• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಲೂಚಿಸ್ತಾನದಲ್ಲಿ ಉಗ್ರರ ದಾಳಿ: 10 ಪಾಕ್ ಸೈನಿಕರು ಸಾವು

|
Google Oneindia Kannada News

ಬಲೂಚಿಸ್ತಾನ, ಜನವರಿ 28: ಪಾಕಿಸ್ತಾನದ ಬಲೂಚಿಸ್ತಾನದ ಪ್ರಾಂತ್ಯದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ 10 ಯೋಧರು ಮೃತಪಟ್ಟಿದ್ದಾರೆ.

ಪಾಕಿಸ್ತಾನದ ಪ್ರಕ್ಯುಬ್ಧ ನೈಋತ್ಯ ಪ್ರಾಂತ್ಯದ ಕಚ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಚೆಕ್‌ಪೋಸ್ಟ್‌ ಮೇಲೆ ಉಗ್ರರು ದಾಳಿ ನಡೆಸಿದ್ದರು, ಈ ದಾಳಿಯಲ್ಲಿ 10 ಪಾಕ್ ಯೋಧರು ಸಾವನ್ನಪ್ಪಿದ್ದಾರೆ.

ಭಾರತ ವಿರೋಧಿ ಪ್ರಚಾರ: ಪಾಕ್ ಮೂಲದ ವೆಬ್‌ಸೈಟ್‌ಗಳ ಮೇಲೆ ನಿರ್ಬಂಧಭಾರತ ವಿರೋಧಿ ಪ್ರಚಾರ: ಪಾಕ್ ಮೂಲದ ವೆಬ್‌ಸೈಟ್‌ಗಳ ಮೇಲೆ ನಿರ್ಬಂಧ

ಘಟನೆಯಲ್ಲಿ ಓರ್ವ ಉಗ್ರರನ್ನು ಹತ್ಯೆಗೈಯಲಾಗಿದೆ, ಜನವರಿ 26ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್‌ನಲ್ಲಿ ತಿಳಿಸಲಾಗಿದೆ.

ಇರಾನ್ ಹಾಗೂ ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನದಲ್ಲಿ ದೀರ್ಘಕಾಲದಿಂದ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಗುರಿಯಾಗಿಸಿಕೊಂಡು ಬಂಡಾಯ ಗುಂಪುಗಳು ಹಲವು ದಾಳಿಗಳನ್ನು ನಡೆಸಿದ್ದವು.

ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಬಂಧಿಸಲಾಗಿದೆ, ಈವರೆಗೆ ಯಾವುದೇ ಉಗ್ರ ಸಂಘಟನೆಯ ದಾಳಿ ಹಿಂದಿನ ಹೊಣೆ ಹೊತ್ತಿಲ್ಲ ಎಂಬುದು ತಿಳಿದುಬಂದಿದೆ.

2020ರಲ್ಲಿ ಇಂಥದ್ದೇ ಘಟನೆ ನಡೆದಿತ್ತು: ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ವಾಜಿರಿಸ್ತಾನದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆದಿದ್ದು, ಇದರಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದರು. ಬಲೂಚಿಸ್ತಾನದ ಒರ್ಮರಾದಲ್ಲಿರುವ ಸ್ಟೇಟ್ ಆಯಿಲ್ ಅಂಡ್ ಗ್ಯಾಸ್ ಡೆವಲಪ್ಮೆಂಟ್ ಕಂಪನಿ ಲಿಮಿಟೆಡ್ (ಒಜಿಡಿಸಿಎಲ್) ನ ಬೆಂಗಾವಲು ಮೇಲೆ ದಾಳಿ ನಡೆದಿದ್ದು ಇದರಲ್ಲಿ 15 ಜನರು ಸಾವನ್ನಪ್ಪಿದ್ದರು.

ಅದೇ ಸಮಯದಲ್ಲಿ ಉತ್ತರ ವಾಜಿರಿಸ್ತಾನದಲ್ಲಿ ನಡೆದ ಎರಡನೇ ದಾಳಿಯಲ್ಲಿ ಕನಿಷ್ಠ ಆರು ಸೈನಿಕರು ಮೃತಪಟ್ಟಿದ್ದರು.

ಬಲೂಚಿಸ್ತಾನ್ ದಾಳಿಯಲ್ಲಿ ತೈಲ ಮತ್ತು ಅನಿಲ ಅಭಿವೃದ್ಧಿ ಕಂಪನಿಯ ಏಳು ಉದ್ಯೋಗಿಗಳು ಮತ್ತು ಪಾಕಿಸ್ತಾನ ಗಡಿನಾಡು ಪಡೆಗಳ ಎಂಟು ಸೈನಿಕರು ಸಾವನ್ನಪ್ಪಿದ್ದರು ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದರು.

ಆರಂಭದಲ್ಲಿ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ ಈ ದಾಳಿಯನ್ನು ನಡೆಸಿದೆ ಎಂದು ಹೇಳಲಾಗಿತ್ತು, ಆದರೆ ನಂತರ ಹೊಸ ಉಗ್ರ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.

ಪಾಕಿಸ್ತಾನದ ಪ್ರಕ್ಷುಬ್ಧ ವಾಯುವ್ಯ ಬುಡಕಟ್ಟು ಪ್ರದೇಶವಾದ ಉತ್ತರ ವಾಜಿರಿಸ್ತಾನದಲ್ಲಿ ಭಯೋತ್ಪಾದಕರು ಮಿಲಿಟರಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿ ಬಾಂಬ್ ಸ್ಫೋಟ ನಡೆಸಿದ್ದರು. ಈ ದಾಳಿಯಲ್ಲಿ ಅಧಿಕಾರಿ ಸೇರಿದಂತೆ ಕನಿಷ್ಠ ಆರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರು.

ಉತ್ತರ ವಾಜಿರಿಸ್ತಾನದ ರಾಜಮಕ್ ಪ್ರದೇಶದ ಬಳಿ ಮಿಲಿಟರಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿ ಭಯೋತ್ಪಾದಕರು ಐಇಡಿ (IED)ಯನ್ನು ಸ್ಫೋಟಿಸಿದ್ದಾರೆ ಎಂದು ಪಾಕಿಸ್ತಾನ ಸೇನೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದಾಳಿಯಲ್ಲಿ ಓರ್ವ ಕ್ಯಾಪ್ಟನ್ ಮತ್ತು ಇತರ ಐದು ಸೈನಿಕರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು.

   Russia Ukraine ಸಂಘರ್ಷದಿಂದ ಭಾರತಕ್ಕಿರುವ ಅಪಾಯವೇನು? | Oneindia Kannada
   English summary
   Ten Pakistani soldiers were killed when terrorists attacked a security forces' checkpost in Kech district of the restive southwestern Balochistan province, the army said on Thursday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion