿ ಇದೆ. ಕಳೆದ ವರ್ಷ ಗೇಟ್ಸ್ ಬಳಿ 75 ಬಿಲಿಯನ್ ಆಸ್ತಿ ಇತ್ತು.

ಎರಡನೇ ಸ್ಥಾನದಲ್ಲಿ ಬರ್ಕ್'ಶೈರ್ ಹಾಥ್'ವೇ ಸಂಸ್ಥೆಯ ಮುಖ್ಯಸ್ಥ ವಾರನ್ ಬಫೆಟ್ ಇದ್ದು ಅವರ ಆಸ್ತಿ 75.6 ಬಿಲಿಯನ್ ಆಗಿದೆ.

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಟ್ಟಿಯಲ್ಲಿ 514ನೇ ಸ್ಥಾನದಲ್ಲಿದ್ದಾರೆ. ಅವರ ಬಳಿ 3.5 ಬಿಲಿಯನ್ ಡಾಲರ್ ಆಸ್ತಿ ಇದೆ.

72.8 ಬಿ.ಡಾ ಆಸ್ತಿಯೊಂದಿಗೆ ಅಮೆಜಾನ್ ನ ಜೆಫ್ ಬೆಜೋಸ್ 3ನೇ ಸ್ಥಾನದಲ್ಲಿದ್ದಾರೆ. ಫೇಸ್ಬುಕ್ ಸ್ಥಾಪಕ ಮಾರ್ಕ್ ಝುಕರ್ ಬರ್ಗ್ 5ನೇ ಸ್ಥಾನದಲ್ಲಿದ್ದಾರೆ. ಇನ್ನು ಮೆಕ್ಸಿಕೋದ ಕಾರ್ಲೊಸ್ ಸ್ಲಿಮ್ ಆರನೇ ಸ್ಥಾನಕ್ಕೆ ಜಾರಿದ್ದಾರೆ.

ಯಾವ ದೇಶ ಎಷ್ಟು?

ಯಾವ ದೇಶ ಎಷ್ಟು?

ಚೀನಾದಲ್ಲಿ 76 ಜನ ಸಹಸ್ರ ಕೋಟ್ಯಾಧಿಪತಿಗಳಿದ್ದರೆ, ಅಮೆರಿಕಾದಲ್ಲಿ 25 ಜನರಿದ್ದಾರೆ. ಇನ್ನು ಸಿರಿವಂತರಲ್ಲಿ 56 ಜನ 40 ವರ್ಷ ಕೆಳಗಿನವರಾಗಿದ್ದಾರೆ.

ಅಮೆರಿಕಾದ 565, ಚೀನಾದ 319, ಜರ್ಮನಿಯ 114 ಮತ್ತು ಭಾರತದ 101 ಶತ ಕೋಟ್ಯಾಧಿಪತಿಗಳಿದ್ದಾರೆ. ಭಾರತ ಶತ ಕೋಟ್ಯಾಧಿಪತಿಗಳನ್ನು ಹೊಂದಿರುವ ದೇಶಗಳಲ್ಲಿ 4ನೇ ಸ್ಥಾನದಲ್ಲಿದೆ.

English summary
Forbes released its new list of richest persons in the world. India have 101 billionaires and holds the forth position in world’s highest number of billionaires. As usual Reliance Industries chief Mukesh Ambani leading the Indian club.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X