ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ಏರ್‌ಪೋರ್ಟ್ ಬಳಿ ಅಮೆರಿಕ ಡ್ರೋನ್ ದಾಳಿ 10 ಮಂದಿ ಸಾವು

|
Google Oneindia Kannada News

ಕಾಬೂಲ್, ಆಗಸ್ಟ್ 30: ಕಾಬೂಲ್ ಏರ್‌ಪೋರ್ಟ್ ಬಳಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಮಕ್ಕಳು ಸೇರಿ ಕನಿಷ್ಠ 10 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಆಫ್ಘಾನಿಸ್ತಾನದಲ್ಲಿ ಕಾಬೂಲ್ ಮೇಲೆ ಅಮೆರಿಕ ಸೇನಾಪಡೆಗಳು ನಡೆಸಿದ ಡ್ರೋನ್ ದಾಳಿಯಲ್ಲಿ ಹಲವು ಮಕ್ಕಳು ಸೇರಿದಂತೆ ಭಾರಿ ಸಂಖ್ಯೆಯ ಆಫ್ಘಾನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ತಾಲಿಬಾನ್ ವಿಚಾರ: ಚೀನಾ ಅಮೆರಿಕಕ್ಕೆ ನೀಡಿದ ಸಲಹೆ ಏನು?ತಾಲಿಬಾನ್ ವಿಚಾರ: ಚೀನಾ ಅಮೆರಿಕಕ್ಕೆ ನೀಡಿದ ಸಲಹೆ ಏನು?

ಇನ್ನೂ, ದೇಶದ ರಾಜಧಾನಿಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಿದ್ದ ಶಂಕಿತ ಆತ್ಮಾಹುತಿ ದಾಳಿಕೋರ ಕೂಡಾ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.

10 Civilians, Including Children, Reported Killed In America Drone Strike In Kabul

ಕಾಬೂಲಿನ ವಸತಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಒಂದು ವಾಹನವನ್ನು ಗುರಿಯಾಗಿರಿಸಿ ನಡೆಸಿದ ದಾಳಿಯಲ್ಲಿ ಒಂದೇ ಕುಟುಂಬದ ಆರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ನಾಗರಿಕರು ಮತ್ತು ಸ್ಥಳೀಯ ಪತ್ರಕರ್ತರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಘಟನೆಯಲ್ಲಿ ಜೀವ ಕಳೆದುಕೊಂಡವರಲ್ಲಿ ಎರಡು ವರ್ಷದ ಹೆಣ್ಣು ಮಗು ಕೂಡಾ ಸೇರಿದೆ ಎಂದು ವರದಿ ತಿಳಿಸಿದೆ.

ಈ ವಾಯುದಾಳಿಯಲ್ಲಿ ನಾಗರಿಕರು ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಮಾಯಕ ಜೀವಗಳು ಬಲಿಯಾಗಿದ್ದರೆ ತೀವ್ರ ಬೇಸರದ ಸಂಗತಿ ಎಂದು ಅಮೆರಿಕಾ ಸ್ಪಷ್ಟಪಡಿಸಿದೆ.

ಮತ್ತೊಂದೆಡೆ, ನೀರು ತಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಐದಾರು ಮಂದಿ ಮೃತಪಟ್ಟಿದ್ದನ್ನು ನಾನು ನೋಡಿದ್ದೇನೆ. ಒಂದು ಕುಟುಂಬದಲ್ಲಿ ತಂದೆ, ಬಾಲಕ ಮತ್ತು ಇತರ ಇಬ್ಬರು ಮಕ್ಕಳು ಮೃತಪಟ್ಟರು. ಅವರ ದೇಹ ಚೂರುಚೂರಾಗಿ ಬಿದ್ದಿತ್ತು. ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ನಿವಾಸಿ ಅಹ್ಮದ್ ಹೇಳಿದ್ದಾಗಿ ವರದಿ ಮಾಡಿದೆ.

ನಿನ್ನೆ ನಡೆದ ಡ್ರೋನ್ ದಾಳಿಯಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾಗಿ ಅಫ್ಘಾನ್ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಮಾಹಿತಿಯ ಪ್ರಕಾರ, ಆಗಸ್ಟ್ 29ರಂದು ಕಾಬೂಲ್ ವಿಮಾನ ನಿಲ್ದಾಣದ ಉತ್ತರ ದ್ವಾರದ ಬಳಿ ಈ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವುದು ದೃಢಪಟ್ಟಿದೆ. ದಾಳಿಯಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಹಾನಿಯನ್ನು ಅಂದಾಜಿಸಲು ಸಾಧ್ಯವಾಗಿಲ್ಲ.

