ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ದೇಶದಲ್ಲಿ 1 ಕೋಟಿ ಮಂದಿಗೆ ದಿನಕ್ಕೆ ಒಂದೇ ಹೊತ್ತು ಊಟ!

|
Google Oneindia Kannada News

ಖರ್ತೌಮ್, ಜುಲೈ.28: ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತು ಬೆಲೆ ಏರಿಕೆ ಹೊಡೆತಕ್ಕೆ ಸಿಲುಕಿರುವ ಸುಡಾನ್ ಜನರು ತುತ್ತು ಅನ್ನಕ್ಕಾಗಿ ಪರಿತಪಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಜನಸಂಖ್ಯೆಯ ಶೇ.30ರಷ್ಟು ಪ್ರಜೆಗಳು ಆಹಾರ ಕೊರತೆ ಸಮಸ್ಯೆ ಎದುರಿಸುತ್ತಿದ್ದಾರೆ.

Recommended Video

Indian Spy Satellite EMISAT Passes Over Tibet To Observe Chinese Army | Oneindia Kannada

ಸುಡಾನ್ ನಲ್ಲಿ 9.6 ಮಿಲಿಯನ್ ಪ್ರಜೆಗಳಿಗೆ ಆಹಾರ ಪೂರೈಕೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಹಾರ ಸಾಮಗ್ರಿ ಪೂರೈಕೆಯಲ್ಲಿ ಕೊರತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಸಮೀಕ್ಷೆ ವರದಿ: ಸದ್ದಿಲ್ಲದೆ ಸಾಯಿಸುತ್ತಿದೆ ಮತ್ತೊಂದು ವೈರಸ್..!ಸಮೀಕ್ಷೆ ವರದಿ: ಸದ್ದಿಲ್ಲದೆ ಸಾಯಿಸುತ್ತಿದೆ ಮತ್ತೊಂದು ವೈರಸ್..!

ದಕ್ಷಿಣ ಕೊರ್ಡೊಫಾನ್ ಮತ್ತು ಬ್ಲೂನೇಲ್ ರಾಜ್ಯಗಳಲ್ಲಿ ಅತಿಹೆಚ್ಚು ಆಹಾರ ಸಮಸ್ಯೆ ಎದುರಾಗಿದ್ದು, ಸುಡಾನ್ ರಾಜಧಾನಿ ಖರ್ತೌಮ್ ಸೇರಿದಂತೆ ಒಟ್ಟು 18 ರಾಜ್ಯಗಳಲ್ಲಿ ಆಹಾರ ಸಾಮಗ್ರಿಗಳು ಸಿಗದೇ ಜನರು ಪರದಾಡುವಂತಾಗಿದೆ. ಕೊರೊನಾವೈರಸ್ ಸೋಂಕು ಮತ್ತು ಆಹಾರ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ದೇಶದ ಬಹುತೇಕ ಜನರಿಗೆ ಸಪ್ಟೆಂಬರ್ ಅಂತ್ಯದವರೆಗೂ ಅಗತ್ಯವಾಗಿ ಆಹಾರ ಪೂರೈಸಬೇಕಿದೆ.

ವಿಶ್ವಸಂಸ್ಥೆ ಅಧಿಕಾರಿಗಳಿಂದ ಆಹಾರ ಅಭದ್ರತೆ ಎಚ್ಚರಿಕೆ

ವಿಶ್ವಸಂಸ್ಥೆ ಅಧಿಕಾರಿಗಳಿಂದ ಆಹಾರ ಅಭದ್ರತೆ ಎಚ್ಚರಿಕೆ

ಸುಡಾನ್ ನಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಜನರು ದೀರ್ಘಕಾಲದ ಆಹಾರ ಅಭದ್ರತೆ ಮತ್ತು ಬಡತನಕ್ಕೆ ತುತ್ತಾಗುತ್ತಾರೆ. ಭವಿಷ್ಯದಲ್ಲಿ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಸುಡಾನ್ ನಲ್ಲಿರುವ ವಿಶ್ವಸಂಸ್ಥೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಪ್ರಸ್ತುತ ವ್ಯಾಪಕವಾದ ಆಹಾರ ಅಭದ್ರತೆ, ಆರ್ಥಿಕ ಕುಸಿತ ಮತ್ತು ಹಣದುಬ್ಬರದ ಸಂಘರ್ಷದಿಂದಾಗಿ ಜನರ ಕೊಳ್ಳುವ ಶಕ್ತಿಯನ್ನು ಕಡಿಮೆಗೊಳಿಸುತ್ತಿದೆ ಎಂದು ವಿಶ್ವ ಆಹಾರ ಯೋಜನೆಯ ಸಂಪರ್ಕ ಅಧಿಕಾರಿ ವೂ ಜಂಗ್ ಕಿಮ್ ಎಚ್ಚರಿಕೆ ನೀಡಿದ್ದಾರೆ.

