ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಬರುವವರಿಗೆ 10 ದಿನ ಕಡ್ಡಾಯ ಕ್ವಾರಂಟೈನ್ ವಿಧಿಸಿದ ಇಟಲಿ

|
Google Oneindia Kannada News

ಇಟಲಿ, ಏಪ್ರಿಲ್ 29: ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ಇಟಲಿ ಹತ್ತು ದಿನಗಳ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದೆ.

ಭಾರತದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಹಲವು ದೇಶಗಳು ಭಾರತದಿಂದ ಆಗಮಿಸುವ ವಿಮಾನಗಳಿಗೆ ನಿರ್ಬಂಧ ಹೇರಿದ್ದವು. ತಾತ್ಕಾಲಿಕವಾಗಿ ಭಾರತದ ವಿಮಾನಯಾನಕ್ಕೆ ತಡೆ ನೀಡಿದ್ದವು. ಇದೀಗ ಇಟಲಿ ಕೂಡ ಭಾರತದಿಂದ ಬರುವ ಪ್ರಯಾಣಿಕರಿಗೆ ಹತ್ತು ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದೆ.

ಭಾರತದ ಪ್ರಯಾಣಿಕ ವಿಮಾನಗಳಿಗೆ ಆಸ್ಟ್ರೇಲಿಯಾದಿಂದ ತಾತ್ಕಾಲಿಕ ನಿರ್ಬಂಧ ಭಾರತದ ಪ್ರಯಾಣಿಕ ವಿಮಾನಗಳಿಗೆ ಆಸ್ಟ್ರೇಲಿಯಾದಿಂದ ತಾತ್ಕಾಲಿಕ ನಿರ್ಬಂಧ

ವಿಮಾನದಿಂದ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿಯೇ ಪರೀಕ್ಷೆ ನಡೆಸಲಾಗುತ್ತಿದ್ದು, ಪಾಸಿಟಿವ್ ಬಂದರೆ ಅಲ್ಲಿನ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಗುತ್ತಿದೆ.

10 Days Quaratine For Passengers From India In Italy

ಬುಧವಾರ ನವದೆಹಲಿಯಿಂದ ರೋಮ್‌ಗೆ 210 ಮಂದಿ ಪ್ರಯಾಣಿಸಿದ್ದು, ಎಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಕೊರೊನಾ ಅಲೆ ದೇಶದಲ್ಲಿ ಜೋರಾಗಿದ್ದು, ಹಲವು ದೇಶಗಳು ಭಾರತದಿಂದ ವಿಮಾನ ಪ್ರಯಾಣವನ್ನು ರದ್ದುಗೊಳಿಸಿವೆ. ಭಾರತದಿಂದ ಹಿಂದಿರುಗಿದವರಿಗೆ ಫ್ರಾನ್ಸ್‌ ಹತ್ತು ದಿನಗಳ ನಿರ್ಬಂಧ ಹೇರಿದೆ. ಈಚೆಗೆ ಬ್ರಿಟನ್, ಮುಂಜಾಗ್ರತಾ ಕ್ರಮವಾಗಿ ಭಾರತವನ್ನು "ಕೆಂಪು ಪಟ್ಟಿ"ಗೆ ಸೇರಿಸಿ ವಿಮಾನ ಓಡಾಟವನ್ನು ನಿಷೇಧಿಸಿದೆ. ಹಾಂಗ್‌ಕಾಂಗ್ ಕೂಡ ಮಂಗಳವಾರ ಭಾರತದಿಂದ ಬರುವ ವಿಮಾನಗಳಿಗೆ 14 ದಿನಗಳ ಕಾಲ ನಿರ್ಬಂಧ ಹೇರಿದೆ.

ನೆದರ್ ಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ತಾತ್ಕಾಲಿಕವಾಗಿ ಭಾರತದಿಂದ ಬರುವ ವಿಮಾನಗಳಿಗೆ ಬ್ರೇಕ್ ಹಾಕಿದೆ.

ಭಾರತದಲ್ಲಿ ಗುರುವಾರ 3,79,257 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 3645 ಮಂದಿ ಸಾವನ್ನಪ್ಪಿದ್ದಾರೆ, 2,69,507 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 1,83,76,524 ಕೊರೊನಾ ಸೋಂಕಿತರಿದ್ದಾರೆ, ಇದುವರೆಗೆ 1,50,86,878 ಮಂದಿ ಗುಣಮುಖರಾಗಿದ್ದಾರೆ. 30,84,814 ಪ್ರಕರಣಗಳು ಸಕ್ರಿಯವಾಗಿವೆ.

English summary
Due to coronavirus cases surge in india, Passengers from India to quarantine for 10 days, says Italy,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X