• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದ 10 ಗೂಢಾಚಾರಿಗಳನ್ನು ಸುಲಭವಾಗಿ ಸ್ವದೇಶಕ್ಕೆ ಹಾರಿಬಿಟ್ಟ ಅಫ್ಘಾನಿಸ್ತಾನ!

|
Google Oneindia Kannada News

ಕಾಬೂಲ್, ಜನವರಿ 04: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಭಯೋತ್ಪಾದಕ ಸಂಘಟನೆ ನಿಯಂತ್ರಿಸುತ್ತಿದ್ದ 10 ಚೀನೀ ಪ್ರಜೆಗಳನ್ನು ಚೀನಾಕ್ಕೆ ಹೋಗಲು ಅಫ್ಘಾನಿಸ್ತಾನ ಅವಕಾಶ ನೀಡಿದೆ ಎಂದು ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ಭಯೋತ್ಪಾದಕ ಚಟುವಟಿಕೆಯಿಂದ ಸಿಕ್ಕಿಬಿದ್ದ 10 ಚೀನೀ ಪ್ರಜೆಗಳನ್ನು ಚೀನಾ ಸರ್ಕಾರವೇ ಏರ್ಪಡಿಸಿದ ವಿಮಾನದಲ್ಲಿ ದೇಶದಿಂದ ಹೊರಗೆ ಹೋಗಲು ಕಾಬೂಲ್ ಅವಕಾಶ ನೀಡಿದೆ ಎನ್ನಲಾಗಿದೆ.

ಡಿಸೆಂಬರ್ 25ರಂದು ಬೇಹುಗಾರಿಕೆ ಭಾಗವಾಗಿದ್ದಕ್ಕಾಗಿ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ (ಎನ್‌ಡಿಎಸ್‌) 10 ಚೀನೀ ಪ್ರಜೆಗಳನ್ನು ಬಂಧಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು. ಚೀನಾದ ಗೂಢಚಾರ ಸಂಸ್ಥೆ, ರಾಜ್ಯ ಭದ್ರತಾ ಸಚಿವಾಲಯದೊಂದಿಗೆ ಸಂಪರ್ಕ ಹೊಂದಿದೆಯೆಂದು ನಂಬಲಾದ ಕನಿಷ್ಠ ಒಬ್ಬ ಮಹಿಳೆ ಸೇರಿದಂತೆ 10 ಜನರನ್ನು ಬಂಧಿಸಿದ್ದಕ್ಕಾಗಿ ಕ್ಷಮೆಯಾಚಿಸಬೇಕೆಂಬ ಷರತ್ತಿನ ಮೇಲೆ ಚೀನಾವು ಅಫ್ಘಾನಿಸ್ತಾನದಿಂದ ತನ್ನ 10 ಚೀನೀ ಪ್ರಜೆಗಳಿಗೆ ಪಡೆಯಲು ಮುಂದಾಗಿತ್ತು ಎಂದು ವರದಿಯಾಗಿದೆ.

ಆದಾಗ್ಯೂ, ಅಧ್ಯಕ್ಷ ಅಶ್ರಫ್ ಘಾನಿಯ ಅನುಮತಿಯ ನಂತರ ಶನಿವಾರ ದೇಶದಿಂದ ಚಾರ್ಟರ್ಡ್ ವಿಮಾನದಿಂದ ಪ್ರಯಾಣಿಸಲು 10 ಮಂದಿಗೆ ಅನುಮತಿ ನೀಡಲಾಗಿದೆ ಎಂದು ಕಾಬೂಲ್‌ನ ರಾಜತಾಂತ್ರಿಕರು ಮತ್ತು ಭದ್ರತಾ ಅಧಿಕಾರಿಗಳು ಹಿಂದೂಸ್ತಾನ್ ಟೈಮ್ಸ್‌ಗೆ ದೃಢಪಡಿಸಿದ್ದಾರೆ.

ಡಿಸೆಂಬರ್ 10 ರಿಂದ ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆಯಿಂದ ಬಂಧನಕ್ಕೊಳಗಾದಾಗ ಚೀನಾದ ಪ್ರಜೆಗಳ ಕುರಿತು ನಿಭಾಯಿಸಲು ಮೊದಲ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರು ಮಾಜಿ ಎನ್‌ಡಿಎಸ್ ಮುಖ್ಯಸ್ಥರೊಬ್ಬರನ್ನು ನಿಯೋಜಿಸಿದ್ದರು. ಆದರೆ ಈ ಕುರಿತು ಪ್ರಶ್ನಿಸಿದಾಗ ಚೀನಾದ ಪ್ರಜೆಗಳ ಬಂಧನ ಹಾಗೂ ಬಿಡುಗಡೆ ಕುರಿತಾದ ಆರೋಪವನ್ನು ನಿರಾಕರಿಸಿದ್ದಾರೆ.

English summary
Afghanistan has let off the 10 Chinese nationals caught on 10 December for operating a terror cell in the capital city of Kabul and allowed them to leave the country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X