ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿಗೆ ವಿದೇಶದಲ್ಲಿ ಮೊದಲ ಭಾರತೀಯ ಬಲಿ

|
Google Oneindia Kannada News

ಇರಾನ್, ಮಾರ್ಚ್ 19: ಜಗತ್ತಿನಾದ್ಯಂತ ನರಬಲಿ ಪಡೆಯುತ್ತಿರುವ ಕೊರೊನಾ ವೈರಸ್‌ಗೆ ಸುಮಾರು 9 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಇಂದು ನಾಲ್ಕನೇ ಸಾವು ಸಂಭವಿಸಿದೆ. ಪಂಜಾಬ್‌ನಲ್ಲಿ ವೃದ್ದನೊಬ್ಬ ಕೊರೊನಾ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ಇದೀಗ, ವಿದೇಶದಲ್ಲಿ ಮೊದಲ ಭಾರತೀಯ ಕೊರೊನಾಗೆ ಬಲಿಯಾಗಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಇರಾನ್‌ ದೇಶದಲ್ಲಿದ್ದ ಭಾರತೀಯ ಕೊರೊನಾದಿಂದ ನಿಧನನಾಗಿದ್ದಾನೆ ಎಂದು ಪಿಟಿಐ ವರದಿ ಮಾಡಿದೆ.

ಎಚ್ಚರ ಎಚ್ಚರ... ಕೊರೊನಾ ಬಗ್ಗೆ ಉಡಾಫೆ ಮಾಡುವ ಯುವ ಜನರೇ ಇಲ್ನೋಡಿಎಚ್ಚರ ಎಚ್ಚರ... ಕೊರೊನಾ ಬಗ್ಗೆ ಉಡಾಫೆ ಮಾಡುವ ಯುವ ಜನರೇ ಇಲ್ನೋಡಿ

ಕೊರೊನಾ ಸೋಂಕು ದೃಢಪಟ್ಟಿದ್ದ ಹಿನ್ನೆಲೆ ಐಸೋಲೇಶನ್ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಇರಾನ್ ವಿದೇಶಾಂಗ ಕಚೇರಿ ಮಾಹಿತಿ ನೀಡಿದೆ ಎಂದು ಹೇಳಲಾಗಿದೆ. ಆ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

1 Indian Who Tested Positive For Covid19 Has Died In Iran

ಸದ್ಯ ಭಾರತದಲ್ಲಿ 197ಕ್ಕೂ ಅಧಿಕ ಕೊರೊನಾ ಕೇಸ್‌ಗಳ ದಾಖಲಾಗಿದೆ. ದೇಶದಲ್ಲಿ ಒಟ್ಟು ನಾಲ್ಕು ಜನ ನಿಧನರಾಗಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಹಾಗೂ ಪಂಜಾಬ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

48 ಗಂಟೆ ಬಳಿಕ ಕೊಡಗಿನ ವ್ಯಕ್ತಿಗೆ ಕೊರೊನಾ ವೈರಸ್ ಕನ್ಫರ್ಮ್! 48 ಗಂಟೆ ಬಳಿಕ ಕೊಡಗಿನ ವ್ಯಕ್ತಿಗೆ ಕೊರೊನಾ ವೈರಸ್ ಕನ್ಫರ್ಮ್!

ಇನ್ನು ಕರ್ನಾಟಕದಲ್ಲಿ ಒಟ್ಟು 15 ಜನರಲ್ಲಿ ಸೋಂಕಿ ಪತ್ತೆಯಾಗಿದೆ. ಅದರಲ್ಲಿ ಕಲುಬುರ್ಗಿಯಲ್ಲಿ ಒಬ್ಬ ವ್ಯಕ್ತಿ ನಿಧನರಾಗಿದ್ದರು. ಉಳಿದ 14 ಜನರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾ ವಹಿಸಲಾಗಿದೆ. ಕೊಡಗಿನಲ್ಲಿಂದು 15ನೇ ಕೇಸ್ ಕಾಣಿಸಿಕೊಂಡಿದೆ.

English summary
One Indian who tested positive for coronavirus has died in Iran: Ministry of External Affairs official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X