ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರಿಕೆ ಗಂಟೆ: 10 ಜನರಲ್ಲಿ ಒಬ್ಬರಿಗೆ ಕೊರೊನಾವೈರಸ್ ಸೋಂಕು ಪಕ್ಕಾ!

|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್.06: ಜಗತ್ತಿನಾದ್ಯಂತ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಶರವೇಗದಲ್ಲಿ ಹೆಚ್ಚಾಗುತ್ತಿದೆ. ವಿಶ್ವದ ನಾಲ್ಕೂ ದಿಕ್ಕಿನಲ್ಲೂ ಇರುವ ಪ್ರತಿಯೊಂದು ದೇಶಗಳಲ್ಲೂ ಮಹಾಮಾರಿಗೆ ಜನರು ತತ್ತರಿಸಿದ್ದಾರೆ. ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆಯು ಆಘಾತಕಾರಿ ಅಂಶವನ್ನು ಹೊರ ಹಾಕಿದೆ.

ಕೊವಿಡ್-19 ಸೋಂಕಿನಿಂದ ಮುಂದೆ ಮತ್ತಷ್ಟು ಅಪಾಯಕಾರಿ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಅಲ್ಲದೇ ವಿಶ್ವದಲ್ಲಿ ಪ್ರತಿ 10 ಜನರಲ್ಲಿ ಒಬ್ಬರಿಗೆ ಕೊರೊನಾವೈರಸ್ ಸೋಂಕು ಅಂಟಿಕೊಳ್ಳುತ್ತದೆ ಎಂದು ತಿಳಿಸಿದೆ.

ಭಾರತದಲ್ಲಿ 24 ಗಂಟೆಯಲ್ಲಿ 61,267 ಹೊಸ ಕೋವಿಡ್ ಪ್ರಕರಣಭಾರತದಲ್ಲಿ 24 ಗಂಟೆಯಲ್ಲಿ 61,267 ಹೊಸ ಕೋವಿಡ್ ಪ್ರಕರಣ

ವಿಶ್ವ ಆರೋಗ್ಯ ಸಂಸ್ಥೆಯ ಡಾ. ಮೈಕಲ್ ರಿಯಾನ್ ಅವರು, WHO ಕಾರ್ಯಕಾರಿ ಆಡಳಿತ ಮಂಡಳಿಯ 34 ಸದಸ್ಯರ ಜೊತೆಗೆ ಮಹತ್ವದ ಸಭೆ ನಡೆಸಿದ್ದರು. ಈ ವೇಳೆ ಕೊವಿಡ್-19 ಸೋಂಕು ಹರಡುವಿಕೆ ಮತ್ತು ಅದರ ವೇಗದ ಬಗ್ಗೆ ಚರ್ಚೆ ನಡೆಸಲಾಗಿದೆ.

ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಜಗತ್ತಿಗೆ ಅಪಾಯ

ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಜಗತ್ತಿಗೆ ಅಪಾಯ

ವಿಶ್ವದಾದ್ಯಂತ ಕೊರೊನಾವೈರಸ್ ಸೋಂಕಿನಿಂದ ಜನರು ತೀವ್ರ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ. ಮೈಕಲ್ ರಿಯಾನ್ ತಿಳಿಸಿದ್ದಾರೆ. ಮಹಾನಗರ, ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಅನುಗುಣವಾಗಿ ಕೊವಿಡ್-19 ಅಂಕಿ-ಅಂಶಗಳು ಬದಲಾಗುತ್ತಾ ಹೋಗುತ್ತವೆ. ಆದರೆ ಅಂತಿಮವಾಗಿ ಕೊವಿಡ್-19 ಸೋಂಕಿನಿಂದ ಅಪಾಯ ಮಾತ್ರ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಡಿಮೆಯಾಗದು

ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಡಿಮೆಯಾಗದು

ಜಗತ್ತಿನಲ್ಲಿ ಈ ಮೊದಲು ಕಾಣಿಸಿಕೊಂಡ ಸಾಂಕ್ರಾಮಿಕ ಪಿಡುಗು ಸೃಷ್ಟಿಯಾಗಲು ಕಾರಣವಾದ ಮಹಾಮಾರಿ ರೋಗಗಳ ಹರಡುವಿಕೆ ಇಂದಿಗೂ ಕಡಿಮೆಯಾಗಿಲ್ಲ. ಸಾಂಕ್ರಾಮಿಕ ರೋಗಗಳ ಹರಡುವಿಕೆ ಪ್ರಮಾಣ ಎಂದಿಗೂ ಕಡಿಮೆಯಾಗುವುದಿಲ್ಲ. ಅದರ ಹರಡುವಿಕೆ ತಡೆಯಲು ಮತ್ತು ಪ್ರಾಣಹಾನಿ ತಪ್ಪಿಸುವ ದೃಷ್ಟಿಯಿಂದ ಉಪಕರಣಗಳನ್ನು ಸಂಶೋಧಿಸಬೇಕಿದೆ. ಈಗಾಗಲೇ ಸಾವುಗಳ ಪ್ರಮಾಣವನ್ನು ತಗ್ಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜೀವಗಳನ್ನು ಉಳಿಸಬೇಕಿದೆ ಎಂದು ಡಾ. ಮೈಕಲ್ ರಿಯಾನ್ ತಿಳಿಸಿದ್ದಾರೆ.

ಜಗತ್ತಿನ ಯಾವ ರಾಷ್ಟ್ರಗಳಲ್ಲಿ ಕೊರೊನಾವೈರಸ್ ಹೇಗಿದೆ?

ಜಗತ್ತಿನ ಯಾವ ರಾಷ್ಟ್ರಗಳಲ್ಲಿ ಕೊರೊನಾವೈರಸ್ ಹೇಗಿದೆ?

ಕೊರೊನಾವೈರಸ್ ಸೋಂಕಿತ ಅಟ್ಟಹಾಸ ಇಡೀ ಜಗತ್ತನ್ನು ವ್ಯಾಪಿಸಿದೆ. ಆಗ್ನೇಯ ಏಷ್ಯಾ ಭಾಗದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಯುರೋಪಿಯನ್ ಮತ್ತು ಪೂರ್ವ ಮೆಡಿಟೇರಿಯನ್ ಪ್ರದೇಶಗಳಲ್ಲಿ ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಫ್ರಿಕಾ ಮತ್ತು ಪಶ್ಚಿಮ ಫೆಸಿಫಿಕ್ ಪ್ರದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಶರವೇಗದಲ್ಲಿ ಹೆಚ್ಚಾಗುತ್ತಿವೆ ಎಂದು ಡಾ. ಮೈಕಲ್ ರಿಯಾನ್ ಮಾಹಿತಿ ನೀಡಿದ್ದಾರೆ.

ಪ್ರತಿ 10 ಜನರಲ್ಲಿ ಒಬ್ಬರಿಗೆ ಕೊವಿಡ್-19 ಸೋಂಕು

ಪ್ರತಿ 10 ಜನರಲ್ಲಿ ಒಬ್ಬರಿಗೆ ಕೊವಿಡ್-19 ಸೋಂಕು

ಪ್ರಸ್ತುತ ನಡೆಸಿದ ಅಧ್ಯಯನಗಳ ಪ್ರಕಾರ, ವಿಶ್ವದ ಜನಸಂಖ್ಯೆಯ ಶೇ.10ರಷ್ಟು ಜನರಿಗೆ ಕೊರೊನಾವೈರಸ್ ಸೋಂಕು ಅಂಟಿಕೊಳ್ಳುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಅಂದರೆ ಜಗತ್ತಿನ ಪ್ರತಿ 10 ಜನರಲ್ಲಿ ಒಬ್ಬರಿಗೆ ಕೊವಿಡ್-19 ಸೋಂಕು ಅಂಟಿಕೊಳ್ಳುತ್ತದೆ. ವಿಶ್ವದ ಒಟ್ಟು ಜನಸಂಖ್ಯೆ 760 ಕೋಟಿಯಾಗಿದ್ದು, ಈ ಪೈಕಿ 76 ಕೋಟಿ ಜನರಿಗೆ ಮಹಾಮಾರಿ ಅಂಟಿಕೊಳ್ಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ.

ವಿಶ್ವದಲ್ಲಿನ ಕೊವಿಡ್-19 ಪ್ರಕರಣಗಳ ಅಂಕಿ-ಅಂಶಗಳು

ವಿಶ್ವದಲ್ಲಿನ ಕೊವಿಡ್-19 ಪ್ರಕರಣಗಳ ಅಂಕಿ-ಅಂಶಗಳು

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜಿಸಿದ ಸಂಖ್ಯೆಗೆ ದಿನೇ ದಿನೆ ಸನ್ನಿಹಿತವಾಗುತ್ತಿದೆ. ಜಗತ್ತಿನಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 3,57,02,089ಕ್ಕೆ ಏರಿಕೆಯಾಗಿದೆ. ಕೊವಿಡ್-19 ಮಹಾಮಾರಿಗೆ 10,45,955ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ. ವೈದ್ಯಕೀಯ ವಲಯದಲ್ಲಿನ ಸಂಶೋಧನೆ ಮತ್ತು ಯಶಸ್ವಿ ಚಿಕಿತ್ಸೆಯ ಫಲವಾಗಿ ಈವರೆಗೆ 2,68,70,774 ಗುಣಮುಖರಾಗಿದ್ದಾರೆ.

Recommended Video

Muttappa Rai ಪುತ್ರ Ricky Rai ಮನೆ ಮೇಲೆ CCB ದಾಳಿ | Oneindia kannada

English summary
1 Person In Every 10 peoples Worldwide May Have Been Infected By Coronavirus: WHO Warns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X