ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಮಿಲಿಯನ್ ವರ್ಷಗಳಷ್ಟು ಹಳೆಯ ವೀರ್ಯ ಪತ್ತೆ..!

|
Google Oneindia Kannada News

ಮ್ಯಾನ್ಮಾರ್‌ನಲ್ಲಿ ಪಳಿಯುಳಿಕೆ ಶಾಸ್ತ್ರಜ್ಞರು ಅತ್ಯಂತ ಪುರಾತನವಾದ ಪ್ರಾಣಿಯ ವೀರ್ಯ ಪತ್ತೆಹಚ್ಚಿದ್ದಾರೆ. ಈ ವೀರ್ಯದ ಆಯಸ್ಸು ಸುಮಾರು 100 ಮಿಲಿಯನ್ ಅಂದರೆ 10 ಕೋಟಿ ವರ್ಷ ಎನ್ನಲಾಗುತ್ತಿದೆ. ಸೀಗಡಿ ಜಾತಿಯ ಜಲಚರ(ostracod)ದಲ್ಲಿ ಪುರಾತನ ವೀರ್ಯ ಪತ್ತೆಯಾಗಿದೆ. ಸೀಗಡಿ ಜಾತಿಯ ಹೆಣ್ಣು ಜಲಚರದ ದೇಹದಲ್ಲಿ ವೀರ್ಯದ ಪಳಿಯುಳಿಕೆ ಪತ್ತೆಯಾಗಿರುವುದಾಗಿ ಚೀನಾ ಮೂಲದ ಪಳಿಯುಳಿಕೆ ಶಾಸ್ತ್ರಜ್ಞರು ಮಾಹಿತಿಯನ್ನ ನೀಡಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಅಧ್ಯಯನ ನಡೆಸುವ ಸಂದರ್ಭದಲ್ಲಿ ಮರದ ಅಂಟು ಅಥವಾ ಮರದ ರಾಳದಲ್ಲಿ ಸಿಲುಕಿರುವ ಜೀವಿ ಪತ್ತೆಯಾಗಿತ್ತು. ಈ ಅಂಟನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಿದಾಗ ಶಾಕಿಂಗ್ ಸಂಗತಿ ಬಯಲಾಗಿದೆ. ಈವರೆಗೆ ಸುಮಾರು 17 ಮಿಲಿಯನ್ ವರ್ಷಗಳಷ್ಟು ಹಳೆಯದಾದ ವೀರ್ಯದ ಪಳಿಯುಳಿಕೆ ಪತ್ತೆಹಚ್ಚಿದ್ದೇ ಸಾಧನೆಯಾಗಿತ್ತು.

'ಕಣ್ಣಿಗೆ ಕಂಡವರನ್ನೆಲ್ಲಾ ಕೊಲೆ ಮಾಡಿ’: ಹೇಗಿತ್ತು ರೊಹಿಂಗ್ಯಾ ಹತ್ಯಾಕಾಂಡ..?'ಕಣ್ಣಿಗೆ ಕಂಡವರನ್ನೆಲ್ಲಾ ಕೊಲೆ ಮಾಡಿ’: ಹೇಗಿತ್ತು ರೊಹಿಂಗ್ಯಾ ಹತ್ಯಾಕಾಂಡ..?

ಆದರೆ ಇದೀಗ ಸುಮಾರು 100 ಮಿಲಿಯನ್ ವರ್ಷಗಳಷ್ಟು ಪುರಾತನವಾದ ವೀರ್ಯ ಪತ್ತೆಯಾಗಿದೆ. ಸೀಗಡಿ ಜಾತಿಯ ಜಲಚರಗಳು ಭೂಮಿ ಮೇಲೆ 500 ಮಿಲಿಯನ್ ವರ್ಷಗಳಿಂದ ವಾಸ ಇವೆ. ಈಗ ಪತ್ತೆಯಾಗಿರುವ ವೀರ್ಯ ಕೂಡ ಸೀಗಡಿ ಜಾತಿಯ ಜಲಚರದ ದೇಹದಲ್ಲಿ ಸಿಕ್ಕಿದೆ. ಈ ಹೆಣ್ಣು ಜಲಚರ ಗಂಡಿನ ಜೊತೆಗಿನ ಮಿಲನದ ಕೆಲವೇ ಕ್ಷಣಗಳಲ್ಲಿ ಮರದ ಅಂಟಿನಲ್ಲಿ ಸಿಲುಕಿ ಮೃತಪಟ್ಟಿದೆ. ಹೀಗಾಗಿ ಸೀಗಡಿ ಜಾತಿ ಗಂಡು ಜಲಚರದ ವೀರ್ಯ ಪಳಿಯುಳಿಕೆಯಲ್ಲಿ ಸಿಕ್ಕಿದೆ ಎಂದಿದ್ದಾರೆ ಸಂಶೋಧಕರು.