ಆದರೆ ಈ ಆತ್ಮಾಹುತಿ ದಾಳಿಯಿಂದ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ವಿಶೇಷವೆಂದರೆ, ಭಾನುವಾರ ಬೆಳಗ್ಗೆಯೇ, ಅಮೆರಿಕವು ಕಾಬೂಲ್ ವಿಮಾನ ನಿಲ್ದಾಣದ ಬಳಿ ಭಯೋತ್ಪಾದಕ ದಾಳಿಯ ಎಚ್ಚರಿಕೆಯನ್ನು ನೀಡಿತ್ತು ಮತ್ತು ವಿಮಾನ ನಿಲ್ದಾಣದ ಗೇಟ್ ಅನ್ನು ಉಲ್ಲೇಖಿಸಿತ್ತು ಮತ್ತು ಇದೀಗ ವಿಮಾನ ನಿಲ್ದಾಣದ ಅದೇ ಉತ್ತರ ದ್ವಾರದ ಬಳಿ ಈ ದಾಳಿ ನಡೆದಿದೆ.

ಬೆಳಗ್ಗೆ ಕಾಬೂಲ್ ವಿಮಾನ ನಿಲ್ದಾಣದ ಬಳಿ ಮತ್ತೊಂದು ಭಯೋತ್ಪಾದಕ ದಾಳಿಯ ನಡೆಯುವ ಕುರಿತು ಅಮೆರಿಕ ಎಚ್ಚರಿಕೆಯನ್ನು ನೀಡಿತ್ತು. ಅಮೆರಿಕದ ನಾಗರಿಕರು ಈ ಸಮಯದಲ್ಲಿ ವಿಮಾನ ನಿಲ್ದಾಣ ಮತ್ತು ಅದರ ಎಲ್ಲಾ ದ್ವಾರಗಳ ಕಡೆಗೆ ಹೋಗುವುದನ್ನು ತಪ್ಪಿಸಬೇಕು ಎಂದು ಯುಎಸ್ ರಾಜ್ಯ ಇಲಾಖೆ ಗುಪ್ತಚರ ವರದಿಯ ಆಧಾರದ ಮೇಲೆ ಎಚ್ಚರಿಕೆ ನೀಡಿತ್ತು.

ಈ ಎಚ್ಚರಿಕೆ ವರದಿ ನಿರ್ದಿಷ್ಟವಾಗಿ ದಕ್ಷಿಣ (ಏರ್ಪೋರ್ಟ್ ಸರ್ಕಲ್) ಗೇಟ್ ಮತ್ತು ವಿಮಾನ ನಿಲ್ದಾಣದ ವಾಯುವ್ಯ ಭಾಗದಲ್ಲಿರುವ ಪಂಜಶೀರ್ ಪೆಟ್ರೋಲ್ ಸ್ಟೇಷನ್ ಬಳಿಯ ಗೇಟ್ ಅನ್ನು ಉಲ್ಲೇಖಿಸುತ್ತದೆ.

ಅಮೆರಿಕ ಇದೀಗ ಪ್ರತಿ ದಾಳಿ ನಡೆಸಿದ್ದು ಆ ಸಂದರ್ಭದಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್ ಬಗ್ಗೆ ಚೀನಾ ಅಮೆರಿಕಕ್ಕೆ ಸಲಹೆ ನೀಡಿದೆ.

ಸುಮಾರು 20 ವರ್ಷಗಳ ಕಾಲ ಆಫ್ಘಾನಿಸ್ತಾನವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಅಮೆರಿಕಗೆ ಚೀನಾ ಸರ್ಕಾರ ಸಲಹೆ ನೀಡಿದ್ದು, ಅಲ್ಲಿನ ಮೂಲಭೂತ ಬದಲಾವಣೆಯನ್ನು ನೀವು ಒಪ್ಪಿಕೊಂಡು ತಾಲಿಬಾನ್‌ಗೆ ಉತ್ತಮ ಮಾರ್ಗದರ್ಶನ ನೀಡುವಂತೆ ಹೇಳಿದೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಮಾತನಾಡಿದ್ದು, ಈ ವೇಳೆ ಸಾಕಷ್ಟು ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಪ್ರಮುಖವಾಗಿ ಉಭಯ ನಾಯಕರು ಆಫ್ಘಾನಿಸ್ತಾನದಲ್ಲಿನ ಹಾಲಿ ಪರಿಸ್ಥಿತಿ ಕುರಿತು ಚರ್ಚೆ ಮಾಡಿದ್ದು, ಈ ಬಗ್ಗೆ ವಾಂಗ್ ಯಿ, ಬ್ಲಿಂಕೆನ್ ಅವರಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಅಫ್ಘಾನಿಸ್ತಾನ ಯುದ್ಧವು ಎಂದಿಗೂ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಶಕ್ತಿಗಳನ್ನು ತೊಡೆದುಹಾಕುವ ಗುರಿಯನ್ನು ಸಾಧಿಸಲಿಲ್ಲ. ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನು ತ್ವರಿತವಾಗಿ ಹಿಂತೆಗೆದುಕೊಳ್ಳುವುದು ಅಫ್ಘಾನಿಸ್ತಾನದ ವಿವಿಧ ಭಯೋತ್ಪಾದಕ ಗುಂಪುಗಳ ಮರುಸಂಗ್ರಹಣೆಗೆ ಅವಕಾಶವನ್ನು ಒದಗಿಸುವ ಸಾಧ್ಯತೆಯಿದೆ.

English summary
A U.S. drone strike targeting the Islamic State killed 10 civilians in Kabul, including several small children, family members told The Washington Post on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X