ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಾದ್ಯಂತ 1.20 ಲಕ್ಷ ಜನರು ಕೊರೊನಾದಿಂದ ಸಾವು

|
Google Oneindia Kannada News

ದೆಹಲಿ, ಏಪ್ರಿಲ್ 14: ಕೊರೊನಾ ವೈರಸ್‌ ಮಹಾಮಾರಿಗೆ ಜಗತ್ತಿನಾದ್ಯಂತ 1.20 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಶೇಕಡಾ 70ರಷ್ಟು ಜನರು ಯೂರೋಪ್ ರಾಷ್ಟ್ರದವರು ಎನ್ನುವುದು ಗಮನಾರ್ಹ.

ಪ್ರಪಂಚಾದ್ಯಂತ 19 ಲಕ್ಷ (1,963,084) ಜನರಿಗೆ ಕೊವಿಡ್ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ 1,23,483 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 4,63,028 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎನ್ನುವುದು ಸಮಾಧಾನಕರ ಸಂಗತಿ.

ಬಾಂದ್ರಾದ ವಲಸೆ ಕಾರ್ಮಿಕರಿಗೆ ಸಿಎಂ ಉದ್ಧವ್ ಠಾಕ್ರೆ ಅಭಯಬಾಂದ್ರಾದ ವಲಸೆ ಕಾರ್ಮಿಕರಿಗೆ ಸಿಎಂ ಉದ್ಧವ್ ಠಾಕ್ರೆ ಅಭಯ

ಅಮೆರಿಕ ಒಂದರಲ್ಲಿ 5 ಲಕ್ಷಕ್ಕೂ (5,98,185) ಹೆಚ್ಚು ಸೋಂಕಿತರು ದಾಖಲಾಗಿದ್ದು, 24,641 ಜನರು ಸಾವನ್ನಪ್ಪಿದ್ದಾರೆ. ಅಮೆರಿಕ ಬಿಟ್ಟರೆ ಇಟಲಿಯಲ್ಲಿ 1.6 ಲಕ್ಷ (162,488) ಜನರಲ್ಲಿ ಸೋಂಕು ಪತ್ತೆಯಾಗಿದ್ದು, 21,067 ಜನರು ಮೃತಪಟ್ಟಿದ್ದಾರೆ.

1 lakh 20 thousand People Died From Covid 19

ಇನ್ನು ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1463 ಜನರಲ್ಲಿ ಸೋಂಕು ದೃಢವಾಗಿದ್ದು, 29 ಜನರು ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 10,815ಕ್ಕೆ ಏರಿಕೆಯಾಗಿದೆ. ಅದರಲ್ಲಿ 9272 ಪ್ರಕರಣ ಚಾಲ್ತಿಯಲ್ಲಿದ್ದು, 1190 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 353 ಜನರು ಮೃತಪಟ್ಟಿದ್ದಾರೆ.

English summary
More than 1.20 lakh people died from coronavirus attack in all over world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X