ವೀಸಾ ಪಡೆಯುವುದಕ್ಕೆ ಪರದಾಡುತ್ತಿರುವ ಪ್ರಜೆಗಳು

ವೀಸಾ ಪಡೆಯುವುದಕ್ಕೆ ಪರದಾಡುತ್ತಿರುವ ಪ್ರಜೆಗಳು

ಕೊರೊನಾವೈರಸ್ ನಿರ್ಬಂಧ ಮತ್ತು ಅಸ್ಥಿರತೆಯಿಂದಾಗಿ ದುರ್ಬಲತೆಯನ್ನು ತಲುಪಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯು ಎಚ್ಚರಿಕೆ ನೀಡಿದೆ. ಸುಡಾನ್ ದೇಶದೊಳಗೆ ಪ್ರಯಾಣಿಸಲು ವೀಸಾ ಅಥವಾ ಸರ್ಕಾರದಿಂದ ಅನುಮತಿ ಪಡೆಯುವುದು ಕಷ್ಟಕರವಾಗಿದೆ ಎಂದು ತಿಳಿಸಿದೆ.

ಕೆಲಸದ ಅವಧಿ ಕಡಿತಗೊಳಿಸಿದ ಆಹಾರ ಖರೀದಿ

ಕೆಲಸದ ಅವಧಿ ಕಡಿತಗೊಳಿಸಿದ ಆಹಾರ ಖರೀದಿ

ಕೊರೊನಾವೈರಸ್ ಸೋಂಕು ಹರಡುವಿಕೆಯಿಂದಾಗಿ ಅಭದ್ರತೆಯ ಆತಂಕ ಎದುರಾಗಿದೆ. ಇದರಿಂದಾಗಿ ದಕ್ಷಿಣ ಕೊರ್ಡೊಫಾನ್ ನ ಹಜರ್ ಎಲ್-ಟೈರ್ ಗ್ರಾಮ ಟೀ ಅಂಗಡಿ ಇಟ್ಟುಕೊಂಡಿರುವ ಬುಥೈನಾ ಎಲ್-ನೂರ್ ಎಂಬ ಮಹಿಳೆಯ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಆಹಾರ ಖರೀದಿಸುವುದಕ್ಕಾಗಿ ತಮ್ಮ ಕೆಲಸದ ಅವಧಿಯನ್ನು ಕಡಿತಗೊಳಿಸಿರುವುದಾಗಿ ತಿಳಿಸಿದ್ದಾರೆ. ಶಸ್ತ್ರಸಜ್ಜಿತ ವ್ಯಕ್ತಿಗಳು ನಿಮ್ಮನ್ನು ದರೋಡೆ ಮಾಡಿ ಕೊಲ್ಲುವ ಕಾರಣ ನಾನು ಮಾರುಕಟ್ಟೆಯಲ್ಲಿ ಹೆಚ್ಚು ಹೊತ್ತು ಇರಲು ಸಾಧ್ಯವಿಲ್ಲ. ನನಗೆ ತಿಳಿದ ಮಟ್ಟಿಗೆ ಇಲ್ಲಿನ ಜನರು ದಿನಕ್ಕೆ ಒಂದು ಬಾರಿ ಊಟ ಮಾಡುವುದೇ ಹೆಚ್ಚು ಎನ್ನುವಂತಾಗಿದೆ. ನಮ್ಮನ್ನು ಜೀವಂತವಾಗಿ ಉಳಿಸಿರುವುದಕ್ಕೆ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮಹಿಳೆಯು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಸುಡಾನ್ ನಲ್ಲಿ ಹೇಗಿದೆ ಕೊವಿಡ್-19 ಅಂಕಿ-ಸಂಖ್ಯೆ?

ಸುಡಾನ್ ನಲ್ಲಿ ಹೇಗಿದೆ ಕೊವಿಡ್-19 ಅಂಕಿ-ಸಂಖ್ಯೆ?

ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣವು ಸುಡಾನ್ ನಲ್ಲೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ದೇಶದಲ್ಲಿ ಇದುವರೆಗೂ 11424 ಸೋಂಕಿತ ಪ್ರಕರಣಗಳ ಪತ್ತೆಯಾಗಿದ್ದು, 720ಕ್ಕೂ ಹೆಚ್ಚು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. 5939 ಸೋಂಕಿತರು ಗುಣಮುಖರಾಗಿದ್ದು, 4765 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

English summary
10 Million In Sudan Facing Food Crisis In Recent History. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X