ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪುಷ್ಪಕ ವಿಮಾನ'ದ ಭಿಕ್ಷುಕ ಕಣ್ಮುಂದೆ ಹಾದುಹೋದಾಗ

By Srinath
|
Google Oneindia Kannada News

100-year-old Saudi Arabia richest woman begger Eisha died
ಜೆಡ್ಡಾ, ಮಾರ್ಚ್21- ಸಕಲಕಲಾವಲ್ಲವನ್ ಕಮಲ್ ಹಾಸನ್ ಅಭಿನಯದ ಪುಷ್ಪಕ ವಿಮಾನ ಸಿನಿಮಾ ಗೊತ್ತಲ್ಲಾ. ಅದೇ ವಿಂಡ್ಸರ್ ಮ್ಯಾನರ್ ಹೋಟೆಲ್ ಇರುವ ರಾಜಧಾನಿಯ ಅಂದಿನ ಪ್ರತಿಷ್ಠಿತ ಸ್ಥಳ. ಅಲ್ಲಿ ಭಿಕ್ಷುಕನೊಬ್ಬ ತಟ್ಟೆ, ಗೋಣಿ ತಾಟು ಹಾಸಿಕೊಂಡು ಭಿಕ್ಷೆ ಬೇಡುತ್ತಿರುತ್ತಾನೆ. ಕೊನೆಗೆ, ಅವನು ಸತ್ತಾಗ ಅದೇ ಗೋಣಿ ತಾಟಿನ ಕೆಳಗಡೆಯಿಂದ ನೋಟುಗಳ ಕಂತೆ ಚೆಲ್ಲಾಪಿಲ್ಲಿಯಾಗಿ ಉದುರುತ್ತದೆ. ನಾಯಕ ದೂರದಿಂದ ಅದನ್ನು ನೋಡಿ, ಮೌವವಾಗಿಯೇ ಏನೋ ಹೇಳಲು ಹೆಣಗುತ್ತಾನೆ... ಅದು ಫ್ಲಾಶ್ ಬ್ಯಾಕ್.

ವಾಸ್ತವದಲ್ಲಿ ಅಂತಹ ಘಟನೆಯೊಂದು ನಿಜಜೀವನದಲ್ಲೂ ನಡೆದಿದೆ. ಶ್ರೀಮಂತರೇ ಹೆಚ್ಚಾಗಿರುವ ಸೌದಿ ಅರೇಬಿಯಾ ಗೊತ್ತಲ್ಲಾ. ಅಲ್ಲಿ ಇಂತಹ (ಶ್ರೀಮಂತ) ಭಿಕ್ಷುಕಿಯೊಬ್ಬಳು ಮೊನ್ನೆ ಮೃತಪಟ್ಟಿದ್ದಾಳೆ. ಅದೂ ನೂರು ವರ್ಷದ ಹಣ್ಣು ಹಣ್ಣು ಮುದುಕಿ. ದಶಕಗಳ ಕಾಲ ಬೀದಿಬದಿಗಳಲ್ಲಿ ಭಿಕ್ಷೆ ಎತ್ತುತ್ತಾ ಜೀವನ ದೂಡಿದ ಈ ಮಹಿಳೆ ಮೃತಪಟ್ಟಾಗ ಆಯಮ್ಮ ಹತ್ತು ಲಕ್ಷಕ್ಕೂ ಹೆಚ್ಚು ಡಾಲರ್ ಹಣ ಸಂಪಾದಿಸಿದ್ದು ಬಹಿರಂಗವಾಗಿದೆ! [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಅನಾಥ ಮಹಿಳೆ ಅನಾಥವಾಗಿ ಬಿಟ್ಟು ಹೋಗಿದ್ದು ... ಚಿನ್ನದ ನಾಣ್ಯಗಳು, ಚಿನ್ನಾಭರಣ, ನಾಲ್ಕು ಬಂಗಲೆಗಳು, ಆಸ್ತಿಪಾಸ್ತಿ ದಾಖಲೆಗಳು ಸೇರಿದಂತೆ ಅನಾಥವಾಗಿ ಬದುಕಿದ ಈ ಮಹಿಳೆ ಇದೀಗ ಅನಾಥವಾಗಿ ಬಿಟ್ಟು ಹೋಗಿರುವ ಹಣ ಸರಿಯಾಗಿ USD 10,66,580. ಜೆಡ್ಡಾದ ಬೀದಿಬೀದಿಗಳಲ್ಲಿ ಅರ್ಧ ಶತಮಾನ ಕಾಲ ಭಿಕ್ಷೆ ಎತ್ತಿ ಸಂಪಾದಿಸಿರುವ ಹಣವಿದು. ಅಂದಹಾಗೆ, ಐಶಾ ಹೆಸರಿನ ಈ ಭಿಕ್ಷುಕಿಗೆ ಕಣ್ಣು ಕಾಣುತ್ತಿರಲಿಲ್ಲ.

ಭಿಕ್ಷುಕಿ ಐಶಾಗೆ ಅಮ್ಮ ಮತ್ತು ಸೋದರಿ ಬಿಟ್ಟರೆ ತನ್ನವರು ಅಂತ ಯಾರೂ ಇರಲಿಲ್ಲ ಎಂದು ಐಶಾ ಜತೆ ಬೆಳೆದ ಅಹಮದ್ ಅಲ್ ಸಯೀದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕುತೂಹಲದ ಸಂಗತಿಯೆಂದರೆ ಭಿಕ್ಷುಕಿ ಐಶಾ ಉಯಿಲು ಬರೆದಿಟ್ಟುಹೋಗಿದ್ದಾಳೆ. ಆ ಉಯಿಲನ್ನು ಅಹಮದ್ ಅಲ್ ಸಯೀದ್ ಕೈಗೆ ಭದ್ರವಾಗಿ ನೀಡಿದ್ದು, ತನ್ನಾಸ್ತಿಯನ್ನೆಲ್ಲಾ ಬಡಬಗ್ಗರಿಗೆ ದಾನ ಮಾಡಿಬಿಡು ಎಂದಿದ್ದಾಳೆ.

ತನ್ನ ಅಮ್ಮ ಮತ್ತು ಸೋದರಿ ಸತ್ತು ಹೋದ ಮೇಲೆ ಈ ಭಿಕ್ಷುಕಿ ಐಶಾಳ ಆಸ್ತಿಪಾಸ್ತಿ ಮತ್ತಷ್ಟು ಹೆಚ್ಚಾಯಿತಂತೆ. ಹೇಗೆಂದರೆ ಅಮ್ಮ ಮತ್ತು ಸೋದರಿಯ ಆಸ್ತಿಯೂ ಇದೇ ಐಶಾಳ ಕೈಸೇರಿತಂತೆ.

'ಆಯ್ತು ಇಷ್ಟೆಲ್ಲಾ ದುಡ್ಡಿದೆ. ಇನ್ನೂ ಏಕೆ ಭಿಕ್ಷೆ ಎತ್ತುವೆ. ಬಿಟ್ಬಿಡು' ಎಂದು ಅದೊಮ್ಮೆ ಅವಳಿಗೆ ಬುದ್ದಿ ಹೇಳಿದ್ದೆ. ಆದರೆ ಅವಳೋ... 'ಮುಂದೆ ಎಂತಹ ದುರ್ಭರ ದಿನಗಳು ಬರುತ್ತವೆಯೋ ಯಾರಿಗ್ಗೊತ್ತು, ಮಗಾ? ಅದಕ್ಕೆ ನಾನಂತೂ ಭಿಕ್ಷೆ ಎತ್ತೋದು ಬಿಡೋಲ್ಲ' ಎಂದು ಹೇಳಿದ್ದಾಗಿ ಅಹಮದ್ ಅಲ್ ಸಯೀದ್ ಮಾರ್ಮಿಕವಾಗಿ ನುಡಿದಿದ್ದಳಂತೆ!

English summary
100-year-old Saudi Arabia richest woman begger Eisha died. A 100-year-old woman in Saudi Arabia, who spent decades begging on the streets, has died leaving behind a secret fortune of gold coins, jewellery and a real estate portfolio worth a whopping USD 10,66,580. The blind woman had begged for 50 years on the streets of Jeddah, before she suddenly died at her home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X