100 Million Years Old Sperm Has Been Found In Myanmar

ಭೂಮಿಯ ಇತಿಹಾಸ ಅರಿಯಲು ಸಾಧ್ಯ

ಈಗಿನ ಸಂಶೋಧನೆ ಜಲಚರಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರಹಾಕಿದೆ. ಭೂಮಿ ಮೇಲೆ ಮೊದಲು ಜನ್ಮತಾಳಿದ್ದು ಏಕಕೋಶ ಜೀವಿಗಳು, ಇದರ ನಂತರ ಜಲಚರಗಳೇ ಈ ಭೂಮಿಯನ್ನು ಬಹುವರ್ಷಗಳ ಕಾಲ ಆಳಿದ್ದವು. ಆದರೆ ಭೂಮಿ ಮೇಲೆ ನೀರು ಕ್ರಮೇಣ ಕಡಿಮೆಯಾದ ಕಾರಣ ಅಥವಾ ವಿಕಸನದ ಪರಿಣಾಮ ಜಲಚರಗಳು ಭೂಮಿ ಮೇಲೆ ಬಂದು ನೆಲೆಸಲು ರೂಢಿಸಿಕೊಂಡವು ಎಂಬ ವಾದ ವಿಜ್ಞಾನಿಗಳದ್ದಾಗಿದೆ. ಎಲ್ಲಾ ವಾದ-ಪ್ರತಿವಾದಗಳಿಗೆ ಈಗ ಸಿಕ್ಕಿರುವ ಅತ್ಯಂತ ಪುರಾತನ ವೀರ್ಯದ ಪಳಿಯುಳಿಕೆ ಉತ್ತರ ನೀಡಬಲ್ಲದು.

ಈಗಲೂ ಕಾಣಬಹುದು ಈ ಜೀವಿಯನ್ನು..!

ಅಂದಹಾಗೆ ವಿಜ್ಞಾನಿಗಳಿಗೆ ವೀರ್ಯದ ಪಳಿಯುಳಿಕೆ ಸಿಕ್ಕಿರುವ ಸೀಗಡಿ ಜಾತಿಯ ಜಲಚರಗಳನ್ನು ನಾವು ಈಗಲೂ ಭೂಮಿ ಮೇಲೆ ಕಾಣಬಹುದು. ಈ ಜೀವಿಗಳು ದಪ್ಪ ಚರ್ಮ ಅಥವಾ ಒರಟು ಚರ್ಮವನ್ನು ಹೊಂದಿವೆ. ಸುಮಾರು 500 ಮಿಲಿಯನ್ ವರ್ಷದಿಂದ ಭೂಮಿಯ ಮೇಲೆ ಬದುಕಿ ಉಳಿದಿವೆ. ವಿಶೇಷ ಎಂದರೆ ಈ ಜಾತಿಯ ಜಲಚರಗಳ ವೀರ್ಯ ಅವುಗಳ ದೇಹಕ್ಕಿಂತಲೂ ದೊಡ್ಡದಾಗಿ ಇರುತ್ತದೆ. ಭೂಮಿ ಮೇಲೆ ಅನೇಕ ಸಂದರ್ಭದಲ್ಲಿ ವಿಪತ್ತು ಸಂಭವಿಸಿದರೂ ಇವು ಬದುಕುಳಿದಿವೆ. ಹೀಗಾಗಿ ಈ ಜಾತಿಯ ಜಲಚರಗಳ ಕುರಿತು ವಿಜ್ಞಾನಿಗಳಿಗೆ ಮೊದಲಿನಿಂದಲೂ ಕುತೂಹಲವಿತ್ತು. ಹೀಗಾಗಿ ಸದ್ಯದ ಸಂಶೋಧನೆ ವಿಜ್ಞಾನಿಗಳ ಕುತೂಹಲದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ.

English summary
100 million years old sperm has been found in Myanmar. The sperm were found inside an ostracod, a kind of crustacean that has existed for 500 million years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X